ಆ್ಯಪ್ನಗರ

ಅಪಘಾತಕ್ಕೆ ಕಾರಣವಾಗಿದ್ದ ಬೈಕ್ ಬಿಡುಗಡೆ ಮಾಡಲು ಲಂಚ: ರೆಡ್‌ ಹ್ಯಾಂಡ್‌ ಆಗಿ ಎಸಿಬಿ ಬಲೆಗೆ ಬಿದ್ದ ಹೆಡ್‌ ಕಾನ್ಸ್‌ಟೇಬಲ್

'ಬೈಕ್‌ ಬಿಡುಗಡೆ ಮಾಡಲು ಆರ್‌ಟಿಒ ವರದಿ ಅಗತ್ಯವಿದೆ. ಆರ್‌ಟಿಒ ವರದಿಗೆ 5 ಸಾವಿರ ರೂ. ಖರ್ಚಾಗುತ್ತದೆ. ಅದರ ಜೊತೆಗೆ 1 ಸಾವಿರ ರೂ. ಹೆಚ್ಚುವರಿಯಾಗಿ ಕೊಡಬೇಕು' ಎಂದು ಮುರಳಿ ಬೇಡಿಕೆ ಇಟ್ಟಿದ್ದಾಗಿ ಆರೋಪಿಸಲಾಗಿದೆ.

Vijaya Karnataka 8 Feb 2020, 12:41 pm
ಬೆಂಗಳೂರು: ರಸ್ತೆ ಅಪಘಾತದಲ್ಲಿ ಜಪ್ತಿ ಮಾಡಲಾಗಿದ್ದ ಬೈಕ್‌ ಬಿಡುಗಡೆ ಮಾಡಲು 5 ಸಾವಿರ ರೂ. ಲಂಚ ಪಡೆದ ಆರೋಪದಲ್ಲಿ ಚಿಕ್ಕಜಾಲ ಸಂಚಾರ ಠಾಣೆಯ ಹೆಡ್‌ ಕಾನ್ಸ್‌ಟೇಬಲ್‌ ಮುರಳಿ ಎಂಬುವರನ್ನು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web police bribe
ಅಪಘಾತಕ್ಕೆ ಕಾರಣವಾಗಿದ್ದ ಬೈಕ್ ಬಿಡುಗಡೆ ಮಾಡಲು ಲಂಚ: ರೆಡ್‌ ಹ್ಯಾಂಡ್‌ ಆಗಿ ಎಸಿಬಿ ಬಲೆಗೆ ಬಿದ್ದ ಹೆಡ್‌ ಕಾನ್ಸ್‌ಟೇಬಲ್


ಚಿಕ್ಕಜಾಲ ಸಂಚಾರ ಠಾಣೆ ವ್ಯಾಪ್ತಿಯ ಸರ್ವಿಸ್‌ ರಸ್ತೆಯಲ್ಲಿ ಫೆಬ್ರವರಿ 1 ರಂದು ನಗರದ ನಿವಾಸಿಯೊಬ್ಬರ ಬೈಕ್‌ ಪಾದಚಾರಿಗೆ ಡಿಕ್ಕಿ ಹೊಡೆದಿತ್ತು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬೈಕ್‌ ಜಪ್ತಿ ಮಾಡಿದ್ದರು.

ಫೆಬ್ರವರಿ 4ರಂದು ಜಪ್ತಿ ಮಾಡಿದ್ದ ಬೈಕ್‌ ಬಿಡಿಸಿಕೊಳ್ಳಲು ಬೈಕ್‌ ಮಾಲೀಕ ಠಾಣೆಗೆ ಹೋಗಿ ಹೆಡ್‌ ಕಾನ್ಸ್‌ಟೇಬಲ್‌ ಮುರಳಿಯನ್ನು ಭೇಟಿ ಮಾಡಿದ್ದರು.

ಬಾಲಕಿಯರ ರೇಪ್ ಮಾಡಿ ಕೊಲ್ಲೋದೇ ಕೆಲಸ..! ವಿಕೃತ ಕಾಮಿಗೆ ಗಲ್ಲು ಶಿಕ್ಷೆಯಾದಾಗ ನಿಟ್ಟುಸಿರಿಟ್ಟ ಆತ್ಮಗಳು..!

'ಬೈಕ್‌ ಬಿಡುಗಡೆ ಮಾಡಲು ಆರ್‌ಟಿಒ ವರದಿ ಅಗತ್ಯವಿದೆ. ಆರ್‌ಟಿಒ ವರದಿಗೆ 5 ಸಾವಿರ ರೂ. ಖರ್ಚಾಗುತ್ತದೆ. ಅದರ ಜೊತೆಗೆ 1 ಸಾವಿರ ರೂ. ಹೆಚ್ಚುವರಿಯಾಗಿ ಕೊಡಬೇಕು' ಎಂದು ಮುರಳಿ ಬೇಡಿಕೆ ಇಟ್ಟಿದ್ದಾಗಿ ಆರೋಪಿಸಲಾಗಿದೆ. ಆದರೆ, ಲಂಚ ನೀಡಲು ಇಚ್ಚಿಸದ ಬೈಕ್‌ ಮಾಲೀಕ, ಎಸಿಬಿಗೆ ದೂರು ನೀಡಿದ್ದರು.

ಮಗಳ ಮೇಲೆ ಅತ್ಯಾಚಾರ ಮಾಡಲು ಫ್ರೆಂಡ್‌ಗೆ ಅನುಮತಿ ಕೊಟ್ಟಿದ್ದ ಮಹಾತಾಯಿ..! 14 ವರ್ಷದ ಬಾಲಕಿ ಈಗ ಗರ್ಭಿಣಿ

ಪ್ರಕರಣ ದಾಖಲಿಸಿಕೊಂಡ ಎಸಿಬಿ ಅಧಿಕಾರಿಗಳು, ಫೆಬ್ರವರಿ 6ರಂದು ಬೈಕ್‌ ಮಾಲೀಕನಿಂದ 5 ಸಾವಿರ ರೂ. ಲಂಚ ಪಡೆಯುವ ವೇಳೆ ಮುರಳಿಯನ್ನು ಬಂಧಿಸಿದ್ದಾರೆ. ಲಂಚದ ಹಣ ಜಪ್ತಿ ಮಾಡಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಎಸಿಬಿ ತಿಳಿಸಿದೆ.

ಮಹಿಳೆ ಶೌಚಗೃಹದಲ್ಲಿದ್ದಾಗ ಇಣುಕಿ ನೋಡಿ ಮೊಬೈಲ್‌ನಲ್ಲಿ ದೃಶ್ಯಾವಳಿ ಸೆರೆ ಹಿಡಿದ ಕಾಮುಕ..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ