ಆ್ಯಪ್ನಗರ

ಬೆಂಗಳೂರಿನಲ್ಲಿ ಮೊದಲ ಸಲಿಂಗಿ ಮದುವೆ

ಬೆಂಗಳೂರು ನಗರದಲ್ಲಿ ಇದೇ ಮೊದಲ ಬಾರಿಗೆ ಸಲಿಂಗಿಜೋಡಿಯೊಂದು ಮದುವೆಯಾಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

Bangalore Mirror Bureau 5 Jul 2017, 1:11 pm
ಬೆಂಗಳೂರು: ನಗರದಲ್ಲಿ ಇದೇ ಮೊದಲ ಬಾರಿಗೆ ಸಲಿಂಗಿ ಜೋಡಿಯೊಂದು ಮದುವೆಯಾಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. 25 ವರ್ಷದ ಮಹಿಳೆಯೊಬ್ಬರು 21 ವರ್ಷದ ಮಹಿಳೆಯನ್ನು ಕೋರಮಂಗಲದ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.
Vijaya Karnataka Web all hell breaks loose as two women wed in koramangala
ಬೆಂಗಳೂರಿನಲ್ಲಿ ಮೊದಲ ಸಲಿಂಗಿ ಮದುವೆ


ಈ ಜೋಡಿಯಲ್ಲಿ ಕಿರಿಯ ಮಹಿಳೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈಗ ಜೋಡಿಗೆ ವಿಮೆನ್ ಹೆಲ್ಪ್‌ ಸೆಂಟರ್‌ನಲ್ಲಿ ಕೌನ್ಸೆಲಿಂಗ್‌ ನಡೆಸಲಾಗುತ್ತಿದ್ದು, ಅವರು ತಮ್ಮ ನಿರ್ಧಾರಕ್ಕೆ ಸಂಬಂಧಿಸಿದಂತೆ ವಾಸ್ತವಾಂಶಗಳನ್ನು ಅರಿತುಕೊಳ್ಳುವ ವಿಶ್ವಾಸವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅವರಿಬ್ಬರೂ ಪ್ರೌಢರು, ತಪ್ಪೇನು ಮಾಡಿಲ್ಲ ಎಂದು ಕೆಲವರು ವಕೀಲರು ಹೇಳಿದರೆ ಇಂಥ ಅಸ್ವಾಭಾವಿಕ ಸಂಬಂಧ ಶಿಕ್ಷಾರ್ಹ ಎಂದು ಕೆಲವರು ಹೇಳುತ್ತಾರೆ. ಜೋಡಿಯು ಮಾನಸಿಕ ಆರೋಗ್ಯ ಸಮಸ್ಯೆ, ಮಾನಸಿಕ ಅಸಮತೋಲನದಿಂದ ಬಳಲುತ್ತಿದೆ ಎಂದು ಪೋಷಕರು ದೂರು ನೀಡಿದಲ್ಲಿ ಮಾತ್ರ ಕಾನೂನಿನಡಿ ಏನಾದರೂ ಕ್ರಮಕ್ಕೆಅವಕಾಶವಿರುತ್ತದೆ ಎಂದು ಕೆಲವು ತಜ್ಞರು ಹೇಳಿದ್ದಾರೆ.

ಬಿಕಾಂ ಓದುತ್ತಿರುವ ಶಿಲ್ಪಾ ಮತ್ತು ಕಾಲ್‌ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿರುವ ಸಹನಾ ಮದುವೆಯಾಗಿರುವ ಜೋಡಿ.ಇಲ್ಲಿ ಸಹನಾ ಪತಿಯಾಗಿದ್ದು, ಶಿಲ್ಪಾ ಪತ್ನಿ. ಶಿಲ್ಪಾ ಸಾಂಪ್ರದಾಯಿಕ ಕುಟುಂಬಕ್ಕೆ ಸೇರಿದವರಾಗಿದ್ದು, ಸಹನಾ ಆಕೆಯನ್ನು ಮಾಲ್‌ಗಳಿಗೆ ಕರೆದುಕೊಂಡು ಹೋಗಿ ಆಧುನಿಕ ಬಟ್ಟೆಗಳು ಮತ್ತು ಉಡುಗೊರೆಗಳನ್ನು ನೀಡುತ್ತಿದ್ದರಂತೆ. ಮೊದಲಿಗೆ ಪ್ರೀತಿಯನ್ನು ವ್ಯಕ್ತಪಡಿಸಿದಾಗ ಶಿಲ್ಪಾ ನಿರಾಕರಿಸಿದ್ದರೂ ಕೊನೆಗೆ ಆಕೆಯನ್ನು ಒಪ್ಪಿಸುವಲ್ಲಿ ಸಹನಾ ಯಶಸ್ವಿಯಾಗಿದ್ದಾರೆ. ಮೇನಲ್ಲಿ ಇಬ್ಬರೂ ಮನೆ ಬಿಟ್ಟಿದ್ದರು. ಆಗ ಶಿಲ್ಪಾ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಜೋಡಿಯನ್ನು ಪತ್ತೆ ಹಚ್ಚಿದರಾದರೂ ಏನೂ ಮಾಡುವಂತಿರಲಿಲ್ಲ. ವಕೀಲರು ಮತ್ತು ಎನ್‌ಜಿಒವನ್ನು ಸಂಪರ್ಕಿಸಿದ ಜೋಡಿ ವಾಪಸ್‌ ಪೋಷಕರ ಬಳಿ ಹೋಗುವುದಿಲ್ಲ ಎಂದು ಹೇಳಿದೆ.

ಸಲಿಂಗಿ ವಿವಾಹ ಅಪರಾಧವಲ್ಲ ಎಂದು 2009ರಲ್ಲಿ ದಿಲ್ಲಿ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಬದಿಗೊತ್ತಿದ ಸುಪ್ರೀಂಕೋರ್ಟ್‌ 2013ರಲ್ಲಿ ಸಲಿಂಗಿ ವಿವಾಹ ಅಪರಾಧ ಎಂದು ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ