ಆ್ಯಪ್ನಗರ

ಕಾಮಗಾರಿ ನಿರ್ವಹಿಸದ ಗುತ್ತಿಗೆದಾರರಿಗೆ ₹62.86 ಕೋಟಿ ಪಾವತಿಸಿದ ಬಿಬಿಎಂಪಿ; ಪಾಲಿಕೆ ವಿರುದ್ಧ ಗಂಭೀರ ಆರೋಪ!

ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು ನೀಡಿರುವ ವರದಿ ಆಧರಿಸಿ, ಮಾಡದಿರುವ 14 ಕಾಮಗಾರಿಗಳಿಗೆ 62.86 ಕೋಟಿ ರೂ.ಗಳನ್ನು ಗುತ್ತಿಗೆದಾರರಿಗೆ ಪಾವತಿಸುವ ಮೂಲಕ ಪಾಲಿಕೆಗೆ ವಂಚಿಸಲಾಗಿದೆ. 2014-16ರ ಅವಧಿಯಲ್ಲಿ ಸಂಬಂಧಪಟ್ಟ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು, ಸಹಾಯಕ ಎಂಜಿನಿಯರ್‌ಗಳು, ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ ವಿರುದ್ಧ ಕಾನೂನುರೀತ್ಯ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎನ್​ಆರ್ ರಮೇಶ್ ಆಗ್ರಹಿಸಿದರು.

Vijaya Karnataka 26 Oct 2021, 9:09 am
ಬೆಂಗಳೂರು: ಕಾಮಗಾರಿಗಳನ್ನು ನಿರ್ವಹಣೆ ಮಾಡದಿದ್ದರೂ ಗುತ್ತಿಗೆದಾರರಿಗೆ 62.86 ಕೋಟಿ ರೂ. ಪಾವತಿಸುವ ಮೂಲಕ ಬಿಬಿಎಂಪಿಯ ರಾಜಕಾಲುವೆ ವಿಭಾಗದ ಅಧಿಕಾರಿಗಳು ಅಕ್ರಮವೆಸಗಿದ್ದಾರೆ ಎಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಜೆಪಿ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಆರೋಪಿಸಿದರು.
Vijaya Karnataka Web Bengaluru: BBMP chief orders resurvey of dilapidated buildings
BBMP building, Bengaluru


ಈ ಹಗರಣಕ್ಕೆ ಸಂಬಂಧಿಸಿದಂತೆ ಸೋಮವಾರ ಎಸಿಬಿಗೆ ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘2005-06ರಲ್ಲಿ' ಜೆ-ನರ್ಮ್' ಯೋಜನೆಯಡಿ 496.90 ಕೋಟಿ ರೂ. ವೆಚ್ಚದಲ್ಲಿ 15 ಪ್ಯಾಕೇಜ್‌ಗಳಲ್ಲಿ ರಾಜ ಕಾಲುವೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿತ್ತು. ಈ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು ಇತ್ತೀಚೆಗೆ ವರದಿ ಸಲ್ಲಿಸಿದ್ದಾರೆ. ಅದರಂತೆ ರಾಜರಾಜೇಶ್ವರಿ ನಗರ ವಲಯ, ಬೊಮ್ಮನಹಳ್ಳಿ ಮತ್ತು ಬ್ಯಾಟರಾಯನಪುರ ವಲಯಗಳ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳ ಪೈಕಿ ಕೆಲಸವನ್ನೇ ಮಾಡದ 14 ಕಾಮಗಾರಿಗಳಿಗೆ ಸಂಬಂಧಿಸಿದಂತೆ 62.86 ಕೋಟಿ ರೂ.ಗಳನ್ನು 2014-16ರಲ್ಲಿ ಪ್ರೀತಿ ಕ್ವಾಡ್‌ ಕನ್ಸಲ್ಟೆಂಟ್ಸ್‌ ಮತ್ತು ಸ್ಟುಪ್‌ ಕನ್ಸಲ್ಟೆಂಟ್ಸ್‌ ಗುತ್ತಿಗೆ ಸಂಸ್ಥೆಗಳಿಗೆ ಪಾವತಿಸಲಾಗಿದೆ’ ಎಂದು ದೂರಿದರು.
ಸಾಲ ಮನ್ನಾದ 4 ಕೋಟಿ ರೂ. ಗುಳುಂ: ಸಿಬಿಐ ತನಿಖೆಗೆ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಒತ್ತಾಯ
‘ಈ 14 ಕಾಮಗಾರಿಗಳಿಗೆ ಸಂಬಂಧಿಸಿದ ಟೆಂಡರ್‌ ಪ್ರಕ್ರಿಯೆ ದಾಖಲೆಗಳು, ಗುತ್ತಿಗೆದಾರರ ಆಯ್ಕೆ, ಎಎಸ್‌, ಟಿಎಸ್‌, ಡಿಟಿಎಸ್‌ ದಾಖಲೆಗಳು, ಗುತ್ತಿಗೆದಾರರಿಗೆ ಪಾವತಿಸಿರುವ ದಾಖಲೆಗಳು ಕಳೆದು ಹೋಗಿರುವುದಾಗಿ ರಾಜಕಾಲುವೆ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿರುವುದನ್ನು ಮಹಾ ಲೆಕ್ಕಪರಿಶೋಧಕರು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಇದಲ್ಲದೇ ಸ್ಟುಪ್‌ ಕನ್ಸಲ್ಟೆಂಟ್‌ ಸಂಸ್ಥೆ ಸಲ್ಲಿಸಿದ್ದ ನಕಲಿ ದಾಖಲೆಗಳ ಆಧಾರದ ಮೇಲೆ 94.93 ಲಕ್ಷ ರೂ. ಪಾವತಿಸಲು 2018-19ರಲ್ಲಿ ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ ಅನುಮೋದನೆ ನೀಡುವ ಮೂಲಕ ಮತ್ತೊಂದು ಅಕ್ರಮವೆಸಗಿದ್ದಾರೆ’ ಎಂದು ಹೇಳಿದರು.

‘ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು ನೀಡಿರುವ ವರದಿ ಆಧರಿಸಿ, ಮಾಡದಿರುವ 14 ಕಾಮಗಾರಿಗಳಿಗೆ 62.86 ಕೋಟಿ ರೂ.ಗಳನ್ನು ಗುತ್ತಿಗೆದಾರರಿಗೆ ಪಾವತಿಸುವ ಮೂಲಕ ಪಾಲಿಕೆಗೆ ವಂಚಿಸಲಾಗಿದೆ. 2014-16ರ ಅವಧಿಯಲ್ಲಿ ಸಂಬಂಧಪಟ್ಟ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು, ಸಹಾಯಕ ಎಂಜಿನಿಯರ್‌ಗಳು, ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ ವಿರುದ್ಧ ಕಾನೂನುರೀತ್ಯ ಕಠಿಣ ಕ್ರಮ ಕೈಗೊಳ್ಳಬೇಕು. ನಕಲು ದಾಖಲೆಗಳ ಆಧಾರದಲ್ಲಿ 2018-19ರಲ್ಲಿ ಸ್ಟುಪ್‌ ಕನ್ಸಲ್ಟೆಂಟ್ಸ್‌ ಸಂಸ್ಥೆಗೆ 94.93 ಲಕ್ಷ ರೂ. ಬಾಕಿ ಪಾವತಿಗೆ ಅನುಮೋದನೆ ನೀಡಿರುವ ಮುಖ್ಯ ಎಂಜಿನಿಯರ್‌ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ