ಆ್ಯಪ್ನಗರ

ಸ್ವಂತ ಮಗನನ್ನೇ ಮುಗಿಸಲು ಇಬ್ಬರು ಯುವಕರಿಗೆ ಸುಫಾರಿ ಕೊಟ್ಟ ಬೆಂಗಳೂರಿನ ಉದ್ಯಮಿ..!

ಜನವರಿ 12ರಂದು ಕೇಶವ ಪ್ರಸಾದ್ ಎಂಬ ವ್ಯಕ್ತಿ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ತನ್ನ ಮಗ ಕೌಶಲ್ ಪ್ರಸಾದ್ ಜನವರಿ 10ರಿಂದ ಕಾಣೆಯಾಗಿದ್ದಾನೆ ಎಂದು ಆರೋಪಿಸಿ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇನ್ನೊಂದೆಡೆ ಅದೇ ದಿನ ಎಲೆಮಲ್ಲಪ್ಪ ಕೆರೆ ಬಳಿ ಎಸೆದಿದ್ದ ಮೂರು ಗೋಣಿಗಳಿಂದ ದುರ್ವಾಸನೆ ಬಂದ ಹಿನ್ನೆಲೆ ಅವಲಹಳ್ಳಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು.

Vijaya Karnataka Web 20 Jan 2021, 2:21 pm
ಬೆಂಗಳೂರು: ತನ್ನ ಸ್ವಂತ ಮಗನಿಗೆ ಮುಹೂರ್ತವಿಟ್ಟ 50 ವರ್ಷದ ಉದ್ಯಮಿಯೊಬ್ಬ, ಇಬ್ಬರು ಯುವಕರಿಗೆ ಸುಪಾರಿ ಕೊಟ್ಟು ಕೊಲೆ ಮಾಡಿದ ಬಳಿಕ ಪೊಲೀಸರಿಗೆ ತಗ್ಲಾಕ್ಕೊಂಡಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
Vijaya Karnataka Web police arrest


ಇದೇ ಜನವರಿ 12ರಂದು ಬೆಂಗಳೂರಿನ ಅವಲಹಳ್ಳಿಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲೇಶ್ವರಂ 17ನೇ ಕ್ರಾಸ್‌ ನಿವಾಸಿ ಬಿವಿ ಕೇಶವ ಪ್ರಸಾದ್(50), ತಿಪ್ಪಸಂದ್ರ ನಿವಾಸಿಗಳಾದ ನವೀನ್ ಕುಮಾರ್ ಮತ್ತು ಕೇಶವ್ ಎಂಬ ಯುವಕರನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ಪೊಲೀಸರ ತನಿಖೆಯಲ್ಲಿ ಇವರೇ ಆ ಕೊಲೆ ಪ್ರಕರಣದ ಆರೋಪಿಗಳು ಎಂದು ಸಾಬೀತಾಗಿದೆ.
ಲವ್ವಿಡವ್ವಿಗೆ ಅಡ್ಡಿಯಾಗಿದ್ದ ಗಂಡನ ಕೊಂದು ಕಸದ ರಾಶಿಯಲ್ಲಿ ಹೂತಾಕಿದ್ದ ಖತರ್ನಾಕ್‌ಗಳು ತಗ್ಲಾಕ್ಕೊಂಡ್ರು!
ಘಟನೆಯ ವಿವರ:
ಜನವರಿ 12ರಂದು ಕೇಶವ ಪ್ರಸಾದ್ ಎಂಬ ವ್ಯಕ್ತಿ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ತನ್ನ ಮಗ ಕೌಶಲ್ ಪ್ರಸಾದ್ ಜನವರಿ 10ರಿಂದ ಕಾಣೆಯಾಗಿದ್ದಾನೆ ಎಂದು ಆರೋಪಿಸಿ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಮಲ್ಲೇಶ್ವರಂ 18ನೇ ಮೈಲಿಗೆ ತನ್ನ ಗೆಳೆಯರೊಂದಿಗೆ ಹೋಗಿದ್ದ ಮಗ ಕೌಶಲ್ ಪ್ರಸಾದ್ ಮರಳಿ ಮನೆಗೆ ಬಂದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಇನ್ನೊಂದೆಡೆ ಅದೇ ದಿನ ಎಲೆಮಲ್ಲಪ್ಪ ಕೆರೆ ಬಳಿ ಎಸೆದಿದ್ದ ಮೂರು ಗೋಣಿಗಳಿಂದ ದುರ್ವಾಸನೆ ಬಂದ ಹಿನ್ನೆಲೆ ಅವಲಹಳ್ಳಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಅದರಂತೆ ಸ್ಥಳಕ್ಕೆ ಬಂದ ಪೊಲೀಸರು ಗೋಣಿಯನ್ನು ತೆರೆದಾಗ ಅದರಲ್ಲಿ ತಲೆ, ಕೈ ಕಾಲುಗಳು ಬೇರ್ಪಟ್ಟ ಮನುಷ್ಯನ ದೇಹ ಇರೋದನ್ನು ಕಂಡು ಅಚ್ಚರಿಗೆ ಒಳಗಾಗಿದ್ದರು. ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದಾಗ ಅದು ಕೌಶಲ್‌ ಪ್ರಸಾದ್ ಅವರ ದೇಹವೆಂದೇ ಖಚಿತವಾಗಿತ್ತು.ನಂತರ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ರವಾನಿಸಲಾಗಿತ್ತು.

ಆಹಾರ ಸರಬರಾಜು ನೆಪದಲ್ಲಿ ಐಟಿ ಕಂಪನಿಗಳಿಗೆ ವಂಚನೆ; ಮಹಿಳೆ ಬಂಧನ
ಸಿಸಿಟಿವಿ ಫೂಟೇಜ್‌ನಿಂದ ಕೊಲೆ ರಹಸ್ಯ ಬಯಲು..!
ಕೌಶಲ್‌ ಅವರು ಮಲ್ಲೇಶ್ವರಂ 18ನೇ ಮೈಲಿಯಲ್ಲಿ ಬಿಳಿ ಬಣ್ಣದ ಮಾರುತಿ ಝೆನ್ ಕಾರ್‌ನಲ್ಲಿ ತೆರಳಿದಾಗ ಅವರನ್ನು ನವೀನ್‌ ಕುಮಾರ್ ಮತ್ತು ಕೇಶವ್ ಹಿಂಬಾಲಿಸಿಕೊಂಡು ಹೋಗಿರೋದು ಹತ್ತಿರದ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿತ್ತು. ಬಳಿಕ ಕೆಆರ್‌ಪುರಂ ಮತ್ತು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಅದೇ ಕಾರು ಎಲಿಮಲ್ಲಪ್ಪ ಕೆರೆ ಕಡೆ ಚಲಿಸಿರುವುದು ಗೊತ್ತಾಗಿದೆ. ಈ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿ ವಿಚಾರಿಸಿದಾಗ ಕೊಲೆ ಮಾಡುವ ಒಂದೆರಡು ದಿನಗಳ ಹಿಂದೆ ಆರೋಪಿಗಳು ಡೀಲರ್ ಕೈಯಿಂದ ಒಂದು ಲಕ್ಷ ನೀಡಿ ಕಾರನ್ನು ಖರೀದಿಸಿರೋದು ತಿಳಿದು ಬಂದಿದೆ. ಆರೋಪಿಗಳ ಬಾಯಿ ಬಿಡಿಸಿದಾಗ ಕೊಲೆಯಾದ ಕೌಶಲ್‌ನ ತಂದೆಯೇ ನಮಗೆ ಮೂರು ಲಕ್ಷ ರೂಪಾಯಿಗೆ ಕೊಲೆ ಮಾಡುವಂತೆ ಸುಪಾರಿ ನೀಡಿದ್ದಾಗಿ ಹೇಳಿದ್ದಾರೆ. ಅಲ್ಲದೇ ಅಡ್ವಾನ್ಸ್ ಆಗಿ ಒಂದು ಲಕ್ಷ ರೂಪಾಯಿ ನೀಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ವೆಬ್‌ಸೈಟ್‌ನಿಂದ ನಂಬರ್‌ ಪಡೆದು ಹನಿಟ್ರ್ಯಾಪ್‌; ಅವಿವಾಹಿತರನ್ನೇ ಟಾರ್ಗೆಟ್‌ ಮಾಡುತ್ತಿದ್ದ ಮಾಜಿ ಟೀಚರ್ ಅರೆಸ್ಟ್‌..!
ಅದರಂತೆ ಕೇಶವ ಪ್ರಸಾದ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಮಗ ಕೌಶಲ್ ಪ್ರಸಾದ್‌ ಆಸ್ತಿಗಾಗಿ ದಿನನಿತ್ಯ ಕಿರುಕುಳ ನೀಡುತ್ತಿದ್ದ. ನಾವು ಆತನನ್ನು ಸಾಫ್ಟ್‌ವೇರ್‌ ಇಂಜಿನಿಯರ್ ಮಾಡಲು ಸಾಕಷ್ಟು ಸಹಾಯ ಮಾಡಿದ್ದೇವೆ. ಅದಾಗ್ಯೂ ಆತ ನಮಗೆ ಕಿರುಕುಳ ನೀಡುತ್ತಿದ್ದ. ಅಲ್ಲದೇ ಆತ ತನ್ನ ತಾಯಿಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದ. ಇದರಿಂದ ಬೇಸತ್ತು ನನ್ನ ಎರಡನೇ ಮಗನ ಸಹಪಾಠಿಗಳಿಗೆ ಕೊಲೆ ಮಾಡುವಂತೆ ಸುಪಾರಿ ನೀಡಿದ್ದಾಗಿ ಪೊಲೀಸರ ಬಳಿ ಬಾಯ್ಬಿಟ್ಟಿದ್ದಾನೆ. ಮೃತ ಕೌಶಲ್‌ನನ್ನು ಸರೋವರದ ಬಳಿ ಕಾರ್‌ನಲ್ಲಿ ಕರೆದುಕೊಂಡು ಹೋಗಿದ್ದ ಆರೋಪಿಗಳು ಆತನಿಗೆ ಸಾರಾಯಿಯಲ್ಲಿ ನಿದ್ದೆ ಮಾತ್ರೆ ಹಾಕಿ ಕುಡಿಸಿದ್ದರು. ಬಳಿಕ ಹಿಂದಿನ ಸೀಟ್‌ನಲ್ಲಿ ಕುಳಿತು ಆತನ ಶಿರಚ್ಛೇದ ಮಾಡಿ, ಕೈ ಕಾಲುಗಳನ್ನು ಕತ್ತರಿಸಿ ಗೋಣಿಯಲ್ಲಿ ತುಂಬಿಸಿರುವುದಾಗಿ ಪೊಲೀಸರಲ್ಲಿ ಬಾಯಿಬಿಟ್ಟಿದ್ದಾರೆ. ಪ್ರಕರಣ ಸಂಬಂಧ ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ