ಆ್ಯಪ್ನಗರ

ನೈಟ್ ಕರ್ಫ್ಯೂ ಉಲ್ಲಂಘನೆ; 61 ವಾಹನ ಜಪ್ತಿ ಮಾಡಿದ ಪೊಲೀಸರು, ಕೇಸ್‌ ದಾಖಲು!

ನೈಟ್ ಕರ್ಫ್ಯೂ ಉಲ್ಲಂಘಿಸಿದವರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆಗ್ನೇಯ ವಿಭಾಗದ 13 ಪೊಲೀಸ್‌ ಠಾಣೆ ವ್ಯಾಪ್ತಿಗಳಲ್ಲಿ ಒಟ್ಟು 55 ದ್ವಿಚಕ್ರ ವಾಹನಗಳು, 5 ನಾಲ್ಕು ಚಕ್ರ ವಾಹನಗಳು ಮತ್ತು ಒಂದು ತ್ರಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

Vijaya Karnataka Web 11 Apr 2021, 10:50 pm
ಬೆಂಗಳೂರು: ನೈಟ್ ಕರ್ಫ್ಯೂ ನಿಷೇಧಾಜ್ಞೆ ಉಲ್ಲಂಘಿಸಿ ಅನಗತ್ಯವಾಗಿ ಹೊರ ಬಂದ 61 ವಾಹನಗಳನ್ನು ನಗರದ ಆಗ್ನೇಯ ವಿಭಾಗದ ಪೊಲೀಸರು ಜಪ್ತಿ ಮಾಡಿ ವಿಪತ್ತು ನಿರ್ವಹಣೆ ಕಾಯಿದೆಯಡಿ ಕೇಸ್‌ ದಾಖಲಿಸಿದ್ದಾರೆ.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ಆಗ್ನೇಯ ವಿಭಾಗದ 13 ಪೊಲೀಸ್‌ ಠಾಣೆ ವ್ಯಾಪ್ತಿಗಳಲ್ಲಿ ಒಟ್ಟು 55 ದ್ವಿಚಕ್ರ ವಾಹನಗಳು, 5 ನಾಲ್ಕು ಚಕ್ರ ವಾಹನಗಳು ಮತ್ತು ಒಂದು ತ್ರಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

ಕೋವಿಡ್‌- 19 ನಿಯಂತ್ರಣ ಉದ್ದೇಶದಿಂದ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಅನಗತ್ಯವಾಗಿ ಹೊರ ಬಂದ ಕಾರಣ ವಾಹನ ಜಪ್ತಿ ಮಾಡಿ ಸವಾರರ ವಿರುದ್ಧ ಕೇಸ್‌ ದಾಖಲಿಸಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಜೋಶಿ ಶ್ರೀನಾಥ ಮಹಾದೇವ್‌ ತಿಳಿಸಿದರು.

ವಾಹನಗಳು ಜಪ್ತಿ ಮಾಡಿ ಕೇಸ್‌ ದಾಖಲಿಸಿರುವ ಕಾರಣ ಮಾಲೀಕರು, ನ್ಯಾಯಾಲಯದ ಮೂಲಕವೇ ಬಿಡಿಸಿಕೊಳ್ಳಬೇಕಾಗುತ್ತದೆ. ಕೋವಿಡ್‌ ನಿಯಮ ಉಲ್ಲಂಘಿಸಿ ಹೊರ ಬರುವ ವಾಹನಗಳನ್ನು ಜಪ್ತಿ ಮಾಡಲಾಗುತ್ತದೆ ಎಂದು ಪೊಲೀಸ್‌ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ