ಆ್ಯಪ್ನಗರ

ಬೆಂಗಳೂರು ನಗರದಲ್ಲಿ ಮತ್ತೆ ಹೆಚ್ಚಿದ ಮಾಲಿನ್ಯ..! ವಾಯು ಗುಣಮಟ್ಟ ತೀವ್ರ ಕುಸಿತ..

ಮಾಲಿನ್ಯ ನಿಯಂತ್ರಣ ಮಂಡಳಿಯ ನಿಗಾ ಕೇಂದ್ರ (ಸಿಎಎಕ್ಯುಎಂಎಸ್‌)ದಲ್ಲಿ ದಾಖಲಾಗುವ ಅಂಕಿ - ಅಂಶಗಳು ಹೆಚ್ಚಾದಷ್ಟೂ ವಾಯು ಗುಣಮಟ್ಟ ಕುಸಿಯುತ್ತಿದೆ ಎಂದರ್ಥ. ಭಾಗಶಃ ಲಾಕ್‌ಡೌನ್‌ ಜಾರಿಯಲ್ಲಿದ್ದ ಅವಧಿಗೆ ಹಾಗೂ ಇತ್ತೀಚಿನ ದಿನಗಳಿಗೆ ಹೋಲಿಸಿದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಿರುವುದು ಕಂಡು ಬಂದಿದೆ. 2021ರ ಮೇ ತಿಂಗಳಿನಲ್ಲಿ ಬೆಂಗಳೂರು ರೈಲು ನಿಲ್ದಾಣದಲ್ಲಿ ವಾಯು ಗುಣಮಟ್ಟ 40 ಎಕ್ಯೂಐ ಇತ್ತು. 2022ರ ಜನವರಿ ಹಾಗೂ ಫೆಬ್ರವರಿಯಲ್ಲಿ ವಾಯು ಗುಣಮಟ್ಟ ಕ್ರಮವಾಗಿ 85 ಎಕ್ಯೂಐ ಹಾಗೂ 105 ಎಕ್ಯೂಐಗೆ ಏರಿಕೆಯಾಗಿದೆ.

Edited byದಿಲೀಪ್ ಡಿ. ಆರ್. | Vijaya Karnataka 30 Mar 2022, 10:57 am

ಹೈಲೈಟ್ಸ್‌:

  • ವಾಹನ ಸಂಚಾರ ಹೆಚ್ಚಳ
  • ನಿರ್ಮಾಣ ಚಟುವಟಿಕೆ ಚುರುಕು
  • ಜನರಿಗೆ ಉಸಿರಾಟ ಸಂಬಂಧಿ ಸಮಸ್ಯೆಗಳ ಕಾಟ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Air pollution
ಸಾಂದರ್ಭಿಕ ಚಿತ್ರ
ಮಹಾಬಲೇಶ್ವರ ಕಲ್ಕಣಿ
ಬೆಂಗಳೂರು:
ನಗರದಲ್ಲಿ ಭಾಗಶಃ ಲಾಕ್‌ಡೌನ್‌ ವೇಳೆ ತಗ್ಗಿದ್ದ ವಾಯುಮಾಲಿನ್ಯ ಪ್ರಮಾಣ ಇದೀಗ ಮತ್ತೆ ಏರಿಕೆಯಾಗಿದೆ. ಇದರಿಂದಾಗಿ ಕೆಲವರಲ್ಲಿ ಉಸಿರಾಟ ಸಂಬಂಧಿ ಸಮಸ್ಯೆಗಳು ಕಂಡು ಬರುತ್ತಿವೆ.
ಕೋವಿಡ್‌ ಮೂರನೇ ಅಲೆ ಅಬ್ಬರದ ಹಿನ್ನೆಲೆಯಲ್ಲಿ 2021ರ ಮೇ ತಿಂಗಳಿನಲ್ಲಿ ಹಲವು ನಿರ್ಬಂಧಗಳೊಂದಿಗೆ ಭಾಗಶಃ ಲಾಕ್‌ಡೌನ್‌ ಜಾರಿಯಲ್ಲಿತ್ತು. ಈ ವೇಳೆ ವಾಹನಗಳ ಸಂಚಾರ ಹೆಚ್ಚು ಇರಲಿಲ್ಲ. ನಿರ್ಮಾಣ ಚಟುವಟಿಕೆಗೂ ಮಂಕು ಕವಿದಿತ್ತು. ಈ ಅವಧಿಯಲ್ಲಿ ಗಾಳಿಯ ಗುಣಮಟ್ಟ ಉತ್ತಮವಾಗಿತ್ತು. ಜನಜೀವನ ಸಹಜ ಸ್ಥಿತಿಗೆ ಬಂದ ಬಳಿಕ ಇತ್ತೀಚಿನ ದಿನಗಳಲ್ಲಿ ಗಾಳಿಯ ಗುಣಮಟ್ಟ ಕುಸಿತವಾಗಿರುವುದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಂಕಿ - ಅಂಶಗಳು ದೃಢಪಡಿಸಿವೆ.

ಕೊಡಗಿನಲ್ಲೂ ಹೆಚ್ಚಿದ ವಾಯು ಮಾಲಿನ್ಯ..! ಆತಂಕ ಹುಟ್ಟಿಸಿದ ವಾಯು ಗುಣಮಟ್ಟ ಸೂಚ್ಯಂಕ..!
ಮಾಲಿನ್ಯ ನಿಯಂತ್ರಣ ಮಂಡಳಿಯ ನಿಗಾ ಕೇಂದ್ರ (ಸಿಎಎಕ್ಯುಎಂಎಸ್‌)ದಲ್ಲಿ ದಾಖಲಾಗುವ ಅಂಕಿ - ಅಂಶಗಳು ಹೆಚ್ಚಾದಷ್ಟೂ ವಾಯು ಗುಣಮಟ್ಟ ಕುಸಿಯುತ್ತಿದೆ ಎಂದರ್ಥ. ಭಾಗಶಃ ಲಾಕ್‌ಡೌನ್‌ ಜಾರಿಯಲ್ಲಿದ್ದ ಅವಧಿಗೆ ಹಾಗೂ ಇತ್ತೀಚಿನ ದಿನಗಳಿಗೆ ಹೋಲಿಸಿದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಿರುವುದು ಕಂಡು ಬಂದಿದೆ.

2021ರ ಮೇ ತಿಂಗಳಿನಲ್ಲಿ ಬೆಂಗಳೂರು ರೈಲು ನಿಲ್ದಾಣದಲ್ಲಿ ವಾಯು ಗುಣಮಟ್ಟ 40 ಎಕ್ಯೂಐ ಇತ್ತು. 2022ರ ಜನವರಿ ಹಾಗೂ ಫೆಬ್ರವರಿಯಲ್ಲಿ ವಾಯು ಗುಣಮಟ್ಟ ಕ್ರಮವಾಗಿ 85 ಎಕ್ಯೂಐ ಹಾಗೂ 105 ಎಕ್ಯೂಐಗೆ ಏರಿಕೆಯಾಗಿದೆ.

ತಿಂಗಳಿಂದ ತಿಂಗಳಿಗೆ ವಾಯು ಗುಣಮಟ್ಟ ಕುಸಿತವಾಗುತ್ತಿರುವುದನ್ನು ಅಂಕಿ - ಅಂಶ ದೃಢಪಡಿಸಿದೆ. ಹೆಬ್ಬಾಳದಲ್ಲಿ ಜನವರಿಯಲ್ಲಿ ಕನಿಷ್ಠ 25 ಎಕ್ಯೂಐ ಹಾಗೂ ಗರಿಷ್ಠ 133 ಎಕ್ಯೂಐ ಇದ್ದರೆ ಫೆಬ್ರವರಿಯಲ್ಲಿ ಕನಿಷ್ಠ 60 ಹಾಗೂ ಗರಿಷ್ಠ 134 ಎಕ್ಯೂಐ ಏರಿಕೆಯಾಗಿದೆ.

ಸಿಲ್ಕ್ ಬೋರ್ಡ್‌ನಲ್ಲಿ ಜನವರಿಯಲ್ಲಿ ಕನಿಷ್ಠ 36 ಎಕ್ಯೂಐ ಹಾಗೂ ಗರಿಷ್ಠ 203 ಎಕ್ಯೂಐ ದಾಖಲಾಗಿತ್ತು. ಫೆಬ್ರವರಿಯಲ್ಲಿ ಕನಿಷ್ಠ 64 ಎಕ್ಯೂಐ ಹಾಗೂ ಗರಿಷ್ಠ 147 ಎಕ್ಯೂಐಗೆ ಏರಿಕೆಯಾಗಿದೆ. ಇದೇ ರೀತಿ ಜಯನಗರ, ಮೈಸೂರು ರಸ್ತೆ , ನಿಮ್ಹಾನ್ಸ್‌ ನಲ್ಲಿ ಗಾಳಿಯ ಗುಣಮಟ್ಟ ಕುಸಿತವಾಗಿರುವುದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿ ಅಂಶದಲ್ಲಿ ಕಾಣಿಸುತ್ತಿದೆ.

ಮಾರ್ಚ್ 26ರ ಶನಿವಾರ ಸಂಜೆ 7 ಗಂಟೆಗೆ ಹೆಬ್ಬಾಳದಲ್ಲಿ ವಾಯುಗುಣ ಮಟ್ಟ 156 ಎಕ್ಯುಐ ಇದ್ದರೆ, ಜಯನಗರದಲ್ಲಿ 154 ಎಕ್ಯುಐ, ಬಿಟಿಎಂ 100 ಎಕ್ಯುಐ ಹಾಗೂ ಸಿಲ್ಕ್ ಬೋರ್ಡ್‌ನಲ್ಲಿ 139 ಎಕ್ಯುಐ ದಾಖಲಾಗಿತ್ತು.

ಮಾಸ್ಕ್‌ ಬಳಕೆ ಒಳ್ಳೆಯದು: 'ವಾಹನಗಳು ಉಗುಳುವ ಹೊಗೆ ಸೇವಿಸುವುದು ಧೂಮಪಾನ ಮಾಡಿದಷ್ಟೇ ಶ್ವಾಸಕೋಶಕ್ಕೆ ಅಪಾಯಕಾರಿ. ಮಾಸ್ಕ್‌ ಧರಿಸಿದಲ್ಲಿ ವಾಯು ಮಾಲಿನ್ಯದಲ್ಲಿನ ವಿಷಕಾರಿ ಧೂಳಿನ ಕಣಗಳು ನೇರವಾಗಿ ಶ್ವಾಸಕೋಶಕ್ಕೆ ಹೋಗುವುದನ್ನು ತಡೆಯುತ್ತದೆ. ಹೀಗಾಗಿ ಕೋವಿಡ್‌ ಅಬ್ಬರ ಕಡಿಮೆಯಾದರೂ ಮಾಸ್ಕ್‌ ಧರಿಸುವ ಅಭ್ಯಾಸ ಮುಂದುವರಿಸುವುದು ಉತ್ತಮ' ಎನ್ನುತ್ತಾರೆ ಮಣಿಪಾಲ ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ. ವಸುನೇತ್ರ ಕಾಸರಗೋಡು.

ಅಶುದ್ಧವಾಗುತ್ತಿದೆ ಮೈಸೂರು; ಸಾಂಸ್ಕೃತಿಕ ನಗರಿಯಲ್ಲಿ ವಾಯುಮಾಲಿನ್ಯ ನಾಲ್ಕು ಪಟ್ಟು ಏರಿಕೆ!
ಅಳತೆ ಹೇಗೆ..?

ಮಾಲಿನ್ಯ ನಿಯಂತ್ರಣ ಮಂಡಳಿಯು ನಗರದ ಅಲ್ಲಲ್ಲಿ ನಿಗಾ ಕೇಂದ್ರ (ಸಿಎಎಕ್ಯುಎಂಎಸ್‌) ಗಳನ್ನು ಗುರುತಿಸಿದ್ದು, ನಿರಂತರವಾಗಿ ವಾಯು ಗುಣಮಟ್ಟವನ್ನು ದಾಖಲಿಸುವ ವ್ಯವಸ್ಥೆ ಮಾಡಿದೆ. ವಾಯು ಗುಣಮಟ್ಟದ ಪ್ರಮಾಣವನ್ನು ಏಕ್ಯೂಐ (ಏರ್‌ ಕ್ವಾಲಿಟಿ ಇಂಡೆಕ್ಸ್‌ ) ಮೂಲಕ ಅಳೆಯಲಾಗುತ್ತದೆ. 0 - 50 ಎಕ್ಯೂಐ ಇದ್ದರೆ 'ಉತ್ತಮ' (ಗುಡ್‌) ವಾಯು ಗುಣಮಟ್ಟ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಆರೋಗ್ಯದ ಮೇಲೆ ಹೆಚ್ಚು ಪರಿಣಾಮವಿರದು. 51 - 100 ಎಕ್ಯೂಐ ಇದ್ದರೆ 'ಸಮಾಧಾನಕರ' ಎಂದು ಪರಿಗಣಿಸಲಾಗುತ್ತದೆ.

ಅಲರ್ಜಿಗಳಿಗೆ ಸೂಕ್ಷ್ಮವಾಗಿ ಸ್ಪಂದಿಸುವವರಿಗೆ ಉಸಿರಾಟದ ಸಮಸ್ಯೆ ಉಂಟಾಗಬಹುದು. 101 - 200 ಎಕ್ಯೂಐ ಇದ್ದರೆ 'ಸಾಮಾನ್ಯ' (ಮಾಡರೇಟ್‌) ಎಂದು ವಿಭಾಗಿಸಲಾಗಿದೆ. ಇದರಿಂದ ಅಸ್ತಮಾದಂತಹ ರೋಗ ಹೊಂದಿರುವವರು, ಹೃದಯ ಕಾಯಿಲೆ ಹೊಂದಿರುವವರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. 201-300 ಎಕ್ಯೂಐ ಹೊಂದಿದ್ದರೆ 'ಕಳಪೆ' (ಪೂರ್‌) ಎಂದು ಕರೆಯಲಾಗುತ್ತದೆ. ನಿರಂತರವಾಗಿ ಈ ಗುಣಮಟ್ಟದ ಗಾಳಿ ಸೇವಿಸಿದರೆ ಉಸಿರಾಟದ ಸಮಸ್ಯೆಗಳು ಕಂಡು ಬರಬಹುದು.

ಧೂಳಿನ ಕಣಗಳು ಮನುಷ್ಯನ ದೇಹದೊಳಗೆ ಸೇರುವುದರಿಂದ ಶ್ವಾಸಕೋಶದ ನಾಳಗಳು ಸಂಕುಚಿತಗೊಳ್ಳುತ್ತವೆ. ಇದರಿಂದ ದಮ್ಮು, ಕೆಮ್ಮು, ಕಫ, ನಡೆದಾಡುವುದಕ್ಕೆ ಆಯಾಸ ಉಂಟಾಗಲಿದೆ. ನ್ಯೂಮೋನಿಯಾ, ವೈರಲ್‌ ಜ್ವರ ಕೂಡ ಕಣಿಸಿಕೊಳ್ಳುತ್ತವೆ. ರೋಗ ನಿರೋಧಕ ಶಕ್ತಿಯನ್ನು ಇದು ಕುಗ್ಗಿಸುವುದರಿಂದ ಹಲವು ಕಾಯಿಲೆಗಳಿಗೆ ಜನರು ತುತ್ತಾಗುತ್ತಾರೆ.
ಡಾ. ವಸುನೇತ್ರ ಕಾಸರಗೋಡು, ಶ್ವಾಸಕೋಶ ತಜ್ಞ, ಮಣಿಪಾಲ ಆಸ್ಪತ್ರೆ

ಬೇರೆ ನಗರಕ್ಕೆ ಹೋಲಿಸಿದರೆ ಬೆಂಗಳೂರೇ ಉತ್ತಮ

2021ರ ವರದಿಯ ಪ್ರಕಾರ ದೇಶದ ಅತ್ಯಂತ ಕೆಟ್ಟ ವಾಯು ಗುಣಮಟ್ಟ ಹೊಂದಿರುವ ಮೆಟ್ರೋ ನಗರದ ಪೈಕಿ ದಿಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಕೊಲ್ಕೊತ್ತಾ, ಮುಂಬಯಿ, ಚೆನ್ನೈ ಕ್ರಮವಾಗಿ ಮೊದಲ ನಾಲ್ಕು ಸ್ಥಾನದಲ್ಲಿದ್ದವು. ಈ ಎಲ್ಲಾ ನಗರಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರು ಉತ್ತಮವಾಗಿದ್ದು, ಇನ್ನಷ್ಟು ಜಾಗ್ರತೆ ವಹಿಸಬೇಕಿದೆ.

ವಾಹನಗಳೇ ಪ್ರಮುಖ ಕಾರಣ

ವಾಹನಗಳ ಸಂಖ್ಯೆ ಹೆಚ್ಚಳ ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ. ವಾಹನಗಳಿಂದ ಶೇ.42, ರಸ್ತೆಯ ಧೂಳಿನಿಂದ ಶೇ.20, ಕಟ್ಟಡ ತ್ಯಾಜ್ಯದಿಂದ ಶೇ.20 ಕೈಗಾರಿಕೆ ಮತ್ತು ಕಸವನ್ನು ಸುಡುವುದು ಸೇರಿದಂತೆ ಹಲವು ಮೂಲಗಳಿಂದ ಶೇ.18ರಷ್ಟು ಪಾಲು ನಗರದಲ್ಲಿ ಮಾಲಿನ್ಯ ಹೆಚ್ಚಳವಾಗುತ್ತಿದೆ ಎನ್ನುತ್ತಾರೆ ತಜ್ಞರು.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ