ಆ್ಯಪ್ನಗರ

ನೌಕರಿಗಾಗಿ 2 ಕೋಟಿ ಕಳೆದುಕೊಂಡಿದ್ದಾರೆ ಬೆಂಗಳೂರಿಗರು

ಕೆಲಸ ನೀಡುವುದಾಗಿ ಅಂತರ್ಜಾಲದಲ್ಲಿ ಹಾಕಿರುವ ಪೋಸ್ಟ್‌ಗಳಿಗೆ ಮಾರಿಹೋಗಿ ಹಣ ಕಳೆದುಕೊಂಡಿರುವ ಪ್ರಕರಣದಲ್ಲಿ ಬೆಂಗಳೂರಿಗರೇ ಮುಂಚೂಣಿಯಲ್ಲಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 29 Jun 2017, 1:05 pm
ಬೆಂಗಳೂರು: ದೊಡ್ಡ ಸಂಬಳದ ನೌಕರಿ ಕೊಡಿಸುವುದಾಗಿ ಅಂತರ್ಜಾಲದಲ್ಲಿ ಹಾಕಿರುವ ಪೋಸ್ಟ್‌ಗಳಿಗೆ ಮಾರಿಹೋಗಿ ಹಣ ಕಳೆದುಕೊಂಡಿರುವವರಲ್ಲಿ ಬೆಂಗಳೂರಿಗರೇ ಮೊದಲಿಗರು.
Vijaya Karnataka Web bengalureans lose up to rs 2 crore to online job scamsters
ನೌಕರಿಗಾಗಿ 2 ಕೋಟಿ ಕಳೆದುಕೊಂಡಿದ್ದಾರೆ ಬೆಂಗಳೂರಿಗರು


ವಿಪ್ರೋ, ಐಬಿಎಮ್‌, ಇನ್ಫೋಸಿಸ್‌ ಸೇರಿದಂತೆ ಹಲವಾರು ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಕೊಡಿಸುವ ಆಮಿಷಕ್ಕೆ ಮರಳಾಗುವ ಪ್ರಕರಣಗಳು ಬೆಂಗಳೂರಲ್ಲೇ ಹೆಚ್ಚು. ಜೂನ್‌ ತಿಂಗಳಲ್ಲೇ ಆರು ವಂಚನೆ ಪ್ರಕರಣಗಳು ಸೈಬರ್‌ ಕ್ರೈಂ ಪೊಲೀಸರಲ್ಲಿ ದಾಖಲಾಗಿವೆ.

ಮಾಹಿತಿಗಳ ಪ್ರಕಾರ ಮಾರ್ಚ್‌ 25ರಿಂದ ಈವರೆಗೆ ಒಟ್ಟಾರೆ 25 ವಂಚನೆ ಪ್ರಕರಣ ದಾಖಲಾಗಿದ್ದು, ಇವುಗಳಲ್ಲಿ ಯುವಕನೊಬ್ಬನಿಗೆ ಅಮೆರಿಕದ ಟೆಸ್ಲಾ ಕಂಪನಿಯಲ್ಲಿ ಕೆಲಸ ನೀಡುವುದಾಗಿ ಹೇಳಿ 24 ಲಕ್ಷ ಹಣ ದೋಚಿದ ಪ್ರಕರಣ ಈವರೆಗಿನ ಅತಿ ದೊಡ್ಡ ವಂಚನೆ ಪ್ರಕಣಗಳಲ್ಲಿ ಒಂದಾಗಿದೆ.

ಕೆಲಸ ಕೊಡಿಸುವುದಾಗಿ ಆನ್‌ಲೈನ್‌ನಲ್ಲಿ ನಂಬಿಸುವ ನಕಲಿ ಕಂಪನಿಗಳು, ಉದ್ಯೋಗಾಕಾಂಕ್ಷಿಗಳಿಂದ ಹಣ ವಸೂಲಿ ಮಾಡುತ್ತಾರೆ. ಇನ್ನೂ ಕೆಲವರು ತಾವೇ ಕಂಪನಿ ಮಾನವಸಂಪನ್ಮೂಲ ಅಧಿಕಾರಿಗಳೆಂದು ಹೇಳಿಕೊಂಡು, ದೂರವಾಣಿಯಲ್ಲೇ ಸಂದರ್ಶನ ನಡೆಸಿ ನೋಂದಣಿ ಶುಲ್ಕ ವಸೂಲಿ ಮಾಡಿ ಮೋಸ ಮಾಡುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾಬ್‌ ಕನ್ಸಲ್ಟೆನ್ಸಿ ಹೆಸರಿನಡಿ ಮೋಸ ಮಾಡುವ ಕುರಿತು ಕಳೆದ ಹಲವಾರು ದಿನಗಳಿಂದ ವರದಿಗಳು ಬರುತ್ತಲೇ ಇವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ