ಆ್ಯಪ್ನಗರ

ಅಡಕೆ ವ್ಯಾಪಾರಿಯಿಂದ 26 ಲಕ್ಷ ಲೂಟಿ ಮಾಡಿದ್ದ ಪ್ರಕರಣ, ಸುಲಿಗೆಯಲ್ಲಿ ಎಸ್‌ಐ ಜತೆಗೆ ಇನ್ಸ್‌ಪೆಕ್ಟರ್‌ ಕೂಡ ಭಾಗಿ

ಅಡಕೆ ವ್ಯಾಪಾರಿಯಿಂದ 26.50 ಲಕ್ಷ ರೂ. ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐ ಜೀವನ್‌ ಕುಮಾರ್‌ ಮತ್ತು ಇನ್ಸ್‌ಪೆಕ್ಟರ್‌ ಯೋಗೇಶ್‌ ಕುಮಾರ್‌ ಕೂಡ ಭಾಗಿಯಾಗಿರುವುದು ದೃಢಪಟ್ಟಿದೆ.

Vijaya Karnataka Web 14 Sep 2020, 7:33 am
ಬೆಂಗಳೂರು: ಸಿಟಿ ಮಾರುಕಟ್ಟೆ ಠಾಣೆ ವ್ಯಾಪ್ತಿಯಲ್ಲಿ ಕಳೆದ ತಿಂಗಳು ಅಡಕೆ ವ್ಯಾಪಾರಿಯಿಂದ 26.50 ಲಕ್ಷ ರೂ. ದರೋಡೆ ಮಾಡಿದ್ದ ಪ್ರಕರಣದಲ್ಲಿ ಎಸ್‌.ಜೆ. ಪಾರ್ಕ್ ಠಾಣೆಯ ಎಸ್‌ಐ ಜೀವನ್‌ ಕುಮಾರ್, ಪತ್ರಕರ್ತ‌ ಮತ್ತು ಗ್ಯಾಂಗ್‌ನ ಜತೆಗೆ ಅದೇ ಠಾಣೆಯ ಇನ್ಸ್‌ಪೆಕ್ಟರ್‌ ಯೋಗೇಶ್‌ ಕುಮಾರ್‌ ಕೂಡ ಭಾಗಿಯಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
Vijaya Karnataka Web Areca businessman robbery case


ಇನ್ಸ್‌ಪೆಕ್ಟರ್‌ ಯೋಗೇಶ್‌ ಅವರನ್ನು ಕೂಡ ಪ್ರಕರಣದಲ್ಲಿ ಆರೋಪಿ ಮಾಡಿ ವಿಚಾರಣೆ ನಡೆಸಲಾಗುತ್ತದೆ ಎಂದು ಉನ್ನತ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ದರೋಡೆ ಹಣದಲ್ಲಿ ಹೆಚ್ಚಿನ ಹಣವನ್ನು ಇನ್ಸ್‌ಪೆಕ್ಟರ್‌ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಎಸ್‌ಐ ಜೀವನ್‌ಕುಮಾರ್‌, ಸಂಬಂಧಿ ಪತ್ರಕರ್ತ ಜ್ಞಾನಪ್ರಕಾಶ್‌ ಸೇರಿದಂತೆ ದರೋಡೆಯಲ್ಲಿ ಭಾಗಿಯಾದ ಆರೋಪಿಗಳ ಬಂಧನದ ಬಳಿಕ ತನಿಖೆ ಮುಂದುವರಿಸಿದಾಗ ಇನ್ಸ್‌ಪೆಕ್ಟರ್‌ ಕೂಡ ಭಾಗಿಯಾಗಿರುವುದು ಗೊತ್ತಾಗಿದೆ.

ಅಡಕೆ ವ್ಯಾಪಾರಿಯ 26 ಲಕ್ಷ ರೂ. ದರೋಡೆ: ನಿವೃತ್ತ ಪೇದೆ ಸೇರಿ ಮತ್ತೆ ನಾಲ್ವರ ಬಂಧನ

ಮಧ್ಯಾಹ್ನ 3 ಗಂಟೆ ಸುಮಾರಿಗೆ ದರೋಡೆ ಮಾಡಿ ತೆಗೆದುಕೊಂಡ ಹೋದ ಹಣವನ್ನು ಸಂಜೆ ವೇಳೆಗೆ ಠಾಣೆಯಲ್ಲಿ ಹಂಚಿಕೊಂಡಿದ್ದಾರೆ. ಬೇರೆ ಠಾಣೆ ವ್ಯಾಪ್ತಿಗೆ ತೆರಳಿ ದರೋಡೆ ಮಾಡಿದ್ದರೂ, ತಮ್ಮದೇ ಠಾಣೆ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಿ ಪ್ರಕರಣ ದಾಖಲಿಸಿರುವುದಾಗಿ ಸುಳ್ಳು ಮಾಹಿತಿಯನ್ನು ಜೀವನ್‌ ಕುಮಾರ್‌ ನಮೂದಿಸಿದ್ದರು. ಈ ವಿಚಾರ ಇನ್ಸ್‌ಪೆಕ್ಟರ್‌ಗೆ ಗೊತ್ತಿದ್ದರೂ ಸುಮ್ಮನಿದ್ದರು ಎಂದು ಮೂಲಗಳು ತಿಳಿಸಿವೆ.

ದೆಹಲಿ ಗಲಭೆ ಪ್ರಕರಣ: ಜೆಎನ್‌ಯು ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಬಂಧನ

ಎಸ್‌.ಜೆ.ಪಾರ್ಕ್ ಠಾಣೆಗೆ ವರ್ಗಾವಣೆಯಾಗಿ ಬಂದ ನಾಲ್ಕೇ ದಿನಗಳಲ್ಲಿಇನ್ಸ್‌ಪೆಕ್ಟರ್‌ ಯೋಗೇಶ್‌ ದರೋಡೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾರೆ. ಇದಕ್ಕೂ ಮುನ್ನ ಅವರು ನಾಲ್ಕು ವರ್ಷಗಳಿಂದ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಕಾರ್ಯನಿರ್ವಹಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಟ್ರಾಫಿಕ್‌ ದಂಡ ಸಂಗ್ರಹಿಸುವಲ್ಲಿ ಸರಕಾರಕ್ಕೆ ವಂಚಿಸಿದ ಆರೋಪದ ಮೇರೆಗೆ ಇಲಾಖೆ ವಿಚಾರಣೆ ಎದುರಿಸಿದ್ದರು. ವೇತನ ಮುಂಬಡ್ತಿ ತಡೆ ಹಿಡಿಯಲಾಗಿತ್ತು ಎಂದು ತಿಳಿದುಬಂದಿದೆ.

ಸ್ಟಂಟ್‌ ಮಾಡಲು ಹೋದವನ ವಿರುದ್ಧ ‘ಕೊಲೆ’ ಕೇಸ್‌ ದಾಖಲು, ಆತ ಮಾಡಿದ್ದು ಏನು?

ಆ.19ರಂದು ತುಮಕೂರು ಮೂಲದ ಅಡಕೆ ವ್ಯಾಪಾರಿಯ ಕೆಲಸಗಾರರಿಬ್ಬರು ಬೆಂಗಳೂರು ನಗರದಲ್ಲಿಅಡಕೆ ಮಾರಿ ಬಂದ ಹಣದೊಂದಿಗೆ ಚಿಕ್ಕಪೇಟೆ ಮೆಟ್ರೊ ನಿಲ್ದಾಣದ ಬಳಿ ಬಂದಿದ್ದರು. ಅಲ್ಲಿಗೆ ಬಂದ ಎಸ್‌ಐ ಮತ್ತು ತಂಡ ಬಲವಂತವಾಗಿ ಇಬ್ಬರು ಕೆಲಸಗಾರರನ್ನು ಕಾರಿನಲ್ಲಿ ಕೂರಿಸಿಕೊಂಡು, ಬೆದರಿಸಿ ಹಣ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಕೆ.ಆರ್‌.ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ