ಆ್ಯಪ್ನಗರ

ಕುಟುಂಬವನ್ನೇ ತಲ್ಲಣಗೊಳಿಸಿತು 4 ವರ್ಷದ ಹಿಂದಿನ ವಾಟ್ಸ್ಆ್ಯಪ್ ಸಂದೇಶ

'ಚಿಕ್ಕ ಬಾಲಕನೊಬ್ಬ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಿಮ್ಸ್‌ಗೆ ದಾಖಲಾಗಿದ್ದಾನೆ. ತಲೆಗೆ ಗಂಭೀರ ಗಾಯವಾಗಿದ್ದು, ಆತನ ಪೋಷಕರ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ.ದಯವಿಟ್ಟು ಈ ಸಂದೇಶವನ್ನು ಫಾರ್ವರ್ಡ್ ಮಾಡುವ ಮೂಲಕ ಆತನ ತಂದೆತಾಯಿಗಳು ಆಸ್ಪತ್ರೆಗೆ ತಲುಪುವಂತಾಗಲು ನೆರವಾಗಿ. ದಯವಿಟ್ಟು ಇದನ್ನು ಶೇರ್ ಮಾಡಿ ಎಂಬುದು ನನ್ನ ಮನವಿ''

Bangalore Mirror Bureau 27 Jul 2018, 11:48 am
ಬೆಂಗಳೂರು: ''ಚಿಕ್ಕ ಬಾಲಕನೊಬ್ಬ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಿಮ್ಸ್‌ಗೆ ದಾಖಲಾಗಿದ್ದಾನೆ. ತಲೆಗೆ ಗಂಭೀರ ಗಾಯವಾಗಿದ್ದು, ಆತನ ಪೋಷಕರ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ.ದಯವಿಟ್ಟು ಈ ಸಂದೇಶವನ್ನು ಫಾರ್ವರ್ಡ್ ಮಾಡುವ ಮೂಲಕ ಆತನ ತಂದೆತಾಯಿಗಳು ಆಸ್ಪತ್ರೆಗೆ ತಲುಪುವಂತಾಗಲು ನೆರವಾಗಿ. ದಯವಿಟ್ಟು ಇದನ್ನು ಶೇರ್ ಮಾಡಿ ಎಂಬುದು ನನ್ನ ಮನವಿ''( This boy is admitted in KIMS. He is hurt in the head and is in an unconscious state. We do not know his whereabouts. Please forward this message so that this boy may be identified by his parents and they may reach the hospital. Please, I humbly request you all to share this)- ನಾಲ್ಕು ವರ್ಷದ ಹಿಂದಿನ ಈ ವಾಟ್ಸ್ಆ್ಯಪ್ ಸಂದೇಶವೊಂದು ಮರಳಿ ಹರಿದಾಡಿ ಕುಟುಂಬವೊಂದನ್ನು ಬರೋಬ್ಬರಿ 3 ಗಂಟೆಗಳ ಕಾಲ ತಲ್ಲಣಕೆ ದೂಡಿದ ಪ್ರಸಂಗ ಬೆಂಗಳೂರಿನಲ್ಲಿ ನಡೆದಿದೆ.
Vijaya Karnataka Web Whatsapp


25 ಸೆಕೆಂಡ್‌ಗಳಲ್ಲಿ 25 ಜನರಿಂದ ಶೇರ್ ಆದ ಈ ಸಂದೇಶ ಬನಶಂಕರಿ ಮೂರನೇ ಹಂತದ ನಿವಾಸಿಯಾಗಿರುವ ಉದ್ಯಮಿ ಪ್ರಶಾಂತ್ ಸಂಬರ್ಗಿ (42) ಅವರನ್ನು ತಲುಪಿದಾಗ ದೊಡ್ಡ ಆಘಾತಕ್ಕೆ ದಾರಿ ಮಾಡಿಕೊಟ್ಟಿತು. ಮುಂಜಾನೆ 9.30ಕ್ಕೆ ಈ ಸಂದೇಶ ನೋಡಿದ ಪ್ರಶಾಂತ್ ಹೌಹಾರಿ ಹೋದರು. ಸಂದೇಶದ ಜತೆಗಿದ್ದ ಚಿತ್ರ ಅವರ ತಂಗಿ ಮಗುವನ್ನು ಹೋಲುತ್ತಿತ್ತು. ತಕ್ಷಣ ತಮ್ಮ ತಂಗಿಗೆ ಫೋನಾಯಿಸಿ ವಿಷಯ ಮುಟ್ಟಿಸಿದ್ದಾರೆ. ಜತೆಗೆ ಸಂದೇಶ ಕಳುಹಿಸಿದವರಿಗೂ ಸಹ ಕರೆ ಮಾಡಿದ್ದಾರೆ.

ಸಹಜವಾಗಿ ಹೌಹಾರಿ ಹೋದ ಪ್ರಶಾಂತ್ ಸಹೋದರಿ ಮಗ ಶಾಲೆ ತಲುಪಿದ್ದಾನೆಂದು ಶಾಲೆಯಿಂದ ಸಂದೇಶ ಕೂಡ ಬಂದಿಲ್ಲವೆಂಬುದನ್ನು ನೆನಪಿಸಿಕೊಂಡು ತಲ್ಲಣಿಸಿ ಬಿಟ್ಟರು. ಕಚೇರಿಗೆ ಹೋಗಿದ್ದ ಪತಿಗೆ ಕರೆ ಮಾಡಿ ಆಕೆ ಅತ್ತಿದ್ದು, ಮೀಟಿಂಗ್‌ನಲ್ಲಿದ್ದ ಪತಿ ಎಲ್ಲ ಕೆಲಸವನ್ನು ಅರ್ಧಕ್ಕೆ ಬಿಟ್ಟು ಮಗುವಿನ ಶಾಲೆಯತ್ತ ದೌಢಾಯಿಸಿದ್ದಾರೆ.

ಏತನ್ಮಧ್ಯೆ ಪ್ರಶಾಂತ್ ಕಿಮ್ಸ್‌ಗೆ ಕೂಡ ಫೋನ್ ಕರೆ ಮಾಡಿದ್ದು, ಕಾಕತಾಳೀಯವಾಗಿ ಅಲ್ಲೂ ಸಹ ಪೋಷಕರ ಗುರುತು ಪತ್ತೆಯಾಗದ ಮಗುವೊಂದು ದಾಖಲಾಗಿತ್ತು.ಮಗುವಿನ ಸುಧಾರಿಸಿಕೊಳ್ಳುತ್ತಿದೆ ಎಂದು ಅಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ. ಆದರೆ ಅಷ್ಟಕ್ಕೆ ಸುಮ್ಮನಾಗದ ಪ್ರಶಾಂತ್ ತಮಗೆ ಮೆಸೇಜ್ ಬಂದ ಜಾಡು ಹಿಡಿದು ಫೋನ್ ಕರೆ ಮಾಡುತ್ತ ಸಾಗಿದ್ದಾರೆ.

ಪ್ರಶಾಂತ್ ಸಹೋದರಿ ಮತ್ತು ಆಕೆಯ ಪತಿ ಶಾಲೆಗೆ ಹೋಗಿ ನೋಡಿದಾಗ ಮಗು ಆರೋಗ್ಯವಾಗಿದ್ದನ್ನು ಕಂಡು ನಿರಾಳರಾಗಿದ್ದಾರೆ. ವಿದ್ಯಾವಂತರಾದ ನೋವು ಇಂತಹ ಸುಳ್ಳು ಸಂದೇಶಗಳನ್ನು ನಂಬಿ ಹೆದರಿಕೊಂಡರೆ ಹೇಗೆ? ಎಂದು ಪ್ರಶ್ನಿಸಿದ ಕಾಲೇಜು ಪ್ರಾಚಾರ್ಯರು ಸರ್ವರ್ ಡೌನ್ ಆಗಿದ್ದರಿಂದ ಮಗು ಶಾಲೆಗೆ ತಲುಪಿದ ಸಂದೇಶ ಕಳುಹಿಸಿಲ್ಲ, ಪ್ರಶಾಂತ್ ಸಹೋದರಿ ಮತ್ತು ಬಾವನಿಗೆ ಹೇಳಿದ್ದಾರೆ.

ಕೊನೆಗೂ ಆ ಸಂದೇಶವನ್ನು ಮೊದಲು ಕಳುಹಿಸಿದವರು ಯಾರೆಂದು ಶೋಧಿಸಿದ ಪ್ರಸಾಂಥ್ ನೀವ್ಯಾಕೆ ಈ ಸಂದೇಶವನ್ನು ಕಳುಹಿಸಿದಿರಿ ಎಂದು ಕೇಳಿದಾಗ ಅವರಿಂದ ಬಂದ ಉತ್ತರ ಶಾಕ್ ತರಿಸುವಂತಿತ್ತು. ಹೊಸ ಮೊಬೈಲ್ ಕೊಂಡುಕೊಂಡು ವಾಟ್ಸ್‌ಆ್ಯಪ್ ಬ್ಯಾಕ್ ಅಪ್ ಮಾಡಿದ ಬಳಿಕ ವಾಟ್ಸ್‌ಅಪ್ ಕೆಲಸ ಮಾಡುತ್ತದೆಯೇ ಎಂದು ತಿಳಿದುಕೊಳ್ಳಲು ಈ ಸಂದೇಶ ಕಳುಹಿಸಿದೆ ಎಂದವರು ಹೇಳಿದ್ದಾರೆ.

ಸಣ್ಣ ಪ್ರಮಾದವೊಂದು ಕುಟುಂಬವನ್ನು ಮೂರು ಗಂಟೆಗೂ ಹೆಚ್ಚು ಕಾಲ ಆತಂಕದಲ್ಲಿ ದೂಡಿತು. ಇನ್ನು ಮೇಲೆ ಸಾಮಾಜಿಕ ಜಾಲತಾಣದಲ್ಲಿ ಫಾರ್ವರ್ಡ್ ಸಂದೇಶ ಕಳುಹಿಸುವ ಮುನ್ನ ಎಚ್ಚರವಿರಲಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ