ಆ್ಯಪ್ನಗರ

ಬೆಳ್ಳಂದೂರು ಕೆರೆಯಲ್ಲಿ ಬೆಂಕಿ: 4 ಮಂದಿ ಬಂಧನ

ನಗರದ ಬೆಳ್ಳಂದೂರು ಕೆರೆಯಲ್ಲಿ ಕೇಬಲ್‌ ವೈರ್‌ಗಳನ್ನು ಬೆಂಕಿಯಲ್ಲಿ ಸುಟ್ಟು ತಾಮ್ರದ ತಂತಿಗಳನ್ನು ಸಂಗ್ರಹಿಸುತ್ತಿದ್ದ ತಮಿಳುನಾಡು ಮೂಲದ ನಾಲ್ವರನ್ನು ಬಿಬಿಎಂಪಿಯಿಂದ ನೇಮಿಸಲ್ಪಟ್ಟಿರುವ ಮಾರ್ಷಲ್‌ಗಳು ಗುರುವಾರ ಮುಂಜಾನೆ ಬಂಧಿಸಿ, ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

Vijaya Karnataka 7 Dec 2018, 5:00 am
ಬೆಂಗಳೂರು: ನಗರದ ಬೆಳ್ಳಂದೂರು ಕೆರೆಯಲ್ಲಿ ಕೇಬಲ್‌ ವೈರ್‌ಗಳನ್ನು ಬೆಂಕಿಯಲ್ಲಿ ಸುಟ್ಟು ತಾಮ್ರದ ತಂತಿಗಳನ್ನು ಸಂಗ್ರಹಿಸುತ್ತಿದ್ದ ತಮಿಳುನಾಡು ಮೂಲದ ನಾಲ್ವರನ್ನು ಬಿಬಿಎಂಪಿಯಿಂದ ನೇಮಿಸಲ್ಪಟ್ಟಿರುವ ಮಾರ್ಷಲ್‌ಗಳು ಗುರುವಾರ ಮುಂಜಾನೆ ಬಂಧಿಸಿ, ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
Vijaya Karnataka Web 4 person who fired wires in bellanduru lakebed
ಬೆಳ್ಳಂದೂರು ಕೆರೆಯಲ್ಲಿ ಬೆಂಕಿ: 4 ಮಂದಿ ಬಂಧನ


ಬೆಳ್ಳಂದೂರು ಕೆರೆಯಲ್ಲಿ ಪದೇಪದೆ ಅಗ್ನಿ ಅನಾಹುತಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕೆರೆಯ ಕಾವಲಿಗೆ ಪಾಲಿಕೆಯು ಮಾರ್ಷಲ್‌ಗಳನ್ನು ನಿಯೋಜಿಸಿದೆ. ಇವರು ಹಗಲಿರುಳು ಕೆರೆ ಸುತ್ತಲೂ ಗಸ್ತು ತಿರುಗುತ್ತಿದ್ದು, ಅಕ್ರಮ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಇದರಿಂದ ಕೆರೆಗೆ ಕಸ ತಂದು ಸುರಿಯುವುದು, ಒಣ ಹುಲ್ಲಿಗೆ ಬೆಂಕಿ ಇಡುವ ದುಷ್ಕರ್ಮಿಗಳ ಹಾವಳಿಗೆ ಕಡಿವಾಣ ಬಿದ್ದಿದೆ.

ಮಾರ್ಷಲ್‌ಗಳು ಗಸ್ತು ತಿರುಗುತ್ತಿದ್ದ ವೇಳೆ ಎಚ್‌ಎಸ್‌ಆರ್‌ ಲೇಔಟ್‌ ಭಾಗದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವುದು ಕಣ್ಣಿಗೆ ಬಿದ್ದಿದೆ. ತಕ್ಷಣ ಬೆಂಕಿ ನಂದಿಸಲು ಸ್ಥಳಕ್ಕೆ ಹೋದಾಗ ತಮಿಳುನಾಡು ಮೂಲದ ಪಾಂಡುರಂಗನ್‌ ಮತ್ತು ಆತನ ಮೂವರು ಸಹಚರರು ಕೇಬಲ್‌ಗಳನ್ನು ಸುಟ್ಟು ತಾಮ್ರದ ತಂತಿಗಳನ್ನು ಹೊರ ತೆಗೆಯುತ್ತಿದ್ದರು. ಕೂಡಲೇ ಮಾರ್ಷಲ್‌ಗಳು ನಾಲ್ವರನ್ನು ವಶಕ್ಕೆ ಪಡೆದು, ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸ್‌ ಠಾಣೆಗೆ ಒಪ್ಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ