ಆ್ಯಪ್ನಗರ

ಬೆಂಗಳೂರು: ಏರ್‌ ಶೋ ಹಿನ್ನೆಲೆ ಜ.17ರಿಂದ ಫೆ.9ರವರೆಗೆ ಮಾಂಸ ಮಾರಾಟ ನಿಷೇಧ..!

ಯಲಹಂಕ ವಾಯುನೆಲೆಯ ಸುತ್ತಮುತ್ತಲಿನ 10 ಕಿ.ಮೀ. ವ್ಯಾಪ್ತಿಯ ಪ್ರದೇಶಗಳಲ್ಲಿ ಜನವರಿ 17 ರಿಂದ ಫೆಬ್ರವರಿ 9 ರವರೆಗೆ ಮಾಂಸ ಮಾರಾಟ ಅಂಗಡಿಗಳನ್ನು ಮುಚ್ಚಲು ಸೂಚಿಸಲಾಗಿದೆ. ಹಾಗೆಯೇ ಹೋಟೆಲ್‌, ಡಾಬಾಗಳಲ್ಲಿ ಮಾಂಸಾಹಾರ ತಯಾರಿಕೆ ಮತ್ತು ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ.

Vijaya Karnataka Web 16 Jan 2021, 8:40 am
ಬೆಂಗಳೂರು: ನಗರದಲ್ಲಿ ಫೆಬ್ರವರಿ 3 ರಿಂದ 5ರವರೆಗೆ ವೈಮಾನಿಕ ಪ್ರದರ್ಶನ ನಡೆಯಲಿರುವ ಹಿನ್ನೆಲೆಯಲ್ಲಿ ಯಲಹಂಕ ವಾಯುನೆಲೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ.
Vijaya Karnataka Web meat shop
Picture used for representational purpose only


ಯಲಹಂಕ ವಾಯುನೆಲೆಯ ಸುತ್ತಮುತ್ತಲಿನ 10 ಕಿ.ಮೀ. ವ್ಯಾಪ್ತಿಯ ಪ್ರದೇಶಗಳಲ್ಲಿ ಜನವರಿ 17 ರಿಂದ ಫೆಬ್ರವರಿ 9 ರವರೆಗೆ ಮಾಂಸ ಮಾರಾಟ ಅಂಗಡಿಗಳನ್ನು ಮುಚ್ಚಲು ಸೂಚಿಸಲಾಗಿದೆ. ಹಾಗೆಯೇ ಹೋಟೆಲ್‌, ಡಾಬಾಗಳಲ್ಲಿ ಮಾಂಸಾಹಾರ ತಯಾರಿಕೆ ಮತ್ತು ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ.

ಏರ್‌ಶೋಗೆ ಬೆಂಗಳೂರು ಸಜ್ಜು: ಸಿದ್ಧತೆ ಸಮಾಧಾನ ತಂದಿದೆ ಎಂದ ರಾಜ್‌ನಾಥ್ ಸಿಂಗ್‌
ನಿಯಮ ಉಲ್ಲಂಘಿಸಿದವರ ವಿರುದ್ಧ ಕೆಎಂಸಿ ಕಾಯಿದೆ 1976ರ ಸೆಕ್ಷನ್‌ 2(22) ಹಾಗೂ ಸೆಕ್ಷನ್‌ 353 (5)ರ ಅನ್ವಯ ಮತ್ತು ಭಾರತೀಯ ಏರ್‌ಕ್ರಾಫ್ಟ್‌ ರೂಲ್ಸ್‌ 1937ರ ನಿಯಮ 91ರ ಪ್ರಕಾರ ಕಾನೂನುರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆಯ ಜಂಟಿ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು: ಕಸ್ಟಮರ್‌ ಕೇರ್‌ಗೆ ಕರೆ ಮಾಡಿ ₹1.56 ಲಕ್ಷ ಕಳೆದುಕೊಂಡ..! ಎಚ್ಚರ ನಿಮಗೂ ಕರೆ‌ ಬರಬಹುದು..!
ಏರ್‌ ಶೋ ತಾಲೀಮು ನಡೆಸಲಿರುವ ಹಾಗೂ ದೇಶ ವಿದೇಶಗಳಿಂದ ಹೆಚ್ಚಿನ ಸಂಖ್ಯೆಯ ಲೋಹದ ಹಕ್ಕಿಗಳು ನಗರಕ್ಕೆ ಆಗಮಿಸಲಿರುವುದರಿಂದ ಈ ವೇಳೆಯಲ್ಲಿ ಪಕ್ಷಿಗಳ ಹಾರಾಟಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇನ್ನೊಂದೆಡೆ ಬಿವಿಎಂಪಿಯ ಈ ನಿರ್ಧಾರ ಮಾಂಸಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ