ಆ್ಯಪ್ನಗರ

#Metoo: ಎಫ್‌ಐಆರ್‌ ರದ್ದು ಕೋರಿದ ಶ್ರುತಿ ಹರಿಹರನ್‌ ಅರ್ಜಿ ವಿಚಾರಣೆ ಮುಂದೂಡಿಕೆ

ಮತ್ತೊಂದು ಕಾನೂನು ಹೋರಾಟ

Vijaya Karnataka Web 14 Nov 2018, 2:44 pm
ಬೆಂಗಳೂರು: ತಮ್ಮ ವಿರುದ್ಧ ನಟ ಅರ್ಜುನ್‌ ಸರ್ಜಾ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿರುವ ಪ್ರಕರಣ ರದ್ದು ಕೋರಿ ನಟಿ ಶ್ರುತಿ ಹರಿಹರನ್‌ ಹೈಕೋರ್ಟ್‌ ಮೊರೆ ಹೋಗಿದ್ದು, ವಿಚಾರಣೆಯನ್ನು ಮುಂದೂಡಿಕೆ ಮಾಡಲಾಗಿದೆ.
Vijaya Karnataka Web ಶ್ರುತಿ ಹರಿಹರನ್‌ ಅರ್ಜುನ್‌ ಸರ್ಜಾ
ಶ್ರುತಿ ಹರಿಹರನ್‌ ಅರ್ಜುನ್‌ ಸರ್ಜಾ


ಈ ನಡುವೆ ಅರ್ಜುನ್‌ ಸರ್ಜಾ ಅವರನ್ನು ಬಂಧಿಸದಂತೆ ನೀಡಿದ್ದ ಆದೇಶವನ್ನೂ ಈ ತಿಂಗಳ 28ರವರೆಗೆ ಮುಂದೂಡಲಾಗಿದೆ.

ಕಳೆದ ಅ.25ರಂದು ಸೈಬರ್‌ ಪೊಲೀಸ್‌ ಠಾಣೆಯಲ್ಲಿ ತನ್ನ ವಿರುದ್ಧ ದುರುದ್ದೇಶಪೂರಿತವಾಗಿ ಕೇಸ್‌ ದಾಖಲಿಸಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಹಾಗಾಗಿ ಎಫ್‌ಐಆರ್‌ ರದ್ದು ಪಡಿಸಬೇಕು ಎಂದು ಅವರು ಕೋರಿದ್ದಾರೆ.

ಅರ್ಜುನ್‌ ಸರ್ಜಾ ಅವರ ಮ್ಯಾನೇಜರ್ ಕೇಸ್‌ ದಾಖಲಿಸಿದ್ದರಿಂದ ಎಫ್‌ಐಆರ್ ಹಾಕಲಾಗಿದೆ. ಇದನ್ನು ರದ್ದುಪಡಿಸಬೇಕು ಎಂದ ಶ್ರುತಿ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಅರ್ಜುನ್‌ ಸರ್ಜಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹೇಳಿಕೆ ನೀಡಿರುವುದು ವಂಚನೆ ಮಾಡಿದ್ದಾರೆ ಎಂದು ಅರ್ಜುನ್‌ ಸರ್ಜಾ ಪರವಾಗಿ ಶಿವಾರ್ಜುನ್‌ ದೂರು ಸಲ್ಲಿಸಿದ್ದರು.

ಆದರೆ ಅರ್ಜುನ್‌ ಸರ್ಜಾ ಅವರೊಂದಿಗೆ ಯಾವುದೇ ರೀತಿಯ ಹಣಕಾಸಿನ ವಹಿವಾಟು ನಡೆಸಿಲ್ಲ. ಹೀಗಿರುವಾಗ ವಂಚನೆ ಹೇಗೆ ಮಾಡಲು ಸಾಧ್ಯ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಅರ್ಜುನ್‌ ಸರ್ಜಾ ಬಗ್ಗೆ ಯಾವುದೇ ರೀತಿಯಲ್ಲೂ ಅವಹೇಳನ ಮಾಡಿಲ್ಲ. ನನಗಾದ ನೋವು ಹೇಳಿಕೊಂಡಿದ್ದೇನೆ ಅಷ್ಟೇ ಎಂದು ಶ್ರುತಿ ಹರಿಹರನ್‌ ಅರ್ಜಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ