ಆ್ಯಪ್ನಗರ

ಅಂಫಾನ್‌ ಅಬ್ಬರ; ಬೆಂಗಳೂರಲ್ಲಿ ಭಾರಿ ಮಳೆ, ಇಟ್ಟಿಗೆ ಬಿದ್ದು ಯುವತಿ, ಮರ ಬಿದ್ದು ಮಹಿಳೆ ಸಾವು

ಬಿಎಸ್ ಸಿ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಅವರ ತಲೆ ಮೇಲೆ ಇಟ್ಟಿಗೆ ಬಿದ್ದಿದ್ದು ಪರಿಣಾಮ ತೀವ್ರಾಗಿವಾಗಿ ಗಾಯಗೊಂಡಿದ್ದ ಶಿಲ್ಪಾ ಅವರನ್ನ ತಕ್ಷಣವೇ ನಂದಿನಿ ಲೇಔಟ್‌ನ ಕಣ್ವಾ ಆಸ್ಪತ್ರೆಗೆ ಸೇರಿಸಲಾಗಿತ್ತು, ಆದರೆ ಅಷ್ಟರಲ್ಲೇ ಶಿಲ್ಪಾ ಕೊನೆಯುಸಿರೆಳೆದರು.

Vijaya Karnataka Web 26 May 2020, 11:27 pm
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ‌ ವರುಣನ ಅಬ್ಬರ ಜೋರಾಗಿದೆ. ಮಂಗಳವಾರ ಸಂಜೆ ಸುರಿದ ಮಳೆಗೆ ಇಬ್ಬರು ಬಲಿಯಾಗಿದ್ದಾರೆ. ನಂದಿನಿ ಲೇಔಟ್‌ನಲ್ಲಿ ಹಾಗೂ ಬೊಮ್ಮನಹಳ್ಳಿಯಲ್ಲಿ ನಡೆದ ದುರಂತದಲ್ಲಿ ಇಬ್ಬರು ಬಳಿಯಾಗಿದ್ದಾರೆ.
Vijaya Karnataka Web ಘಟನೆ ನಡೆದ ಸ್ಥಳ
ಘಟನೆ ನಡೆದ ಸ್ಥಳ


ನಗರದಲ್ಲಿ ಸುರಿದ ಗಾಳಿ ಸಮೇತ ಭಾರಿಮಳೆಯಿಂದಾಗಿ, ನಂದಿನಿ ಲೇಔಟ್ ನ ರಾಮಣ್ಣ ಬಡಾವಣೆಯಲ್ಲಿ 3ನೇ ಅಂತಸ್ತಿನ ಕಟ್ಟಡದಿಂದ ಇಟ್ಟಿಗೆ ಜಾರಿ ಪಕ್ಕದ ಮನೆಯ ಸೀಟಿನ ಮೇಲೆ ಬಿದ್ದಿದೆ.

ಈ ವೇಳೆ ಸೀಟಿನ ಮನೆಯಲ್ಲಿ ವಾಸವಿದ್ದ ರಾಜಣ್ಣ ಅವರ ಮಗಳು ಶಿಲ್ಪಾ (21) ಮೃತಪಟ್ಟಿದ್ದಾರೆ.

ಬಿಎಸ್ ಸಿ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಅವರ ತಲೆ ಮೇಲೆ ಇಟ್ಟಿಗೆ ಬಿದ್ದಿದ್ದು ಪರಿಣಾಮ ತೀವ್ರಾಗಿವಾಗಿ ಗಾಯಗೊಂಡಿದ್ದ ಶಿಲ್ಪಾ ಅವರನ್ನ ತಕ್ಷಣವೇ ನಂದಿನಿ ಲೇಔಟ್‌ನ ಕಣ್ವಾ ಆಸ್ಪತ್ರೆಗೆ ಸೇರಿಸಲಾಗಿತ್ತು, ಆದರೆ ಅಷ್ಟರಲ್ಲೇ ಶಿಲ್ಪಾ ಕೊನೆಯುಸಿರೆಳೆದರು.

ಈ ವಿಷಯ ತಿಳಿದ ಕೂಡಲೇ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಗೋಪಾಲಯ್ಯ ಸ್ಪತ್ರೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ 50 ಸಾವಿರ ರೂಪಾಯಿ ನಗದು ಪರಿಹಾರ ನೀಡಿದರು.

ಸ್ಥಳಕ್ಕೆ ಬಿ ಬಿ ಎಂ ಪಿ ಅಧಿಕಾರಿಗಳು, ನಂದಿನಿ ಲೇಔಟ್ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯಲ್ಲಿ ಧನುಷ್ ಎಂಬ ಹುಡುಗನಿಗೆ ಗಾಯಗಳಾಗಿದೆ.

ಬೊಮ್ಮನಹಳ್ಳಿಯ ಬೇಗೂರಿನಲ್ಲಿ ನಡೆದ ಮತ್ತೊಂದು ದುರಂತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ