ಆ್ಯಪ್ನಗರ

ಶೀಘ್ರವೇ ತ್ಯಾಜ್ಯದಿಂದ ವಿದ್ಯುತ್ ತಯಾರಿಕಾ ಘಟಕ ಸ್ಥಾಪನೆ: ಉಪಮುಖ್ಯಮಂತ್ರಿ ಜಿ.ಪರಮೇಶ್ವರ್

ಸತಾರಾಂ ಈಗಾಗಲೇ ಚೆನ್ನೈ,ಯೂರೋಪ್, ಬ್ರೆಜಿಲ್‌ ಸೇರಿದಂತೆ 14 ಕಡೆಗಳಲ್ಲಿ 'ವೇಸ್ಟ್‌ ಟು ಎನರ್ಜಿ ಪ್ಲಾಂಟ್‌'ನಡೆಸುತ್ತಿದೆ. ಇದೇ ಮಾದರಿಯಲ್ಲಿ ನೆಲಮಂಗಲದಲ್ಲಿ ಪ್ಲಾಂಟ್ ತೆರೆಯುವ ಸಂಬಂಧ ಪ್ರಾತ್ಯಕ್ಷಿಕೆ ವೀಕ್ಷಿಸಿದ ಪರಮೇಶ್ವರ್ ಅವರು, ಸಂಪೂರ್ಣ ಮಾಹಿತಿ ಪಡೆದರು.

Vijaya Karnataka Web 13 Nov 2018, 8:13 pm
ಬೆಂಗಳೂರು: ತ್ಯಾಜ್ಯದಿಂದ ವಿದ್ಯುತ್ ತಯಾರಿಸುವ ಸಂಬಂಧ ಸತಾರಾಂ ಕಂಪನಿಗೆ ಈಗಿರುವ ಕನ್ನಳ್ಳಿ- ಸೀಗೆಹಳ್ಳಿಯಲ್ಲಿ ಪ್ರಾಯೋಗಿಕವಾಗಿ ನಡೆಸಲು ಹಾಗೂ ನೆಲಮಂಗಲದಲ್ಲಿ ಹೊಸದಾಗಿ ವಿದ್ಯುತ್ ತಯಾರಕಾ ಘಟಕ ನಿರ್ಮಿಸಲು ಅವಕಾಶ ನೀಡುವ ಸಂಬಂಧ ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಚರ್ಚಿಸಿದರು.
Vijaya Karnataka Web parameshwar


ಬಿಬಿಎಂಪಿ ಹಿರಿಯ ಅಧಿಕಾರಿಗಳು ಹಾಗೂ ಸತಾರಾಂ ಕಂಪನಿ ಮುಖ್ಯಸ್ಥರೊಂದಿಗೆ ಅವರು ಮಂಗಳವಾರ ಸಭೆ ನಡೆಸಿದರು.

ಸತಾರಾಂ ಈಗಾಗಲೇ ಚೆನ್ನೈ,ಯೂರೋಪ್, ಬ್ರೆಜಿಲ್‌ ಸೇರಿದಂತೆ 14 ಕಡೆಗಳಲ್ಲಿ 'ವೇಸ್ಟ್‌ ಟು ಎನರ್ಜಿ ಪ್ಲಾಂಟ್‌'ನಡೆಸುತ್ತಿದೆ. ಇದೇ ಮಾದರಿಯಲ್ಲಿ ನೆಲಮಂಗಲದಲ್ಲಿ ಪ್ಲಾಂಟ್ ತೆರೆಯುವ ಸಂಬಂಧ ಪ್ರಾತ್ಯಕ್ಷಿಕೆ ವೀಕ್ಷಿಸಿದ ಪರಮೇಶ್ವರ್ ಅವರು, ಸಂಪೂರ್ಣ ಮಾಹಿತಿ ಪಡೆದರು.

''ಹೊಸದಾಗಿ ಪ್ಲಾಂಟ್‌ ನಿರ್ಮಾಣ ಹೆಚ್ಚು‌ ಸಮಯ ಹಿಡಿಯುವುದಲ್ಲದೇ, ಇದರ ನಿರ್ವಹಣದ ಗುಣಮಟ್ಟ ತಿಳಿಯಲು ಸಮಯ ಬೇಕಾಗಲಿದೆ. ಹೀಗಾಗಿ ಈಗಿರುವ ಸೀಗೆಹಳ್ಳಿ ಹಾಗೂ ಕಲ್ಲಳ್ಳಿ ಪ್ಲಾಂಟ್‌ನಲ್ಲಿಯೇ ಪ್ರಾಯೋಗಿಕವಾಗಿ ಕೆಲಸ ಪ್ರಾರಂಭಿಸುವುದು ಸೂಕ್ತ'' ಎಂಬ ಅಭಿಪ್ರಾಯ ಹೊರಹಾಕಿದರು. ಒಟ್ಟಾರೆ, ಇನ್ನು ಕೆಲವೇ ದಿನಗಳಲ್ಲಿ ವೇಸ್ಟ್‌ ಟು ಎನರ್ಜಿ ಪ್ಲಾಂಟ್‌ ನಿರ್ಮಾಣ ಮಾಡುವ ಸಂಬಂಧ ಕ್ಯಾಬಿನೆಟ್‌ನಲ್ಲಿಯೂ ಶೀಘ್ರವೇ ಒಪ್ಪಿಗೆ ಪಡೆದು ಕನಿಷ್ಠ ಒಂದು ಪ್ಲಾನ್‌ ನಿರ್ಮಿಸಿ ವಿದ್ಯುತ್ ಉತ್ಪಾದನೆ ಮಾಡಲಾಗುವುದು ಎಂದರು.

ಅಪರ ಮುಖ್ಯಕಾರ್ಯದರ್ಶಿ ಮಹೇಂದ್ರ ಜೈನ್, ಬಿಎಂಆರ್‌ಡಿಎ ಆಯುಕ್ತ ಮೋಹನ್ ರಾಜ್, ಬಿಡಿಎ ಆಯುಕ್ತ ರಾಜೇಶ್ ಇತರೆ ಅಧಿಕಾರಿಗಳು ಭಾಗಿಯಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ