ಆ್ಯಪ್ನಗರ

ಸಂಕ್ರಾಂತಿ ಬಳಿಕ ಹಾಲು ಉತ್ಪಾದಕರಿಗೆ 2 ರೂ. ಹೆಚ್ಚುವರಿ ಪ್ರೋತ್ಸಾಹ ಧನ, ಬಮೂಲ್‌ ಚಿಂತನೆ!

ಸಂಕ್ರಾಂತಿ ಬಳಿಕ ಹಾಲು ಉತ್ಪಾದಕರಿಗೆ 2 ರೂ. ಹೆಚ್ಚುವರಿ ಪ್ರೋತ್ಸಾಹ ಧನ ನೀಡಲು ಬಮೂಲ್‌ ಚಿಂತನೆ ನಡೆಸಿದೆ. ಪ್ರಸ್ತುತ ಬಮೂಲ್‌ ತನ್ನ ಸದಸ್ಯರಿಗೆ ಪ್ರತಿ ಲೀ.ಗೆ ಶೇ. 3.5 ಕೊಬ್ಬಿನಾಂಶವಿರುವ ಹಾಲಿಗೆ 24 ರೂ. ಹಾಗೂ ಶೇ. 4.2ರಷ್ಟು ಕೊಬ್ಬಿನಾಂಶವುಳ್ಳ ಹಾಲಿಗೆ 25.50 ರೂ. ದರದಂತೆ ಹಣ ಪಾವತಿಸುತ್ತಿದೆ.

Vijaya Karnataka Web 30 Nov 2020, 7:28 am
ಬೆಂಗಳೂರು: ಮುಂದಿನ ವರ್ಷದ ಸಂಕ್ರಾಂತಿ ಬಳಿಕ ಹಾಲು ಉತ್ಪಾದಕರಿಗೆ ಪ್ರತಿ ಲೀ.ಗೆ ಎರಡು ರೂ. ಹೆಚ್ಚುವರಿ ಪ್ರೋತ್ಸಾಹಧನ ವಿತರಿಸಲು ಬೆಂಗಳೂರು ಹಾಲು ಒಕ್ಕೂಟ(ಬಮೂಲ್‌) ಚಿಂತನೆ ನಡೆಸಿದೆ.
Vijaya Karnataka Web ಸಾಂದರ್ಭಿಕ ಚಿತ್ರ


ಕೆಲ ತಿಂಗಳ ಹಿಂದೆ ಪ್ರತಿ ಲೀ.ಗೆ 2 ರೂ. ದರ ಕಡಿತ ಮಾಡುವ ನಿರ್ಧಾರ ಕೈಗೊಂಡಿತ್ತು. ಈಗ ಮತ್ತೆ ಆ ಎರಡು ರೂ. ಹಣವನ್ನು ರೈತರಿಗೆ ವಿತರಿಸಲಾಗುತ್ತದೆ. ಈ ಹಣ ಮುಂದಿನ ಜನವರಿ ನಂತರವೇ ಅಧಿಕೃತವಾಗಿ ವಿತರಿಸುವ ಸಾಧ್ಯತೆ ಇದೆ. ಪ್ರತಿ ವರ್ಷ ಬೇಸಿಗೆ ವೇಳೆ ಹಾಲು ಸಂಗ್ರಹ ಇಳಿಕೆಯಾದಾಗ ಹೈನುಗಾರರಿಗೆ ಪ್ರತಿ ಲೀ.ಗೆ 2 ರೂ. ನೀಡಲಾಗುತ್ತದೆ. ಮುಂಗಾರಿನ ಬಳಿಕ ಹೆಚ್ಚಿನ ಹಾಲು ಸಂಗ್ರಹವಾದಲ್ಲಿ ಆ 2 ರೂ. ಮೊತ್ತವನ್ನು ಕಡಿತಗೊಳಿಸಲಾಗುತ್ತದೆ. ಈ ಪದ್ಧತಿ ನಿರಂತರವಾಗಿ ನಡೆದುಕೊಂಡು ಬರುತ್ತಿದೆ.
ಅಯೋಧ್ಯೆಯ ಗೋಪಾಲ ಗೋಶಾಲೆಯಲ್ಲಿ ದೇಶ, ವಿದೇಶಗಳ ನೂರಾರು ತಳಿ ಗೋವುಗಳ ಸಮಾಗಮ..!

ಪ್ರಸ್ತುತ ಬಮೂಲ್‌ ತನ್ನ ಸದಸ್ಯರಿಗೆ ಪ್ರತಿ ಲೀ.ಗೆ ಶೇ. 3.5 ಕೊಬ್ಬಿನಾಂಶವಿರುವ ಹಾಲಿಗೆ 24 ರೂ. ಹಾಗೂ ಶೇ. 4.2ರಷ್ಟು ಕೊಬ್ಬಿನಾಂಶವುಳ್ಳ ಹಾಲಿಗೆ 25.50 ರೂ. ದರದಂತೆ ಹಣ ಪಾವತಿಸುತ್ತಿದೆ.
ರೈತರಿಂದ ಖರೀದಿಸುವ ಹಾಲಿನ ದರವನ್ನು ಹೆಚ್ಚಿಸುವಂತೆ ಕೆಎಂಎಫ್‌ ನಿರ್ದೇಶಕರ ಆಗ್ರಹ

ಈ ಕುರಿತು 'ವಿಕ'ಗೆ ಪ್ರತಿಕ್ರಿಯಿಸಿರುವ ಬಮೂಲ್‌ ಅಧ್ಯಕ್ಷ ನರಸಿಂಹಮೂರ್ತಿ ''ಕೊರೊನಾದಿಂದಾಗಿ ಸಂಸ್ಥೆ ನಷ್ಟದತ್ತ ಮುಖ ಮಾಡಿದ್ದು, ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಹಾಲು ಉತ್ಪಾದಕರ ಹಿತಾಸಕ್ತಿ ರಕ್ಷಣೆಗೆ ಸಂಸ್ಥೆ ಬದ್ಧವಾಗಿದ್ದು, ಮುಂದಿನ ಜನವರಿ ನಂತರ ಪ್ರತಿ ಲೀ.ಗೆ 2 ರೂ. ಪ್ರೋತ್ಸಾಹಧನ ವಿತರಿಸುವ ಚಿಂತನೆ ಇದೆ. ಈ ಪ್ರಸ್ತಾಪವನ್ನು ಒಕ್ಕೂಟದ ಮಂಡಳಿ ಸಭೆಯಲ್ಲಿಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ