ಆ್ಯಪ್ನಗರ

ದಟ್ಟ ಮಂಜು: 39 ವಿಮಾನಗಳ ಹಾರಾಟ ವ್ಯತ್ಯಯ

39 ವಿಮಾನಗಳು ಹಾರಾಟದಲ್ಲಿ ವಿಳಂಬವಾಗಿದ್ದರಿಂದ ಸಾವಿರಾರು ಪ್ರಯಾಣಿಕರು ಆತಂಕಕ್ಕೊಳಗಾದರು. ಹವಾಮಾನದ ವೈಪರಿತ್ಯದಿಂದ ವಿಮಾನಗಳ ಹಾರಾಟ ವಿಳಂಬವಾಗಿದೆ. ಇದಕ್ಕೆ ಪ್ರಯಾಣಿಕರು ಸಹಕರಿಸಬೇಕು ಎಂದು ವಿಮಾನ ನಿಲ್ದಾಣದ ಸಿಬ್ಬಂದಿ ಮನವಿ ಮಾಡಿದರು. ಈ ಅವಧಿಯಲ್ಲಿ ಯಾವುದೇ ವಿಮಾನ ಬಂದಿಳಿಯಲಿಲ್ಲ.

Vijaya Karnataka 28 Nov 2018, 7:36 am
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿ ಮಂಗಳವಾರ ಮುಂಜಾನೆ ಮಂಜು ಮುಸುಕಿದ ವಾತಾವರಣದಿಂದ 39 ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಯಿತು.
Vijaya Karnataka Web kia


ಚಳಿಗಾಲದಲ್ಲಿ ಪ್ರತಿ ವರ್ಷ ಮುಂಜಾನೆ ಈ ಸಮಸ್ಯೆ ತಲೆದೋರಿ ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿ ಪ್ರಯಾಣಿಕರು ಸಮಸ್ಯೆಗೆ ಸಿಲುಕುತ್ತಿದ್ದಾರೆ. ಮಂಗಳವಾರ ಅದೇ ರೀತಿ ಆಕಾಶದಲ್ಲಿ ದಟ್ಟವಾದ ಮಂಜು ಕವಿದಿದ್ದರಿಂದ ಮಂದ ಬೆಳಕಿನಿಂದ ಮುಂಜಾನೆ 6.32ರಿಂದ 6.48 ರವರೆಗೆ 14 ನಿಮಿಷಗಳ ಕಾಲ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಯಾವುದೇ ವಿಮಾನ ಟೇಕ್‌ ಆಫ್‌ ಆಗಲಿಲ್ಲ. ತುರ್ತು ಕೆಲಸಗಳಿಗೆ ಬೇರೆ ಬೇರೆ ನಗರಗಳಿಗೆ ಹೋಗುವ ಧಾವಂತದಲ್ಲಿದ್ದ ಪ್ರಯಾಣಿಕರು ವಿಮಾನ ವಿಳಂಬ ಹಾರಾಟದಿಂದ ತೊಂದರೆಗೊಳಗಾದರು.

39 ವಿಮಾನಗಳು ಹಾರಾಟದಲ್ಲಿ ವಿಳಂಬವಾಗಿದ್ದರಿಂದ ಸಾವಿರಾರು ಪ್ರಯಾಣಿಕರು ಆತಂಕಕ್ಕೊಳಗಾದರು. ಹವಾಮಾನದ ವೈಪರಿತ್ಯದಿಂದ ವಿಮಾನಗಳ ಹಾರಾಟ ವಿಳಂಬವಾಗಿದೆ. ಇದಕ್ಕೆ ಪ್ರಯಾಣಿಕರು ಸಹಕರಿಸಬೇಕು ಎಂದು ವಿಮಾನ ನಿಲ್ದಾಣದ ಸಿಬ್ಬಂದಿ ಮನವಿ ಮಾಡಿದರು. ಈ ಅವಧಿಯಲ್ಲಿ ಯಾವುದೇ ವಿಮಾನ ಬಂದಿಳಿಯಲಿಲ್ಲ. ಹವಾಮಾನ ವೈಪರಿತ್ಯ ಕಂಡು ಬಂದಾಗ ವಿಮಾನಗಳನ್ನು ಚೆನ್ನೈ ಇಲ್ಲವೇ ಹೈದರಾಬಾದ್‌ ವಿಮಾನ ನಿಲ್ದಾಣದ ಕಡೆಗೆ ಮಾರ್ಗ ಬದಲಿಸಲಾಗುತ್ತದೆ. ಸದ್ಯ ಮಂಗಳವಾರ ಯಾವುದೇ ವಿಮಾನಗಳನ್ನು ಬೇರೆ ನಿಲ್ದಾಣಕ್ಕೆ ರವಾನಿಸಲಿಲ್ಲ ಎಂದು ವಿಮಾನ ನಿಲ್ದಾಣ ಸಿಬ್ಬಂದಿ ತಿಳಿಸಿದ್ದಾರೆ.

ಚಳಿಗಾಲ ಮುಗಿಯುವವರೆಗೂ ಕನಿಷ್ಠ ಮೂರು ತಿಂಗಳು ಆಗಾಗ ಈ ಸಮಸ್ಯೆ ತಲೆದೋರುವ ಸಾಧ್ಯತೆ ಇದೆ. ಹಿಂದಿನ ವರ್ಷವೂ ವಾರಕ್ಕೆ ಮೂರು ದಿನ ಈ ಸಮಸ್ಯೆ ಕಾಣಿಸಿಕೊಂಡು ವಿಮಾನಗಳು ವಿಳಂಬ ಆಗಿವೆ. ಮಂಜು ಕವಿದು ಮಂದ ಬೆಳಕು ಸಮಸ್ಯೆ ನಿವಾರಿಸಲು ಕೆಐಎ ತಂತ್ರಜ್ಞಾನ ಅಳವಡಿಸಿಕೊಳ್ಳಲು ನಿರ್ಧರಿಸಿದೆ. ಅಂದರೆ ವಿಮಾನ ಹಾರಾಟಕ್ಕೆ ಬೇಕಾದ ಬೆಳಕು ಸ್ಪಷ್ಟವಾಗಿ ಕಾಣುವಂತೆ ಮಂಜಿನ ವಾತಾವರಣ ತಿಳಿಗೊಳಿಸುವ ಅತ್ಯಾಧುನಿಕ ತಂತ್ರಜ್ಞಾನ ವಿದೇಶಿ ವಿಮಾನ ನಿಲ್ದಾಣಗಳಲ್ಲಿ ಇದೆ. ಅದೇ ರೀತಿ ಮುಂದಿನ ದಿನಗಳಲ್ಲಿ ಕೆಐಎನಲ್ಲಿಯೂ ಅಳವಡಿಸಿಕೊಳ್ಳಲು ಸಿದ್ಧತೆ ನಡೆದಿದೆ ಎಂದು ಕೆಐಎ ಅಧಿಕಾರಿಗಳು ಹೇಳುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ