ಆ್ಯಪ್ನಗರ

ಅಯ್ಯೋ ವಿಧಿಯೇ! 2000 ಕಿ.ಮೀ ಕಾಲ್ನಡಿಗೆಯಲ್ಲಿ ಮನೆ ತಲುಪಿದ ಯುವಕ ಹಾವು ಕಚ್ಚಿ ಸಾವು!

ವಿಧಿಯ ಆಟ ಬಲ್ಲವರಾರು ಅನ್ನೋ ಮಾತು ಯುಪಿಯ ಈ ವಲಸೆ ಕಾರ್ಮಿಕನ ವಿಚಾರದಲ್ಲಿ ಸತ್ಯ ಅನಿಸುತ್ತಿದೆ. 200 ಕಿ.ಮೀ ಕಾಲ್ನಡಿಗೆ ಮೂಲಕ ಬಂದವ ಹೆಣವಾಗಿ ಹೋದ!

TIMESOFINDIA.COM 2 Jun 2020, 3:05 pm
ಬೆಂಗಳೂರು: ವಿಧಿ ಕೆಲವರ ಬಾಳಲ್ಲಿ ಎಷ್ಟು ಕ್ರೂರ ನರ್ತನೆ ಮಾಡುತ್ತಾನೆ ಅಂತ ಕೆಲವೊಂದು ಸಲ ಅನಿಸುತ್ತೆ. ಅದು ನಿಜ ಕೂಡ ಹೌದು. ಯಾಕಂದ್ರೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕ ಸುಮಾರು 2000 ಕಿ.ಮೀ ಕಾಲ್ನಡಿಗೆಯಲ್ಲಿ ನಡೆದು ಉತ್ತರ ಪ್ರದೇಶದ ಮನೆಗೆ ತಲುಪಿದ್ದಾನೆ. ಅಮ್ಮನನ್ನ ಭೇಟಿಯಾಗಿ ಆಲಿಂಗನ ಮಾಡಿ ಕೈ ಕಾಲು ತೊಳೆಯಲು ಸಣ್ಣ ಕೆರೆ ಬಳಿ ಹೋದವ ಹಾವು ಕಚ್ಚಿ ಸಾವನಪ್ಪಿರುವ ಮನಕಲುಕುವ ಘಟನೆ ನಡೆದಿದೆ. ಮನೆಗೆ ತಲುಪಿದ ಒಂದೇ ಗಂಟೆಯಲ್ಲಿ ದಾರುಣ ಸಾವು ಕಂಡಿದ್ದಾನೆ.
Vijaya Karnataka Web salman khan


23 ವರ್ಷದ ಸಲ್ಮಾನ್‌ ಖಾನ್‌ ಎಂಬವನು ಉತ್ತರ ಪ್ರದೇಶದ ಗೊಂಡದ ದಾನೆಪುರ್‌ ಹಳ್ಳಿಯಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದ. ಕಳೆದ ವರ್ಷ ಕೆಲಸಕ್ಕೆಂದು ಬೆಂಗಳೂರಿಗೆ ಬಂದಿದ್ದಾನೆ. ಬೆಂಗಳೂರಿನಲ್ಲೇ ಕಟ್ಟಡ ಕಾಮಗಾರಿ ಕೆಲಸದಲ್ಲಿ ಸೇರಿಕೊಂಡಿದ್ದ. ಆದ್ರೆ ಲಾಕ್‌ಡೌನ್‌ ಹಿನ್ನೆಲೆ ಕೆಲಸ ಹಾಗೂ ಊಟವಿಲ್ಲದೆ ಸಲ್ಮಾನ್‌ ಖಾನ್‌ ಹಾಗೂ ಆತನ ಗೆಳೆಯರು ಸಮಸ್ಯೆಯಲ್ಲಿದ್ದರು.

ಹೀಗಾಗಿ ಸಲ್ಮಾನ್‌ ಹಾಗೂ ಆತನ 10 ಗೆಳೆಯರು ಊರಿಗೆ ತೆರಳಲು ನಿರ್ಧರಿಸಿದರು. ಆದ್ರೆ ರೈಲು ಸಿಗಲಿಲ್ಲ ಹೀಗಾಗಿ ಎಲ್ಲರೂ ಮೇ 12ರಂದು ಕಾಲ್ನಡಿಗೆ ಮೂಲಕವೇ ಯುಪಿ ಕಡೆ ಮುಖ ಮಾಡಿದರು. ಸುಮಾರು 12 ದಿನಗಳ ಕಾಲ 2000 ಕಿ.ಮೀ ಕಾಲ್ನಡಿಗೆ ಮೂಲಕ ಕೊನೆಗೂ ತಮ್ಮ ಊರಿಗೆ ತಲುಪಿದ್ದಾರೆ. ದಾರಿ ಮಧ್ಯೆ ಆಹಾರದ ಸಮಸ್ಯೆಯಾದರು ಕೂಡ ಊರಿಗೆ ಸೇರುವ ಖುಷಿಯಲ್ಲಿ ಅದು ಯಾವುದು ಇವರ ಮುಂದೆ ಬರಲಿಲ್ಲ.

ಇಂದಿನ ಚುಟುಕು ಸುದ್ದಿಗಳು: ಕಾಮುಕನಿಂದ ಅತ್ಯಾಚಾರ, ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ


ಹೇಗೋ ಕೊನೆಗೆ ಊರಿಗೆ ತಲುಪಿದ್ದಾರೆ. ಸಲ್ಮಾನ್‌ ಕೂಡ ಖುಷಿಯಿಂದಲೇ ಮನೆಗೆ ತಲುಪಿದವ ಹಾಸಿಗೆ ಹಿಡಿದಿರುವ ಅಮ್ಮನ ಬಳಿ ಹೋಗಿ ಮಾತನಾಡಿಸಿದ್ದಾನೆ. ಹೆತ್ತ ತಾಯಿಯನ್ನ ಆಲಿಂಗಿಸಿ. 'ಇನ್ನು ಕೈ ಕಾಲುಗಳಲ್ಲಿ ಧೂಳು, ಮಣ್ಣು ಇದೆ' ಎಂದು ಮನೆಯ ಪಕ್ಕದಲ್ಲೇ ಇದ್ದ ಕಬ್ಬಿನ ತೋಟದ ಬಳಿ ಇರುವ ಸಣ್ಣ ಕೆರೆ ಬಳಿ ಹೋಗಿದ್ದಾನೆ. ಆದ್ರೆ ದುರಾದೃಷ್ಟಕರ ಸಂಗತಿ ಅಂದ್ರೆ ಅಲ್ಲಿ ಹಾವು ಕಚ್ಚಿ ಸಾವನಪ್ಪಿದ್ದಾನೆ. ಮನೆಗೆ ಬಂದು ಒಂದು ಗಂಟೆ ಆಗೋ ಮುಂಚೆಯೇ ಯಮ ಸಲ್ಮಾನ್‌ನನ್ನ ಕರೆದುಕೊಂಡು ಹೋಗಿದ್ದಾನೆ.

ಮನೆಯ ಅತೀ ಕಿರಿಯ ಮಗನಾಗಿದ್ದ ಸಲ್ಮಾನ್‌ ಖಾನ್‌ ಸಾವು ಹಾಸಿಗೆ ಹಿಡಿದಿರುವ ತಾಯಿಗೆ ಬರ ಸಿಡಿಲು ಬಡಿದಂತಾಗಿದೆ. ಬೆಂಗಳೂರಿನಲ್ಲಿ ದುಡಿದು ಮನೆಗೆ ಹಣ ಕಳುಹಿಸುತ್ತ ಆಸರೆಯಾಗಿದ್ದ ಮಗನೇ ಹೋಗಿಬಿಟ್ಟಿದ್ದಾನೆ ಎಂದು ನೋವಿನಿಂದಲೇ ತಾಯಿ ಹೇಳುತ್ತಿದ್ದುದನ್ನ ಕೇಳುತ್ತಿದ್ದ ಆತನ ಗೆಳೆಯರ ಕಣ್ಣುಗಳಲ್ಲಿ ಕಣ್ಣೀರು ಜಿನುಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ