ಆ್ಯಪ್ನಗರ

​ ನಾಪತ್ತೆಯಾದ ಮಕ್ಕಳ ಪತ್ತೆಗೆ ನೆರವಾದ 'ಆಧಾರ್'

ನಾಪತ್ತೆಯಾಗಿದ್ದ ಮೂವರು ಮಕ್ಕಳನ್ನು ಮರಳಿ ಗೂಡಿಗೆ ಸೇರಿಸಲು 'ಆಧಾರ್' ಸಂಖ್ಯೆ ನೆರವಾಗಿದೆ.

ಟೈಮ್ಸ್ ಆಫ್ ಇಂಡಿಯಾ 11 Jul 2017, 2:41 pm
ಬೆಂಗಳೂರು: ಅನಾಥಾಶ್ರಮದಲ್ಲಿ ಆಶ್ರಯ ಪಡೆದಿದ್ದ ಮೂವರು ಮಕ್ಕಳನ್ನು ಮರಳಿ ಗೂಡಿಗೆ ಸೇರಿಸಲು 'ಆಧಾರ್' ಸಂಖ್ಯೆ ನೆರವಾಗಿದೆ.
Vijaya Karnataka Web bengaluru aadhaar helps three kids unite with family
​ ನಾಪತ್ತೆಯಾದ ಮಕ್ಕಳ ಪತ್ತೆಗೆ ನೆರವಾದ 'ಆಧಾರ್'


ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಸರಕಾರಿ ಸ್ವಾಮ್ಯದ ಮಕ್ಕಳ ಆರೈಕೆ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಮೊನು, ಓಂಪ್ರಕಾಶ್‌ ಹಾಗೂ ನೀಲಕಂಠ ಹೆಸರಿನ ಮೂವರು ಮಕ್ಕಳು ಶೀಘ್ರದಲ್ಲಿಯೇ ಪೋಷಕರ ಮಡಿಲು ಸೇರಲಿದ್ದಾರೆ.

ನೋಂದಣಿ ಅಭಿಯಾನದ ಅಂಗವಾಗಿ ಅಧಿಕಾರಿಗಳು ಅನಾಥಶ್ರಮದಲ್ಲಿ 'ಆಧಾರ್' ನೋಂದಣಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಮಕ್ಕಳ 'ಆಧಾರ್' ನೋಂದಣಿ ಮಾಡುತ್ತಿರುವ ಸಂದರ್ಭದಲ್ಲಿ ಮೂವರು ಮಕ್ಕಳು ಈಗಾಗಲೇ 12 ಅಂಕಿಯ ಆಧಾರ್ ಸಂಖ್ಯೆ ಹೊಂದಿರುವುದು ಬೆಳಕಿಗೆ ಬಂದಿದೆ. ಈ ಮಕ್ಕಳ ಮೂಲ ಹೆಸರು ಸೇರಿದಂತೆ ಪೋಷಕರು ವಾಸವಿರುವ ವಿಳಾಸ ಕೂಡಾ ಲಭ್ಯವಾಗಿದೆ. ಶೀಘ್ರದಲ್ಲಿಯೇ ಮಕ್ಕಳನ್ನು ಪೋಷಕರಿಗೆ ಹಸ್ತಾಂತರಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ.


ಕಳೆದ ವರ್ಷದ ಮೇ ತಿಂಗಳಲ್ಲಿ ಅಂಗವೈಕಲ್ಯದಿಂದ ಬಳಲುತ್ತಿದ್ದ ಮಗುವನ್ನು ಆಶ್ರಮಕ್ಕೆ ಕರೆತರಲಾಗಿತ್ತು. ಮಗು ತನ್ನ ಹೆಸರನ್ನು ಸ್ಮರಿಸಿಕೊಳ್ಳುವ ಸ್ಥಿತಿಯಲ್ಲಿಯೂ ಇರಲಿಲ್ಲ. ಹೀಗಾಗಿ ಮಗುವನ್ನು ಮೊನು ಎಂದು ಕರೆಯಲಾಗುತ್ತಿತ್ತು. ಆದರೆ, ಇದೀಗ ಆಧಾರ್ ಸಂಖ್ಯೆಯ ಸಹಾಯದಿಂದ ಮಗುವಿನ ಹೆಸರು ಸೇರಿದಂತೆ ಪೋಷಕರು ನೆಲೆಸಿರುವ ವಿಳಾಸ ಲಭ್ಯವಾಗಿದೆ. ಶೀಘ್ರದಲ್ಲಿಯೇ ಮಗುವನ್ನು ಮಧ್ಯಪ್ರದೇಶದಲ್ಲಿರುವ ತನ್ನ ಪೋಷಕರಿಗೆ ಹಸ್ತಾಂತರಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಓಂಪ್ರಕಾಶ ಕೂಡ ಕಳೆದ ವರ್ಷದ ಮೇ ತಿಂಗಳಲ್ಲಿ ಆಶ್ರಮಕ್ಕೆ ಸೇರಿದ್ದ. ಈ ಮಗು ಜಾರ್ಖಂಡ್‌ನ ಗರ್ಹ್ವಾ ಪ್ರದೇಶದ ಜಗದೀಶ್ ಪ್ರಜಾಪತಿಯ ಪುತ್ರ ಎಂದು ತಿಳಿದು ಬಂದಿದೆ. ಶೀಘ್ರದಲ್ಲಿಯೇ ಮಗುವನ್ನು ಪೋಷಕರ ಮಡಿಲು ಸೇರಿಸಲು ಅಧಿಕಾರಿಗಳು ಸಿದ್ದತೆ ನಡೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ