ಆ್ಯಪ್ನಗರ

ಸಂಡೇ ಲಾಕ್‌ಡೌನ್: ಮಾಸ್ಕ್‌ ಧರಿಸದೆ ಹೊರಬಂದವರಿಗೆ ಬಿತ್ತು ದಂಡ

ಭಾನುವಾರ ಲಾಕ್‌ಡೌನ್ ಇದ್ದರೂ ಮಾಸ್ಕ್‌ ಧರಿಸದೆ ಮನೆಯಿಂದ ಹೊರ ಬಂದ ಜನರಿಗೆ ಬಿಬಿಎಂಪಿ ಮಾರ್ಷಲ್‌ಗಳು ಹಾಗೂ ಪೊಲೀಸರು ದಂಡ ವಿಧಿಸುವ ಮೂಲಕ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಜನರಲ್ಲಿ ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಪಾಲನೆ ಮಾಡುವಂತೆ ಸೂಚನೆ ನೀಡಲಾಯಿತು.

Vijaya Karnataka Web 5 Jul 2020, 4:03 pm
ಬೆಂಗಳೂರು: ಭಾನುವಾರ ಲಾಕ್‌ಡೌನ್ ಇದ್ದರೂ ಮಾಸ್ಕ್ ಧರಿಸದೆ ಮನೆಯಿಂದ ಹೊರಬಂದವರಿಗೆ ಬಿಬಿಎಂಪಿ ಮಾರ್ಷಲ್‌ಗಳು ದಂಡ ವಿಧಿಸಲಾಯಿತು.
Vijaya Karnataka Web bbmp


ಬೆಂಗಳೂರಿನ ಪೂರ್ವ ವಲಯದ ಹೆಬ್ಬಾಳ ವಿಭಾಗದಲ್ಲಿ ಮಾಸ್ಕ್ ಧರಿಸದ ಹಾಗೂ ಸಾಮಾಜಿಕ ಅಂತರ ಕಾಪಾಡದವರಿಗೆ ಬಿಬಿಎಂಪಿ ಮಾರ್ಷಲ್ ಹಾಗೂ ಬೆಂಗಳೂರು ನಗರ ಪೊಲೀಸರು ದಂಡ ಹಾಕಿದರು.

ಸರಕಾರಿ ಕಚೇರಿ ಖಾಲಿ ಖಾಲಿ: ಸಾರ್ವಜನಿಕರ ಪರದಾಟ.. ಸಿಬ್ಬಂದಿಗೂ ಹೆಚ್ಚಿನ ಹೊರೆ..


ಬೆಂಗಳೂರಿನಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಂಕು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಭಾನುವಾರ ಲಾಕ್‌ಡೌನ್ ಜಾರಿಯಲ್ಲಿದೆ. ಹೀಗಿದ್ದರೂ ಜನರು ಲಾಕ್‌ಡೌನ್ ಪಾಲನೆ ಮಾಡಿಲ್ಲ.

ನಗರದ ಹಲವು ಕಡೆಗಳಲ್ಲಿ ಜನರು ಮಾಸ್ಕ್‌ ಇಲ್ಲದೆ ಓಡಾಡುತ್ತಿದ್ದರು. ಅಗತ್ಯ ಸಾಮಗ್ರಿಗಳ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದ್ದರೂ ಕಡ್ಡಾಯವಾಗಿ ಕೊರೊನಾ ಮಾರ್ಗಸೂಚಿಗಳನ್ನು ಪಾಲನೆ ಮಾಡುವಂತೆ ಸರ್ಕಾರ ಬಿಬಿಎಂಪಿ ತಿಳಿಸಿದೆ.

ಹೀಗಿದ್ದರೂ ನಿಯಮಗಳನ್ನು ಪಾಲನೆ ಮಾಡಿದಿದ್ದ ಜನರಿಗೆ ದಂಡ ವಿಧಿಸುವ ಮೂಲಕ ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಪಾಲನೆ ಮಾಡುವಂತೆ ಸೂಚನೆ ನೀಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ