ಆ್ಯಪ್ನಗರ

ಬನ್ನೇರುಘಟ್ಟ ಜೈವಿಕ ಉದ್ಯಾನ ಪುನಾರಂಭ: 103 ವೀಕ್ಷಕರ ಭೇಟಿ

ಪುನರಾರಂಭಗೊಂಡ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಸೋಮವಾರ 103 ವೀಕ್ಷಕರು ಭೇಟಿ ಕೊಟ್ಟಿದ್ದಾರೆ. ಹಲವು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಪ್ರವಾಸಿಗರನ್ನು ಅಧಿಕಾರಿಗಳು ಬರಮಾಡಿಕೊಂಡರು.

Vijaya Karnataka Web 8 Jun 2020, 9:53 pm
ಬನ್ನೇರುಘಟ್ಟ : ಪುನರಾರಂಭಗೊಂಡ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಸೋಮವಾರ 103 ವೀಕ್ಷಕರು ಭೇಟಿ ಕೊಟ್ಟಿದ್ದರು. ಹಲವು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಪ್ರವಾಸಿಗರನ್ನು ಅಧಿಕಾರಿಗಳು ಬರಮಾಡಿಕೊಂಡರು.
Vijaya Karnataka Web BNP
ಸಾಂದರ್ಭಿಕ ಚಿತ್ರ


ಪ್ರವಾಸಿಗರಿಗೆ ನಾನ್‌ ಎಸಿ ಬಸ್‌ ಸಫಾರಿ ಸೇವೆಯನ್ನು ಒಂದು ದಿನದ ಮಟ್ಟಿಗೆ ಉಚಿತವಾಗಿ ನೀಡಲಾಯಿತು. ಪ್ರತಿ ಕುಟುಂಬಕ್ಕೆ ಅಥವಾ ಗುಂಪಿಗೆ ಬಣ್ಣದ ಕೊಡೆಯನ್ನು ಕೊಡಲಾಯಿತು. ಹೊಸದಾಗಿ ರೂಪಿಸಿರುವ ಈ ವ್ಯವಸ್ಥೆಯಿಂದ ಗುಂಪುಗಳನ್ನು ಗುರುತಿಸಲು ಅನುಕೂಲವಾಗಲಿದೆ.

ಆನ್‌ಲೈನ್‌ ಟಿಕೆಟ್‌ ಕಡ್ಡಾಯ
''ಉದ್ಯಾನಕ್ಕೆ ಒಂದೇ ಬಾರಿ ಹೆಚ್ಚಿನ ಪ್ರವಾಸಿಗರು ಬಂದಲ್ಲಿಸಮಸ್ಯೆಯಾಗಲಿದೆ. ಹೀಗಾಗಿ ಆನ್‌ಲೈನ್‌ ಟಿಕೆಟ್‌ ಕಡ್ಡಾಯಗೊಳಿಸಲಾಗಿದೆ. ಒಂದು ಗಂಟೆ ಮೊದಲು ಟಿಕೆಟ್‌ ಬುಕ್‌ ಮಾಡುವ ಅವಕಾಶವಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿರುವುದರಿಂದ ಸಪಾರಿ ವಾಹನದಲ್ಲಿಶೇಕಡಾ 50 ರಷ್ಟು ಪ್ರವಾಸಿಗರಿಗೆ ಮಾತ್ರ ಅವಕಾಶ ಇದೆ. ಇದರಿಂದ ಎಲ್ಲರಿಗೂ ಕಿಟಕಿ ಬಳಿ ಸೀಟ್‌ ಸಿಗುವುದರಿಂದ ಪ್ರಾಣಿಗಳನ್ನು ಖುಷಿಯಿಂದ ನೋಡ ಬಹುದಾಗಿದೆ,'' ಎಂದು ಉದ್ಯಾನವನದ ಕಾರ‍್ಯನಿರ್ವಣಾಧಿಕಾರಿ ವನಶ್ರೀ ವಿಪಿನ್‌ಸಿಂಗ್‌ ಹೇಳಿದರು.

ರಾಮಮಂದಿರಕ್ಕೆ ಜೂನ್‌ 10ರಂದು ಶಿಲಾನ್ಯಾಸ: ರುದ್ರಾಭಿಷೇಕದೊಂದಿಗೆ ನಿರ್ಮಾಣ ಆರಂಭ!

ಮುನ್ನೆಚ್ಚರಿಕಾ ಕ್ರಮ
ಪ್ರವಾಸಿಗರು ಬಂದ ವಾಹನಗಳಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗುತ್ತದೆ. ವಾಹನಗಳ ನಿಲ್ದಾಣದಲ್ಲೂಅಂತರ ಕಾಪಾಡಿ ಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಟಿಕೆಟ್‌ ಕೌಂಟರ್‌ ಬಳಿ ಥರ್ಮಲ್‌ ಸ್ಕ್ಯಾ‌ನಿಂಗ್‌ ಮಾಡಲಾಗುತ್ತದೆ. ಉದ್ಯಾನದ ಒಳಗೆ ಪ್ರವೇಶಿಸುವ ಎಲ್ಲರೂ ಸ್ಯಾನಿಟೈಸರ್‌ ಬಳಸಿ ಕೈ ಶುಚಿಗೊಳಿಸಿಕೊಂಡೇ ಒಳ ಪ್ರವೇಶಿಸಬೇಕು. ಉದ್ಯಾನದೊಳಗೆ ಎರಡು, ಮೂರು ಕಡೆ ಸ್ಯಾನಿಟೈಸರ್‌ ಇಟ್ಟಿದ್ದು, ಕೈ ಶುಚಿಗೊಳಿಸಿಕೊಳ್ಳಬಹುದಾಗಿದೆ.

ಸುರಕ್ಷಿತ ಹೂಡಿಕೆಗೆ 'ಸಾವರಿನ್‌ ಗೋಲ್ಡ್‌ ಬಾಂಡ್‌': ಬಡ್ಡಿ ಎಷ್ಟು? ಖರೀದಿ ಹೇಗೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ