ಆ್ಯಪ್ನಗರ

ಜಯನಗರ ಆರ್‌ಟಿಒ ಮೇಲೆ ಎಸಿಬಿ ಅಧಿಕಾರಿಗಳ ದಾಳಿ: ಲಕ್ಷಾಂತರ ರೂ. ನಗದು ವಶಕ್ಕೆ

ಬೆಂಗಳೂರಿನ ಆರ್‌ಟಿಒ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಮಧ್ಯವರ್ತಿಗಳ ಬಳಿ ಲಕ್ಷಾಂತರ ರೂ. ಹಣ ಪತ್ತೆಯಾಗಿದ್ದು, ಜತೆಗೆ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಂಚಾರ ನಿಯಮ ಉಲ್ಲಂಘಟನೆಗೆ ದಂಡ ಹೆಚ್ಚಳ ಬಳಿಕ ಈ ದಾಳಿ ನಡೆದಿರುವುದು ವಿಶೇಷ.

Vijaya Karnataka 14 Sep 2019, 12:11 pm
ಭ್ರಷ್ಟಾಚಾರದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜಯನಗರ ಪ್ರಾದೇಶಿಕ ಸಾರಿಗೆ ಕಚೇರಿ(ಆರ್‌ಟಿಒ) ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದರು. ದಾಳಿ ವೇಳೆ 12 ಜನ ಮಧ್ಯವರ್ತಿಗಳ ಬಳಿ 1.40 ಲಕ್ಷ ರೂ. ಪತ್ತೆಯಾಗಿದೆ. ಜತೆಗೆ ಆರ್‌ಸಿ ಮತ್ತು ಡಿಎಲ್‌ ಸ್ಮಾರ್ಟ್‌ಕಾರ್ಡ್‌ಗಳು, ವಿವಿಧ ಪರ್ಮಿಟ್‌ಗಳು ಪತ್ತೆಯಾಗಿವೆ.
Vijaya Karnataka Web money seize rto 3


ಹಣ, ದಾಖಲೆಗಳು ವಶಕ್ಕೆ


ಇದೇ ವೇಳೆ ಕಚೇರಿಯ ಒಳಗೆ 2.71 ಲಕ್ಷ ರೂ. ಇದ್ದ ವಾರಸುದಾರರಿಲ್ಲದ ಬ್ಯಾಗ್‌ ಪತ್ತೆಯಾಗಿದೆ. 12 ಜನ ಮಧ್ಯವರ್ತಿಗಳನ್ನು ಬಂಧಿಸಿ, ನಗದು ಮತ್ತು ದಾಖಲೆ ಜಪ್ತಿ ಮಾಡಿ ತನಿಖೆ ನಡೆಸಲಾಗುತ್ತಿದೆ ಎಂದು ಎಸಿಬಿ ಅಧಿಕಾರಿ ತಿಳಿಸಿದರು. ಮಧ್ಯವರ್ತಿಗಳ ಜೊತೆ ಶಾಮೀಲಾಗಿ ಸರಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಅಕ್ರಮ ಲಂಚದ
ಹಣವನ್ನು ಪಡೆಯುತ್ತಿರುವ ಕುರಿತು ಮಾಹಿತಿ ಇತ್ತು. ಈ ಹಿನ್ನೆಲೆಯಲ್ಲಿ ಸಾರಿಗೆ ಕಚೇರಿ ಮತ್ತು ಕಾಂಪ್ಲೆಕ್ಸ್‌ನಲ್ಲಿರುವ ಕೆಲವು ಮಳಿಗೆಗಳಲ್ಲಿ ತಪಾಸಣೆ ನಡೆಸಲಾಗಿದೆ.

ಹಣ, ದಾಖಲೆಗಳು ವಶಕ್ಕೆ

ಸೆ.1ರಿಂದ ಸಂಚಾರ ನಿಯಮಗಳ ಉಲ್ಲಂಘನೆಗೆ ದಂಡ ಶುಲ್ಕ ಹೆಚ್ಚಳ ಹಿನ್ನೆಲೆಯಲ್ಲಿ ಡಿಎಲ್‌ ಮಾಡಿಸಿಕೊಳ್ಳಲು ಜನ ಸಾರಿಗೆ ಕಚೇರಿಗಳಿಗೆ ಮುಗಿಬೀಳುತ್ತಿದ್ದಾರೆ. ಇದು ಮಧ್ಯವರ್ತಿಗಳಿಗೆ ಮತ್ತು ಸಾರಿಗೆ ಇಲಾಖೆಯ ನೌಕರರಿಗೆ ಭ್ರಷ್ಟಾಚಾರಕ್ಕೆ ಹಾದಿ ಮಾಡಿಕೊಟ್ಟಿದೆ ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ