ಆ್ಯಪ್ನಗರ

ಸರಕಾರದ ಮುದ್ರೆ ಬಳಸಿ ನಕಲಿ ಆಧಾರ್‌-ಐಡಿ-ಪಾನ್‌ ಕಾರ್ಡ್ ತಯಾರಿಸುತ್ತಿದ್ದ ಖದೀಮರು ಅರೆಸ್ಟ್‌!

ಇವರ ಜಾಲ ಇಡೀ ರಾಜ್ಯಾದ್ಯಂತ ಹರಡಿದ್ದು, ನಕಲಿ ಕಾರ್ಡ್‌ಗಳನ್ನು ಸೃಷ್ಟಿಸುವ ಮೂಲಕ ಲಕ್ಷಗಟ್ಟಲೆ ಅಕ್ರಮ ಹಣವನ್ನು ಸಂಪಾದಿಸುತ್ತಿದ್ದರು ಎಂದು ತಿಳಿದುಬಂದಿದೆ. ಇನ್ನು ಇವರ ನಕಲಿ ವಹಿವಾಟಿನಿಂದ ಸರಕಾರದ ಬೊಕ್ಕಸಕ್ಕೂ ನಷ್ಟ ಉಂಟಾಗುತ್ತಿತ್ತು. ಅಲ್ಲದೆ ಇದು ಇನ್ನಿತರ ಕಾನೂನುಬಾಹಿರ ಚಟುವಟಿಕೆಗಳಿಗೂ ಮಾರ್ಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Vijaya Karnataka Web 4 Jan 2021, 2:41 pm
ಬೆಂಗಳೂರು: ಆಧಾರ್‌ ಕಾರ್ಡ್‌ ಸೇರಿ ಇನ್ನಿತರ ನಕಲಿ ಕಾರ್ಡ್‌ಗಳನ್ನು ತಯಾರಿಸುತ್ತಿದ್ದ ಮಹಾದೊಡ್ಡ ಜಾಲವನ್ನು ಪೊಲೀಸರು ಬೇಧಿಸಿದ್ದಾರೆ. ಸರಕಾರದ ನಕಲಿ ಮುದ್ರೆ ಬಳಸಿ ಅಕ್ರಮವಾಗಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಚಾಲನಾ ಪರವಾನಗಿ, ಆರ್‌ಸಿ ಕಾರ್ಡ್, ಚುನಾವಣಾ ಗುರುತಿನ ಚೀಟಿ ಮಾಡಿಕೊಡುತ್ತಿದ್ದ ಖದೀಮರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web ADHAR CARD


ರಾಜಸ್ಥಾನ ಮೂಲದ ಕಮಲೇಶ್ ಸೇರಿ ಒಟ್ಟು ಹತ್ತು ಮಂದಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಅವರಿಂದ ಹೆಸರು ವಿಳಾಸವಿಲ್ಲದ 28,000 ನಕಲಿ ಚುನಾವಣಾ ಗುರುತಿನ ಚೀಟಿ, 9,000 ನಕಲಿ ಆಧಾರ್ ಕಾರ್ಡ್ಗಳು, 9,000 ಪಾನ್ ಕಾರ್ಡ್ಗಳು, 12,200 ಆರ್‌ಸಿ ಕಾರ್ಡ್ಗಳು, 2 ಪ್ರಿಂಟರ್ ಹಾಗೂ ಕಂಪ್ಯೂಟರ್ಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.


ಕಮಲೇಶ್‌ ಹಾಗೂ ಆತನ ಸಹಚರರು ಕನಕಪುರ ರಸ್ತೆಯ ಹೆರಿಟೇಜ್ ಅಪಾರ್ಟ್‌ಮೆಂಟ್‌ನಲ್ಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಚಾಲನಾ ಪರವಾನಗಿ, ಆರ್‌ಸಿ ಕಾರ್ಡ್, ಚುನಾವಣಾ ಗುರುತಿನ ಚೀಟಿ ಮುಂತಾದವುಗಳಿಗೆ ಸರಕಾರದ ನಕಲಿ ಚಿಹ್ನೆಗಳನ್ನು ಬಳಸಿ ಮುದ್ರಿಸುತ್ತಿದ್ದರು. ಇದು ಪಕ್ಕಾ ಅಸಲಿ ಐಡಿ ಕಾರ್ಡ್ಗಳಂತೆ ಗೋಚರಿಸುವ ರೀತಿಯಲ್ಲಿ ಸೃಷ್ಟಿಸುತ್ತಿದ್ದರು.

ಕಲಾಸಿಪಾಳ್ಯದಲ್ಲಿ ಪುರಾತನ ಶಿಲೆ, ಮದ್ದು ಗುಂಡು ಪತ್ತೆ!

ಇನ್ನು ಇವರ ಜಾಲ ಇಡೀ ರಾಜ್ಯಾದ್ಯಂತ ಹರಡಿದ್ದು, ನಕಲಿ ಕಾರ್ಡ್‌ಗಳನ್ನು ಸೃಷ್ಟಿಸುವ ಮೂಲಕ ಲಕ್ಷಗಟ್ಟಲೆ ಅಕ್ರಮ ಹಣವನ್ನು ಸಂಪಾದಿಸುತ್ತಿದ್ದರು ಎಂದು ತಿಳಿದುಬಂದಿದೆ. ಇನ್ನು ಇವರ ನಕಲಿ ವಹಿವಾಟಿನಿಂದ ಸರಕಾರದ ಬೊಕ್ಕಸಕ್ಕೂ ನಷ್ಟ ಉಂಟಾಗುತ್ತಿತ್ತು. ಅಲ್ಲದೆ ಇದು ಇನ್ನಿತರ ಕಾನೂನುಬಾಹಿರ ಚಟುವಟಿಕೆಗಳಿಗೂ ಮಾರ್ಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ