ಆ್ಯಪ್ನಗರ

ಲೌಡ್‌ ಸ್ಪೀಕರ್‌ ಹಾಕಿದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸ್‌ ಮೇಲೆ ಹಲ್ಲೆ

ಅಕ್ಕ ಪಕ್ಕದವರಿಗೆ ತೊಂದರೆ ಆಗುವಂತೆ ದೊಡ್ಡದಾಗಿ ಮ್ಯೂಸಿಕ್‌ ಹಾಕಿ ಹುಟ್ಟು ಹಬ್ಬ ಆಚರಿಸುತ್ತಿದ್ದುದ್ದನ್ನು ಪ್ರಶ್ನಿಸಿದ ಕಾರಣಕ್ಕೆ ಕರ್ತವ್ಯ ನಿರತ ಪೊಲೀಸ್‌ ಸಿಬ್ಬಂದಿ ಮೇಲೆ ಈಶಾನ್ಯ ಭಾರತದ ಯುವತಿಯೊಬ್ಬರು ಹಲ್ಲೆ ನಡೆಸಿರುವ ಬಗ್ಗೆ ವಿವೇಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Vijaya Karnataka 28 Feb 2019, 5:00 am
ಬೆಂಗಳೂರು : ಅಕ್ಕ ಪಕ್ಕದವರಿಗೆ ತೊಂದರೆ ಆಗುವಂತೆ ದೊಡ್ಡದಾಗಿ ಮ್ಯೂಸಿಕ್‌ ಹಾಕಿ ಹುಟ್ಟು ಹಬ್ಬ ಆಚರಿಸುತ್ತಿದ್ದುದ್ದನ್ನು ಪ್ರಶ್ನಿಸಿದ ಕಾರಣಕ್ಕೆ ಕರ್ತವ್ಯ ನಿರತ ಪೊಲೀಸ್‌ ಸಿಬ್ಬಂದಿ ಮೇಲೆ ಈಶಾನ್ಯ ಭಾರತದ ಯುವತಿಯೊಬ್ಬರು ಹಲ್ಲೆ ನಡೆಸಿರುವ ಬಗ್ಗೆ ವಿವೇಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Vijaya Karnataka Web attack on police
ಲೌಡ್‌ ಸ್ಪೀಕರ್‌ ಹಾಕಿದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸ್‌ ಮೇಲೆ ಹಲ್ಲೆ


ಫೆ.26 ರಂದು ಘಟನೆ ನಡೆದಿದೆ. ಕೋರಮಂಗಲ 6ನೇ ಬ್ಲಾಕ್‌ನ ಮನೆಯೊಂದರಲ್ಲಿ ಐವರು ಯುವಕರು ಮತ್ತು ಒಬ್ಬ ಯುವತಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ತೊಡಗಿದ್ದರು. ಇವರು ಗಟ್ಟಿಯಾಗಿ ಸಂಗೀತ ಹಾಕಿ ಕಿರಿಕಿರಿ ಮಾಡುತ್ತಿದ್ದಾರೆ ಎಂದು ಅಕ್ಕ ಪಕ್ಕದವರು ಪೊಲೀಸ್‌ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಹೊಯ್ಸಳ ಸಿಬ್ಬಂದಿ ಅಲ್ಲಿದ್ದವರಿಗೆ ತಿಳಿ ಹೇಳುತ್ತಿರುವ ಹೊತ್ತಲ್ಲೇ ಯುವತಿ ಹಲ್ಲೆ ನಡೆಸಿದ್ದಾಗಿ ದೂರು ದಾಖಲಾಗಿದ್ದು ಹಲ್ಲೆ ನಡೆಸಿದ ಯುವತಿಯನ್ನು ಆಕೆಯ ಬಾಯ್‌ಫ್ರೆಂಡ್‌ ಸಮೇತ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ