ಆ್ಯಪ್ನಗರ

ವರ್ತೂರು ಕೆರೆಯ ನೊರೆಗೆ ಬೆದರಿದ ಪ್ರಯಾಣಿಕರು

ವರ್ತೂರು ಕೆರೆಯಿಂದ ವಿಷಯುಕ್ತ ನೊರೆ ಮೇಲೆದ್ದು, ನಾಗರಿಕರ ಸಂಚಾರಕ್ಕೆ ತೊಂದರೆಯುಂಟಾಯಿತು.

ಟೈಮ್ಸ್ ಆಫ್ ಇಂಡಿಯಾ 22 Mar 2017, 3:43 pm
ಬೆಂಗಳೂರು: ಪೂರ್ವ ಬೆಂಗಳೂರಿನ ವರ್ತೂರು ಸೇತುವೆ ರಸ್ತೆಯಲ್ಲಿ ಪ್ರಯಾಣಿಸುವವರಿಗೆ ಹಿಮಪಾತ ಎದುರಾಗಿತ್ತು. ಆದರೆ ಯಾರೂ ಇದರ ಮಜಾ ಅನುಭವಿಸುವಂತಿರಲಿಲ್ಲ. ಬೆದರಿದ ದ್ವಿಚಕ್ರವಾಹನ ಸವಾರರು ಗೇರ್‌ ಬದಲಿಸಿದರೆ ಕಾರು ಪ್ರಯಾಣಿಕರು ವಿಂಡೋ ಮೇಲಕ್ಕೆ ಎಳೆದುಕೊಂಡರು. ಕಾರಣ ಇದು ವರ್ತೂರು ಕೆರೆಯಿಂದ ಮೇಲಕ್ಕೆದ್ದು ಬಂದ ವಿಷಪೂರಿತ ನೀರಿನ ನೊರೆಯಾಗಿತ್ತು.
Vijaya Karnataka Web a snowfall everyone wants to avoid in bengaluru
ವರ್ತೂರು ಕೆರೆಯ ನೊರೆಗೆ ಬೆದರಿದ ಪ್ರಯಾಣಿಕರು


ಈ ಕೆರೆಯ ಮಾಲಿನ್ಯ ಪ್ರಮಾಣ ತೀವ್ರಗೊಂಡಿದ್ದು, ಚರಂಡಿ ನೀರು ಮತ್ತು ಹಾನಿಕಾರಕ ತ್ಯಾಜ್ಯಗಳು ಇದರಲ್ಲಿ ಸೇರಿವೆ. ಇದರಿಂದಾಗಿ ಬುರುಗು ಮೇಲೇಳುತ್ತಿದ್ದು, ದಾರಿ ಹೋಕರಿಗೆ ತೊಂದರೆಯಾಗುತ್ತಿದೆ. ಸ್ಥಳೀಯ ನಿವಾಸಿಗಳಿಗೂ ಆತಂಕ ತಂದೊಡ್ಡಿದೆ. ಈ ನೊರೆ ತಾಗಿದಲ್ಲಿ ತುರಿಕೆ, ಚರ್ಮ ಸೋಂಕು ಉಂಟಾಗುತ್ತಿದೆ ಎಂದು ಸಂತ್ರಸ್ತರು ಹೇಳುತ್ತಾರೆ.

ವಿಷಪೂರಿತ ತ್ಯಾಜ್ಯಗಳನ್ನು ಕೆರೆಗೆ ಬಿಡುತ್ತಿರುವುದರಿಂದ ಆಗಾಗ ಕೆರೆಯಿಂದ ನೊರೆ ಎದ್ದು ಅಚ್ಚುಕಟ್ಟು ಪ್ರದೇಶಗಳಲ್ಲಿ ವ್ಯಾಪಿಸುವುದು ಆಗಾಗ ಸುದ್ದಿಯಾಗುತ್ತಿದೆ.

A 'snowfall' everyone wants to avoid in Bengaluru: Commuters passing through the Varthur Bridge in east Bengaluru on Tuesday evening witnessed yet another "snowfall". However, it was not a moment of joy for them.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ