ಆ್ಯಪ್ನಗರ

ದುಬೈನಲ್ಲಿ ಕಷ್ಟಪಟ್ಟು ದುಡಿದ ಹಣವನ್ನು ಕಬಳಿಸಿದ ಸಂಬಂಧಿಕರು; ನೊಂದ ಮಹಿಳೆ ಆತ್ಮಹತ್ಯೆಗೆ ಯತ್ನ

ಫಾತಿಮಾ ಎಂಬುವವರು ಕಳೆದ ಕೆಲ ವರ್ಷಗಳಿಂದ ದುಬೈನಲ್ಲಿ ಮನೆ ಕೆಲಸ ಮಾಡಿ ಹಣ ಸಂಪಾದಿಸಿದ್ದರು. ದುಡಿದ ಸ್ವಲ್ಪ ಹಣವನ್ನು ತನ್ನ ಸಹೋದರಿಗೂ ಕೊಟ್ಟಿದ್ದರು. ಆದರೆ ಇವರ ಬಳಿ ದುಡ್ಡು ಇರುವುದನ್ನು ಗಮನಿಸಿದ ಸಹೋದರಿಯ ಪುತ್ರ ಸೈಯದ್ದ ಖಲೀಲ್‌ ಫಾತಿಮಾಗೆ ಗೊತ್ತಿಲ್ಲದಂತೆ ಎಟಿಎಂನಿಂದ 3 ಲಕ್ಷ ರೂ. ಹಣವನ್ನು ಹಂತ ಹಂತವಾಗಿ ಡ್ರಾ ಮಾಡಿದ್ದಾನೆ.

Vijaya Karnataka Web 23 Nov 2020, 6:48 am
ಬೆಂಗಳೂರು: ದುಬೈನಲ್ಲಿ ಕೆಲಸ ಮಾಡಿ ಗಳಿಸಿದ್ದ ಹಣವನ್ನು ಸಂಬಂಧಿಕರು ಕಬಳಿಸಿದ್ದರಿಂದ ಬೇಸತ್ತು ಮಹಿಳೆಯೊಬ್ಬರು ಸೆಲ್ಫಿ ವಿಡಿಯೊ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
Vijaya Karnataka Web Police Sketch


ಬೆಂಗಳೂರು ಅರುಂಧತಿ ನಗರದ ಫಾತಿಮಾ (30) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಕೆಲ ವರ್ಷ ದುಬೈನಲ್ಲಿ ಮನೆ ಗೆಲಸ ಮಾಡಿ 9 ಲಕ್ಷ ರೂ. ಹಣ ದುಡಿದಿದ್ದರು. ಸ್ವಲ್ಪ ಹಣವನ್ನು ಸಹೋದರಿಗೆ ಕೊಟ್ಟಿದ್ದರು. ಸಹೋದರಿಯ ಪುತ್ರ ಸೈಯದ್ದ ಖಲೀಲ್‌ ಫಾತಿಮಾಗೆ ಗೊತ್ತಿಲ್ಲದಂತೆ ಎಟಿಎಂನಿಂದ 3 ಲಕ್ಷ ರೂ. ಹಣವನ್ನು ಹಂತ ಹಂತವಾಗಿ ಡ್ರಾ ಮಾಡಿದ್ದಾನೆ.

ಬೆಂಗಳೂರು: ಸ್ಕೂಟರ್‌ನಲ್ಲಿ ರಾಶಿ ರಾಶಿ ಚಿನ್ನದ ನೆಕ್ಲೇಸ್, ಬಳೆಗಳನ್ನು ಕಂಡು ನೈಟ್‌ ಬೀಟ್‌ ಪೊಲೀಸರು ದಂಗು, 3 ಕೋಟಿಯ ವಸ್ತು ವಶಕ್ಕೆ

ಹಣ ವಾಪಸು ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಸಂಬಂಧ ಠಾಣೆಯಲ್ಲಿ ದೂರು ದಾಖಲಿಸಿದರೂ ಹಣ ವಾಪಸು ಬಂದಿರಲಿಲ್ಲ. ಇದರಿಂದಾಗಿ ಪುಟ್ಟ ಮಕ್ಕಳ ಎದುರೇ ಫಾತಿಮಾ ಸೆಲ್ಫಿ ವಿಡಿಯೊ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದರು. ಚಂದ್ರಾ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ