ಆ್ಯಪ್ನಗರ

ಭರತನಾಟ್ಯದಿಂದ ರೆಡಿಯಾಯ್ತು ಫುಟ್‌ಪಾತ್

ಫುಟ್‌ಪಾತ್‌ಗಳ ದುಸ್ಥಿತಿಯ ಕುರಿತು ಭರತನಾಟ್ಯ ಪ್ರದರ್ಶಿಸಿದ್ದ ವೀಡಿಯೋವೊಂದು ವೈರಲ್ ಆಗಿತ್ತು. ಇದರಿಂದ ಬಿಬಿಎಂಪಿ ಎಚ್ಚೆತ್ತುಕೊಂಡಿದ್ದು, ಪಾದಚಾರಿ ಮಾರ್ಗಕ್ಕೆ ಹೊಸ ರೂಪ ಕೊಟ್ಟಿದೆ.

Vijaya Karnataka 11 Aug 2019, 9:42 am
ಮಲ್ಲೇಶ್ವರಂ ಸೋಷಿಯಲ್‌ ಎಂಬ ತಂಡವು ಅಧ್ವಾನಗೊಂಡಿರುವ ಫುಟ್‌ಪಾತ್‌ಗಳ ದುಸ್ಥಿತಿಯ ಕುರಿತು ಅಣಕು ಭರತನಾಟ್ಯ ಪ್ರದರ್ಶಿಸಿದ್ದರಿಂದ ಎಚ್ಚೆತ್ತುಕೊಂಡ ಬಿಬಿಎಂಪಿಯು, ಸುಸಜ್ಜಿತವಾಗಿ ಪಾದಚಾರಿ ಮಾರ್ಗಗಳನ್ನು ನಿರ್ಮಿಸಿದೆ.
Vijaya Karnataka Web footpath 3


ಮಲ್ಲೇಶ್ವರಂ 16ನೇ ಕ್ರಾಸ್‌ನ ನಿವಾಸಿಗಳೆಲ್ಲರೂ ಒಗ್ಗೂಡಿ ‘ಮಲ್ಲೇಶ್ವರಂ ಸೋಷಿಯಲ್‌’ ಎಂಬ ತಂಡವನ್ನು ಕಟ್ಟಿಕೊಂಡಿದ್ದು, ಪಾದಚಾರಿ ಮಾರ್ಗಗಳು ಅಧ್ವಾನವಾಗಿರುವ
ಬಗ್ಗೆ ಪಾಲಿಕೆಯ ಗಮನ ಸೆಳೆಯಲು 2018ರ ಅ. 16ರಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಅಣಕು ಭರತನಾಟ್ಯದ ವೀಡಿಯೋ ವೈರಲ್‌ ಆಗಿತ್ತು. ಫುಟ್‌ಪಾತ್‌ಗಳಲ್ಲಿ ನರ್ತಿಸಿಕೊಂಡು ನಡೆದಾಡಬೇಕಾದ ಸ್ಥಿತಿ ಇದೆ ಎಂಬ ಅಸಮಾಧಾನ ಹೊರಹಾಕಿದ್ದರು.

ದುರಸ್ತಿಗೆ ಮುನ್ನ


ಈ ವೀಡಿಯೋದಿಂದ ಎಚ್ಚೆತ್ತುಕೊಂಡು ಪಾಲಿಕೆಯು, ಪಾದಚಾರಿ ಮಾರ್ಗವನ್ನು ದುರಸ್ತಿಪಡಿಸಿ ಹೊಸ ರೂಪ ಕೊಟ್ಟಿದೆ. ಮರಗಳ ಬುಡದ ಸುತ್ತಲೂ ಜಾಗ ಬಿಟ್ಟಿದ್ದು, ಮಳೆ ನೀರು ಹೋಗುವಂತೆ ಮಾಡಲಾಗಿದೆ. ಸ್ಥಳೀಯ ನಿವಾಸಿಗಳ ಮನವಿ ಮೇರೆಗೆ ಮಳೆ ನೀರು ಇಂಗು ಗುಂಡಿಗಳನ್ನು ನಿರ್ಮಿಸುವ ಭರವಸೆಯನ್ನು ನೀಡಲಾಗಿದೆ.

ಮಲ್ಲೇಶ್ವರಂ ನಿವಾಸಿಗಳು ಭಾನುವಾರ, ಸುಸಜ್ಜಿತ ಫುಟ್‌ಪಾತ್‌ಗಳನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಕಾರ್ಪೋರೇಟರ್‌ ಜಯಪಾಲ್‌ ಅವರನ್ನು ಅಭಿನಂದಿಸಲು
ತೀರ್ಮಾನಿಸಿದ್ದಾರೆ.

ದುರಸ್ತಿಯ ನಂತರ


‘‘ನಾವು 2017ರಿಂದ ಫುಟ್‌ಪಾತ್‌ ಬೇಕು ಅಭಿಯಾನ ನಡೆಸುತ್ತಿದ್ದೇವೆ. ಸದ್ಯ ಒಂದು ಕಡೆ ವಿಶಾಲವಾದ ಪಾದಚಾರಿ ಮಾರ್ಗವನ್ನು ನಿರ್ಮಿಸಿ, ಓಡಾಟಕ್ಕೆ ಮುಕ್ತಗೊಳಿಸಲಾಗಿದೆ. ಮತ್ತೊಂದು ಬದಿಯಲ್ಲೂ ಕೆಲಸ ಶುರುವಾಗಿದೆ. ಜನರ ಸಮಸ್ಯೆಗೆ ಸ್ಪಂದಿಸಿ, ಉತ್ತಮ ಫುಟ್‌ಪಾತ್‌ಗಳನ್ನು ನಿರ್ಮಿಸಲು ಶ್ರಮಿಸುತ್ತಿರುವ ಪಾಲಿಕೆ ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಗುತ್ತಿದೆ,’’ ಎಂದು ಮಲ್ಲೇಶ್ವರಂ ಸೋಷಿಯಲ್‌ ತಂಡದ ಸದಸ್ಯರೊಬ್ಬರು ತಿಳಿಸಿದರು.

‘‘ರಸ್ತೆ ಮತ್ತು ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ 1.80 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಮಲ್ಲೇಶ್ವರಂನ 15ನೇ ಕ್ರಾಸ್‌ ಮತ್ತು 17 ಕ್ರಾಸ್‌ನಲ್ಲಿನ ಪಾದಚಾರಿ ಮಾರ್ಗಗಳನ್ನೂ ಸದ್ಯದಲ್ಲೇ ಅಭಿವೃದ್ಧಿಧಿಪಡಿಸಲಾಗುವುದು. ಇದರಿಂದ ಪಾದಚಾರಿಗಳು ಸುಗಮವಾಗಿ ಸಂಚರಿಸಬಹುದಾಗಿದೆ,’’ ಎಂದು ಕಾರ್ಪೋರೇಟರ್‌ ಎನ್‌. ಜಯಪಾಲ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ