ಆ್ಯಪ್ನಗರ

ರಸ್ತೆ ಗುಂಡಿ ಮುಚ್ಚಲು ಯುವಕನ ಚಾಲೆಂಜ್

ಸಾಮಾಜಿಕ ತಾಣಗಳಲ್ಲಿ ಗೆಳೆಯರಿಗೆ ವಿವಿಧ ರೀತಿಯ ಚಾಲೆಂಜ್‌ಗಳನ್ನು ದಾಟಿಸಿಬಿಡುವುದು ಇತ್ತೀಚಿನ ಟ್ರೆಂಡ್‌.. ಫಿಟ್‌ನೆಸ್ ಚಾಲೆಂಜ್, ಬುಕ್ ರೀಡಿಂಗ್ ಟ್ರೆಂಡ್‌, ಮ್ಯೂಸಿಕ್ ಚಾಲೆಂಜ್ ಎಂದೆಲ್ಲ ಹಲವು ರೀತಿಯ ಟ್ರೆಂಡ್‌ಗಳು ನಡೆಯುತ್ತಿರುತ್ತವೆ. ಆದರೆ ಇವೆಲ್ಲದರ ನಡುವೆ ಬೆಂಗಳೂರಿನ ಯುವಕ ಪ್ರಶಾಂತ್‌ ಮರೂರು ಫೇಸ್‌ಬುಕ್‌ನಲ್ಲಿ ಬೆಂಗಳೂರಿನ ರಸ್ತೆ ಗುಂಡಿ ಮುಚ್ಚುವ ವಿನೂತನ ರೀತಿಯ ಚಾಲೆಂಜ್ ಆರಂಭಿಸಿದ್ದಾರೆ.

Bangalore Mirror Bureau 25 Jun 2018, 10:01 pm
ಬೆಂಗಳೂರು: ಸಾಮಾಜಿಕ ತಾಣಗಳಲ್ಲಿ ಗೆಳೆಯರಿಗೆ ವಿವಿಧ ರೀತಿಯ ಚಾಲೆಂಜ್‌ಗಳನ್ನು ದಾಟಿಸಿಬಿಡುವುದು ಇತ್ತೀಚಿನ ಟ್ರೆಂಡ್‌.. ಫಿಟ್‌ನೆಸ್ ಚಾಲೆಂಜ್, ಬುಕ್ ರೀಡಿಂಗ್ ಟ್ರೆಂಡ್‌, ಮ್ಯೂಸಿಕ್ ಚಾಲೆಂಜ್ ಎಂದೆಲ್ಲ ಹಲವು ರೀತಿಯ ಟ್ರೆಂಡ್‌ಗಳು ನಡೆಯುತ್ತಿರುತ್ತವೆ. ಆದರೆ ಇವೆಲ್ಲದರ ನಡುವೆ ಬೆಂಗಳೂರಿನ ಯುವಕ ಪ್ರಶಾಂತ್‌ ಮರೂರು ಫೇಸ್‌ಬುಕ್‌ನಲ್ಲಿ ಬೆಂಗಳೂರಿನ ರಸ್ತೆ ಗುಂಡಿ ಮುಚ್ಚುವ ವಿನೂತನ ರೀತಿಯ ಚಾಲೆಂಜ್ ಆರಂಭಿಸಿದ್ದಾರೆ.
Vijaya Karnataka Web road bbmp


ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಯಾವುದೇ ಸೂಕ್ತ ಕ್ರಮ ಕೈಗೊಳ್ಳದಿರುವುದನ್ನು ಕಂಡ ಪ್ರಶಾಂತ್ ಸ್ವತಃ ತಮ್ಮದೇ ಖರ್ಚಿನಿಂದ ಸಿಮೆಂಟ್‌, ಜಲ್ಲಿ ಮತ್ತು ಮರಳು ತಂದು ತಮ್ಮ ಮನೆ ಸಮೀಪದ ರಸ್ತೆಯಲ್ಲಿನ ಗುಂಡಿ ಮುಚ್ಚಿದ್ದಾರೆ. ಅಲ್ಲದೆ ಸಾಮಾಜಿಕ ತಾಣಗಳ ಮೂಲಕ ಗೆಳೆಯರಿಗೆ ಅವರ ಪ್ರದೇಶದಲ್ಲಿನ ರಸ್ತೆ ಗುಂಡಿ ಮುಚ್ಚುವ ಚಾಲೆಂಜ್ ನೀಡಿದ್ದಾರೆ.

ಚಾಲೆಂಜ್ ಸ್ವೀಕರಿಸಿದ ಇವರ ಗೆಳೆಯ ದಿನೇಶ್ ಗೌಡ ಕೂಡ ತಮ್ಮ ಮನೆ ಪ್ರದೇಶದ ರಸ್ತೆಯಲ್ಲಿನ ಗುಂಡಿ ಮುಚ್ಚಿದ್ದಾರೆ. ಇದರಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಚ್ಚು ಅನುಕೂಲವಾಗುತ್ತಿದೆ. ಅಲ್ಲದೆ ಬಿಬಿಎಂಪಿಯನ್ನಾಗಲಿ, ಸರಕಾರವನ್ನಾಗಲಿ ರಸ್ತೆ ಗುಂಡಿ ಮುಚ್ಚಲು ಅವರು ಕಾಯುತ್ತಿಲ್ಲ. ತುಂಬಾ ಬಾಳಿಕೆ ಬಾರದಿದ್ದರೂ, ತಕ್ಕ ಮಟ್ಟಿಗೆ ಇವರು ಮಾಡಿದ ಗುಂಡಿ ಮುಚ್ಚುವ ಕೆಲಸ ಪ್ರಯೋಜನಕ್ಕೆ ಬಂದಿದೆ. ಅಲ್ಲದೆ ಇವರ ಕಾರ್ಯ ನೋಡಿದ ಬಹುತೇಕರು ಚಾಲೆಂಜ್ ಸ್ವೀಕರಿಸಿ ಗುಂಡಿಮುಚ್ಚಲು ನಿರ್ಧರಿಸಿದ್ದಾರೆ.

ಒಟ್ಟಿನಲ್ಲಿ ಸಾಮಾಜಿಕ ಕಳಕಳಿಯ ಜತೆಗೆ ಜಾಗೃತಿ ಮೂಡಿಸುತ್ತಿರುವ ಯುವಕರ ಪ್ರಯತ್ನ ಬಿಬಿಎಂಪಿಗೆ ಪ್ರೇರಣೆಯಾದರೆ ಸಾರ್ಥಕ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ