ಆ್ಯಪ್ನಗರ

ದೀಪಾವಳಿ ಮುನ್ನೆಚ್ಚರಿಕೆ: ಪಟಾಕಿ ಅವಗಡ ನಿಭಾಯಿಸಲು ಆಸ್ಪತ್ರೆಗಳು ಸಜ್ಜು

ದೀಪಾವಳಿ ಹಬ್ಬದ ವೇಳೆ ಪಟಾಕಿ ಸಿಡಿತದಿಂದ ಗಾಯಗೊಳ್ಳುವವರ ಚಿಕಿತ್ಸೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಮಿಂಟೋ ಕಣ್ಣಾಸ್ಪತ್ರೆ ಸೇರಿದಂತೆ ನಗರದ ಹಲವು ಆಸ್ಪತ್ರೆಗಳು ಸಿದ್ಧತೆ ಮಾಡಿಕೊಂಡಿವೆ. ವಿವಿಧ ಆಸ್ಪತ್ರೆಗಳ ಸಹಾಯವಾಣಿ ಸೇರಿದಂತೆ ಅಗತ್ಯ ಮಾಹಿತಿ ಇಲ್ಲಿದೆ.

Vijaya Karnataka 23 Oct 2019, 8:23 pm
ಬೆಂಗಳೂರು: ದೀಪಾವಳಿ ಹಬ್ಬದ ವೇಳೆ ಪಟಾಕಿ ಸಿಡಿತದಿಂದ ಗಾಯಗೊಳ್ಳುವವರ ಚಿಕಿತ್ಸೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಮಿಂಟೋ ಕಣ್ಣಾಸ್ಪತ್ರೆ ಸೇರಿದಂತೆ ನಗರದ ಹಲವು ಆಸ್ಪತ್ರೆಗಳು ಸಿದ್ಧತೆ ಮಾಡಿಕೊಂಡಿವೆ. ಮಿಂಟೋದಲ್ಲಿ60 ಹಾಸಿಗೆಗಳನ್ನು ಪ್ರತ್ಯೇಕವಾಗಿರಿಸಿ ವಾರ್ಡ್‌ ರೂಪಿಸಲಾಗಿದೆ.
Vijaya Karnataka Web deepavali crackers eye damage


ದೀಪಾವಳಿ ಬಂತೆಂದರೆ ಮಕ್ಕಳು ಮಾತ್ರವಲ್ಲದೆ ಹಿರಿಯರು ಕೂಡ ಪಟಾಕಿ ಸಿಡಿಸಿ ಗಾಯಗೊಳ್ಳುತ್ತಾರೆ. ಇಂಥವರಿಗೆ ತುರ್ತು ಚಿಕಿತ್ಸೆ ಅಗತ್ಯವಿರುವುದರಿಂದ ಆಸ್ಪತ್ರೆಗಳು ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡಿವೆ. ಮಿಂಟೋ ಕಣ್ಣಾಸ್ಪತ್ರೆಯಲ್ಲಿಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಾರ್ಡ್‌ಗಳನ್ನು ಸಿದ್ಧಪಡಿಸಲಾಗಿದೆ. 60 ಹಾಸಿಗೆಗಳನ್ನು ಸ್ವಚ್ಛವಾಗಿರಿಸಿ, ಕಿಟಕಿಗಳಿಗೆ ಪರದೆ ಹಾಕಿ ಹೊರಗಿನಿಂದ ಗಾಳಿಯಾಡದಂತೆ ವ್ಯವಸ್ಥೆ ಮಾಡಲಾಗಿದೆ. 8-10 ಹಾಸಿಗೆಗಳನ್ನು ಒಳಗೊಂಡ ಒಂದು ಕೋಣೆಯಲ್ಲೇ ಔಷಧಿ, ಸಲಕರಣೆಗಳನ್ನು ಇರಿಸಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಕಣ್ಣಿಗೆ ಗಾಯ ಮಾಡಿಕೊಂಡವರು ಬಂದರೆ ಕೂಡಲೇ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆ ಮಾಡುವಂತಹ ವ್ಯವಸ್ಥೆ ರೂಪಿಸಲಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿ ಸಂಭ್ರಮಕ್ಕೆ ಬ್ರೇಕ್ ಹಾಕಿದ ಸುಪ್ರೀಂ

ಸುದ್ದಿಗೋಷ್ಠಿಯಲ್ಲಿಮಾಹಿತಿ ನೀಡಿದ ಆಸ್ಪತ್ರೆಯ ನಿರ್ದೇಶಕಿ ಡಾ.ಸುಜಾತ ರಾಥೋಡ್‌, ''ಸಾಮಾನ್ಯವಾಗಿ ಪಟಾಕಿ ಸಿಡಿತದಿಂದ ಗಾಯಗೊಳ್ಳುವವರಲ್ಲಿಶೇ.19 ರಷ್ಟು ಮಂದಿಯ ಕಣ್ಣಿಗೆ ಹಾನಿಯಾಗುತ್ತದೆ. ಶೇ.30 ರಷ್ಟು ಮಂದಿ ಕೈ ಬೆರಳಿಗೆ ಹಾನಿ ಮಾಡಿಕೊಳ್ಳುತ್ತಾರೆ. ಕಣ್ಣಿಗೆ ಗಾಯವಾದವರಲ್ಲಿಶೇ.40 ರಷ್ಟು ಮಂದಿ 14 ವರ್ಷದೊಳಗಿನವರಾಗಿರುತ್ತಾರೆ. ಕಳೆದ ವರ್ಷ 48 ಮಂದಿ ಕಣ್ಣಿಗೆ ಹಾನಿ ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆ ಪೈಕಿ 12 ಮಕ್ಕಳಿದ್ದರು,'' ಎಂದು ತಿಳಿಸಿದರು.

ಸುಟ್ಟ ಗಾಯಗಳ ಚಿಕಿತ್ಸಾ ಕೇಂದ್ರ
ವಿಕ್ಟೋರಿಯಾ ಆಸ್ಪತ್ರೆ ಆವರಣದ ಮಹಾಬೋಧಿ ಸುಟ್ಟ ಗಾಯಗಳ ಚಿಕಿತ್ಸಾ ಕೇಂದ್ರದಲ್ಲಿತುರ್ತು ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ''2018 ರಲ್ಲಿ17, 2017ರಲ್ಲಿ16 ಹಾಗೂ 2016 ರಲ್ಲಿ21 ಮಂದಿ ದಾಖಲಾಗಿದ್ದರು. ಪಟಾಕಿ ಸಿಡಿತದಿಂದ ಕೇಂದ್ರಕ್ಕೆ ದಾಖಲಾಗುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಕೇಂದ್ರದಲ್ಲಿ50 ಹಾಸಿಗೆಗಳಿದ್ದು, ಎಲ್ಲಸಮಯಲ್ಲಿಚಿಕಿತ್ಸೆ ಲಭ್ಯವಿದೆ,'' ಎಂದು ಪ್ಲಾಸ್ಟಿಕ್‌ ಸರ್ಜರಿ ವಿಭಾಗದ ಮುಖ್ಯಸ್ಥ ಡಾ.ಕೆ.ಟಿ.ರಮೇಶ್‌ ತಿಳಿಸಿದ್ದಾರೆ.

ದೀಪಾವಳಿಗೆ ಬಂತು ಪ್ಯಾರಾಚೂಟ್‌ ಆಕಾಶ ದೀಪ

ನಾರಾಯಣ ನೇತ್ರಾಲಯ
ರಾಜಾಜಿನಗರ ಹಾಗೂ ಬನ್ನೇರುಘಟ್ಟ ರಸ್ತೆಯ ನಾರಾಯಣ ನೇತ್ರಾಲಯ ಆಸ್ಪತ್ರೆಗಳಲ್ಲಿಅ.28 ಹಾಗೂ 29 ರಂದು ವಿಶೇಷ ತುರ್ತು ಸೇವೆ ಲಭ್ಯವಿದೆ. ಉಳಿದ ದಿನಗಳಲ್ಲೂಪಟಾಕಿ ಸಿಡಿತದಿಂದ ಕಣ್ಣಿಗೆ ಹಾನಿಯಾದವರಿಗೆ ಚಿಕಿತ್ಸೆ ನೀಡಲಾಗುತ್ತದೆ. ಇದಕ್ಕಾಗಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿದೆ. ಆಸ್ಪತ್ರೆಯಲ್ಲಿಕಳೆದ ಮೂರು ವರ್ಷಗಳ ದೀಪಾವಳಿ ಸಮಯದಲ್ಲಿ130 ಮಂದಿಗೆ ಚಿಕಿತ್ಸೆ ನೀಡಲಾಗಿದೆ.

''ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಕಂಡು ಬಂದಿದೆ. ಹಿರಿಯರು ಮಕ್ಕಳ ಕೈಗೆ ಪಟಾಕಿ ನೀಡದಿದ್ದರೆ ಹಾನಿ ಪ್ರಕರಣ ಕಡಿಮೆಯಾಗುತ್ತದೆ. ಪರಿಸರ ಸ್ನೇಹಿ ಹಬ್ಬ ಆಚರಿಸುವುದು ಉತ್ತಮ,'' ಎಂದು ಆಸ್ಪತ್ರೆ ಮುಖ್ಯಸ್ಥ ಡಾ.ಭುಜಂಗ ಶೆಟ್ಟಿ ಸಲಹೆ ನೀಡಿದ್ದಾರೆ.

ಹಬ್ಬದ ಖುಷಿ ಇಮ್ಮಡಿಸುವ ಆಟ

ಪಟಾಕಿ ಬಗ್ಗೆ ಎಚ್ಚರ
''ದೀಪಾವಳಿ ಸಮಯದಲ್ಲಿಕಣ್ಣಿಗೆ ಹಾನಿ ಮಾಡಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ದೀಪ ಹಚ್ಚಿ ಸರಳವಾಗಿ ಹಬ್ಬ ಆಚರಿಸುವುದೇ ಉತ್ತಮ. ಮಕ್ಕಳು ಪಟಾಕಿ ಸಿಡಿಸಲೇಬೇಕೆಂದರೆ ಹಿರಿಯರ ಮಾರ್ಗದರ್ಶನ ಪಡೆಯುವುದು, ಉದ್ದವಾದ ಊದುಬತ್ತಿ ಬಳಸುವುದು ಮೊದಲಾದ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು,'' ಎಂದು ಮಿಂಟೋ ಕಣ್ಣಾಸ್ಪತ್ರೆಯ ನಿರ್ದೇಶಕಿ ಡಾ.ಸುಜಾತ ರಾಥೋಡ್‌ ಕಿವಿಮಾತು ಹೇಳಿದ್ದಾರೆ.

ಮಿಂಟೋದಲ್ಲಿ24/7
ಮಿಂಟೋ ಕಣ್ಣಾಸ್ಪತ್ರೆಯಲ್ಲಿಅ.27 ರಿಂದ ಒಂದು ವಾರ 24/7 ಸೇವೆ ಲಭ್ಯವಿದೆ. ಪಟಾಕಿ ಸಿಡಿತಕ್ಕೊಳಗಾಗಿ ಕಣ್ಣಿಗೆ ಹಾನಿ ಮಾಡಿಕೊಂಡವರಿಗೆ ನಿರಂತರವಾಗಿ ಚಿಕಿತ್ಸೆ, ಸೇವೆ ನೀಡಲಾಗುತ್ತದೆ.

ತುರ್ತು ಪರಿಸ್ಥಿತಿಗೆ ಸಹಾಯವಾಣಿ
  • ಸುಟ್ಟ ಗಾಯಗಳ ಚಿಕಿತ್ಸಾ ಕೇಂದ್ರ- 080ಧಿಧಿ-2670 1150
  • ಮಿಂಟೋ ಕಣ್ಣಾಸ್ಪತ್ರೆ - 080-26701646, 26707176, 9481740137.
  • ನಾರಾಯಣ ನೇತ್ರಾಲಯ - 080-ಧಿ66121405, ಧಿ080-ಧಿ61222400

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ