ಆ್ಯಪ್ನಗರ

13 ವರ್ಷಗಳ ನಂತರ ಕೋರ್ಟ್ ನಲ್ಲಿ ವ್ಯಾಜ್ಯ ಗೆದ್ದ 72 ವರ್ಷದ ಟೈಲರ್‌ ..!

ಬಾಲಕರನ್ನು ಕೆಲಸಕ್ಕೆ ನಿಯೋಜಿಸಿದ್ದ ಆರೋಪ, ಕಾರ್ಮಿಕ ಇಲಾಖೆ ದಾಖಲಿಸಿದ್ದ ಕೇಸ್‌.13 ವರ್ಷಗಳ ನಂತರ ಕಾನೂನು ವ್ಯಾಜ್ಯ ಜಯಿಸಿದ 72 ವರ್ಷದ ಟೈಲರ್‌ ಪ್ರಕರಣದಿಂದ ಮುಕ್ತಿ ಹೊಂದಿದ ಘಟನೆ ನಡೆದಿದೆ.

Vijaya Karnataka Web 6 Dec 2019, 11:41 am
ಬೆಂಗಳೂರು: ಬೆಂಗಳೂರಿನ 72 ವರ್ಷದ ಟೈಲರ್‌ ಎ.ಎಂ.ಸಮೀವುಲ್ಲಾ ಸುದೀರ್ಘ 13 ವರ್ಷಗಳ ಕಾನೂನು ವ್ಯಾಜ್ಯ ನಡೆಸಿ ತಮ್ಮ ವಿರುದ್ದ ಕಾರ್ಮಿಕ ಕಾಯಿದೆಯಡಿ ಹೂಡಿದ್ದ ಪ್ರಕರಣದಿಂದ ಮುಕ್ತರಾಗಿದ್ದಾರೆ.
Vijaya Karnataka Web Karnataka high court


ಟೈಲರಿಂಗ್‌ ಶಾಪ್‌ನಲ್ಲಿಇಬ್ಬರು ಬಾಲಕರನ್ನು ಕೆಲಸಕ್ಕೆ ನಿಯೋಜಿಸಿಕೊಂಡಿದ್ದಕ್ಕಾಗಿ ಕಾರ್ಮಿಕ ಇಲಾಖೆ 2006ರಲ್ಲಿ ಹೂಡಿದ್ದ ಪ್ರಕರಣವನ್ನು ಹೈಕೋರ್ಟ್‌ ರದ್ದುಗೊಳಿಸಿದೆ. ಅಧೀನ ನ್ಯಾಯಾಲಯ ಆ ಟೈಲರ್‌ಗೆ ವಿಧಿಸಿದ ಶಿಕ್ಷೆಯ ಆದೇಶವನ್ನು ನ್ಯಾ.ಸೋಮಶೇಖರ್‌ ಅವರಿದ್ದ ಹೈಕೋರ್ಟ್‌ನ ಏಕಸದಸ್ಯ ಪೀಠ ರದ್ದುಗೊಳಿಸಿದೆ.

''ಸಾಕ್ಷಿಗಳ ಹೇಳಿಕೆಗಳಲ್ಲಿಭಿನ್ನತೆ ಇದೆ. ಅಮಿಕಸ್‌ ಕ್ಯೂರಿ ಹೇಳಿರುವಂತೆ ಅರ್ಜಿದಾರರ ವಿರುದ್ಧ ಕೇವಲ ಕೇಸು ದಾಖಲಿಸಲಾಗಿದೆ ಎಂದು ಸಂಖ್ಯೆ ತೋರಿಸಲು ಪ್ರಕರಣ ಹೂಡಲಾಗಿದೆ ಎಂಬ ಶಂಕೆ ಮೂಡುತ್ತದೆ. ಹಾಗಾಗಿ ಪ್ರಕರಣ ರದ್ದುಗೊಳಿಸಲಾಗುವುದು ''ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದಲ್ಲಿಅರ್ಜಿದಾರ ಸಮೀವುಲ್ಲಾಗೆ ಸಹಕರಿಸಲು ಅಮಿಕಸ್‌ ಕ್ಯೂರಿ ಆಗಿ ನೇಮಕಗೊಂಡಿದ್ದ ನ್ಯಾಯವಾದಿ ಎಂ.ಎಸ್‌. ಅಶ್ವಥ್‌ರೆಡ್ಡಿ ಅವರು ಪ್ರಾಸಿಕ್ಯೂಷನ್‌ ಹೇಳಿಕೆಗಳಲ್ಲಿವ್ಯತ್ಯಯ ಇರುವುದನ್ನು ನ್ಯಾಯಾಲಯದ ಗಮನಕ್ಕೆ ತಂದರು. ಆದು ಆರೋಪಿ ಸಮೀವುಲ್ಲಾಖುಲಾಸೆಯಾಗಲು ಕಾರಣವಾಗಿದೆ.

ಅಮಿಕಸ್‌ ಕ್ಯೂರಿ, ಕೇವಲ ಸಂಖ್ಯೆ ತೋರಿಸಲು ಪ್ರಕರಣ ದಾಖಲಿಸಲಾಗಿದೆ. ದೂರಿನಲ್ಲಿ2005ರ ಮಾ.27 ಎಂದು ಉಲ್ಲೇಖಿಸಲಾಗಿದೆ, ಆದರೆ ಇನ್ಸ್‌ಪೆಕ್ಷನ್‌ ವರದಿ ಮಾಡಿದ್ದು 2006ರ ಜ. 27 ಎಂದು ಹೇಳಲಾಗಿದೆ. ಹೇಗೆ ತನಿಖೆ ಮಾಡದೆ ದೂರು ದಾಖಲಿಸಲಾಗಿದೆ ಎಂಬುದನ್ನು ಯಾವುದೇ ವಿವರಣೆ ನೀಡಿಲ್ಲಎಂದು ಹೇಳಿದ್ದಾರೆ.

ಅಲ್ಲದೆ, ಅಪರಾಧದ ಸ್ಥಳ ಗಾಂಧಿನಗರದ ಹೋಟೆಲ್‌ ಬೃಂದಾವನ ಕಟ್ಟಡದ ನೆಲಮಹಡಿಯಲ್ಲಿದ್ದ ಜೆಂಟ್ಸ್‌ ಸೆಲೆಕ್ಟ್ ಟೈಲರ್‌ ಎಂದು ಹೇಳಲಾಗಿದೆ. ಆದರೆ ಓರ್ವ ಬಾಲ ಕಾರ್ಮಿಕ ತನ್ನ ಹೇಳಿಕೆಯಲ್ಲಿಜಿನ್ನಗಾರಮ್ಮ ದೇವಾಲಯದ ಎದುರು ಎಂದರೆ, ಮತ್ತೊಬ್ಬ ತ್ರಿಭುವನ್‌ ಹೋಟೆಲ್‌ ಕಟ್ಟಡದ ತಳಮಹಡಿಯಲ್ಲಿಎಂದು ಹೇಳಿದ್ದಾನೆ. ಅವರ ಹೇಳಿಕೆಗಳಲ್ಲೂವ್ಯತ್ಯಾಸವಿದೆ. ಬಾಲ ಕಾರ್ಮಿಕ ವಯಸ್ಸಿನ ಪರೀಕ್ಷೆ ನಡೆಸಿಲ್ಲ. ಸಮೀವುಲ್ಲಾಶಾಪ್‌ನ ಮಾಲೀಕನೇ ಅಥವಾ ಬಾಡಿಗೆದಾರನೇ ಎಂಬುದನ್ನೂ ವಿವರಿಸಿಲ್ಲ. ಬಾಲ ಕಾರ್ಮಿಕರ ತಂದೆ ತಾಯಿಗಳ ಹೇಳಿಕೆ ಪಡೆದಿಲ್ಲ. ಹೀಗೆ ಹಲವು ಲೋಪದೋಷಗಳನ್ನು ಅಮಿಕಸ್‌ ಕ್ಯೂರಿ ಎತ್ತಿ ತೋರಿಸಿದ್ದರು. ಅವುಗಳನ್ನು ಪರಿಗಣಿಸಿದ ನ್ಯಾಯಾಲಯ, ಆ ಟೈಲರ್‌ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿ ಆತನನ್ನು ಆರೋಪ ಮುಕ್ತಗೊಳಿಸಿದೆ.

ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಮುಂಗಟ್ಟು ಕಾಯಿದೆ 1961ರಡಿ ಸಿಟಿ ಮೆಟ್ರೋಪಾಲಿಟನ್‌ ಮ್ಯಾಜಿಸ್ಪ್ರೇಟ್‌ ಕೋರ್ಟ್‌ 2010ರ ಜು.3ರಂದು ಸಮೀವುಲ್ಲಾಅಪರಾಧಿ ಎಂದು ಸಾರಿ ಕಾರ್ಮಿಕ ಕಾಯಿದೆ ಉಲ್ಲಂಘನೆಗಾಗಿ 18,250 ರೂ. ದಂಡವನ್ನು ವಿಧಿಸಿತ್ತು. ಆ ಆದೇಶವನ್ನು 2010ರ ನ.4ರಂದು ತ್ವರಿತಗತಿ ನ್ಯಾಯಾಲಯ ಕೂಡ ಎತ್ತಿಹಿಡಿದಿತ್ತು. ಆ ತೀರ್ಪು ಪ್ರಶ್ನಿಸಿ ಅರ್ಜಿದಾರ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ