ಆ್ಯಪ್ನಗರ

ಬರಗೂರು ಅವರಿಗೆ ಪತ್ನಿ ವಿಯೋಗ

ಸಾಹಿತಿ ಮತ್ತು ಚಲನ ಚಿತ್ರ ನಿದೇರ್ಶಕ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಪತ್ನಿ ಎಸ್.ರಾಜ ಲಕ್ಷ್ಮೀ (66) ನಿಧನರಾದರು.

Vijaya Karnataka Web 8 Apr 2018, 12:58 pm
ಬೆಂಗಳೂರು: ಸಾಹಿತಿ ಮತ್ತು ಚಲನ ಚಿತ್ರ ನಿದೇರ್ಶಕ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಪತ್ನಿ ಎಸ್.ರಾಜ ಲಕ್ಷ್ಮೀ (66) ನಿಧನರಾದರು. ಕಿಡ್ನಿ ವೈಫಲ್ಯದಿಂದಾಗಿ ಅವರು ದೀರ್ಘಕಾಲದಿಂದ ಆಸ್ಪತ್ರೆ ಸೇರಿದ್ದು ನಾಲ್ಕು ಬಾರಿ ಹೃದಯ ಸ್ತಂಭನಕ್ಕೆ ಒಳಗಾಗಿದ್ದರು. 50 ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
Vijaya Karnataka Web raja lakshmi.


ಅವರಿಗೆ ಪತಿ ಪ್ರೊ. ಬರಗೂರು, ಪುತ್ರರಾದ ಮೈತ್ರಿ ಬರಗೂರು, ಸ್ಫೂರ್ತಿ ಬರಗೂರು, ಸೊಸೆ ಪದ್ಮಶ್ರೀ ಮತ್ತು ಮೊಮ್ಮಗ ಆಕಾಂಕ್ಷ್ ಇದ್ದಾರೆ. ರಾಜಲಕ್ಷ್ಮೀ ಅವರು ನೇತ್ರದಾನ ಮಾಡಲು ನಿರ್ಧರಿಸಿದ್ದಂತೆ ಅವರ ಎರಡು ಕಣ್ಣುಗಳನ್ನು ದಾನ ಮಾಡಲಾಗಿದೆ.

ಮಧುಗಿರಿ ತಾಲೂಕಿನ ಸಿದ್ದನಹಳ್ಳಿ ಗ್ರಾಮದಲ್ಲಿ ಜನಿಸಿದ ರಾಜಲಕ್ಷ್ಮೀ ಬಿ.ಎ. ಮತ್ತು ಹಿಂದಿ ವಿದ್ವಾನ್ ಪದವೀಧರೆಯಾಗಿದ್ದರು. ಕನ್ನಡ ಸಾಹಿತ್ಯ ಪ್ರೇಮಿಯೂ ಆಗಿದ್ದ ರಾಜಲಕ್ಷ್ಮೀ ಮತ್ತು ಬರಗೂರು ನಾಲ್ಕು ದಶಕಗಳ ಹಿಂದೆ ಅಂತರ್ ಜಾತಿ ವಿವಾಹವಾಗಿದ್ದರು. ಜೆ.ಪಿ.ನಗರದ 2ನೇ ಹಂತದ 11ನೇ ಬಿ ಕ್ರಾಸ್ 27ನೇ ನಂಬರಿನ ಸ್ವಗೃಹದಲ್ಲಿ ಸೋಮವಾರ ಬೆಳಗ್ಗೆಯಿಂದ ಮಧ್ಯಾಹ್ನ 1 ರವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಅಂತ್ಯಕ್ರಿಯೆ ಬನಶಂಕರಿ ವಿದ್ಯುತ್ ಚಿತಗಾರದಲ್ಲಿ ಸೋಮವಾರ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ. ಸಂಪರ್ಕ ಸಂಖ್ಯೆ : 9964640890, 9448454872

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ