ಆ್ಯಪ್ನಗರ

ಬೆಂಗಳೂರು: ಒಂದು ಪಾರ್ಟಿಯಿಂದ ಹರಡಿತು 105 ಮಂದಿಗೆ ಕೊರೊನಾ

ಪರೀಕ್ಷಾ ವರದಿಗಳು ಬಂದಾಗ ಇಬ್ಬರಿಗೂ ಕೋವಿಡ್ ಪಾಸಿಟಿವ್‌ ಇರುವುದು ಕಂಡುಬಂದಿತು. ಕೊರೊನಾ ಹೇಗೆ ಬಂದಿತು ಎಂದುಕೊಂಡಾಗ ಇಬ್ಬರಿಗೂ ನೆನಪಾಗಿದ್ದು ಫೆಬ್ರವರಿ 6ರಂದು ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದು.

Vijaya Karnataka Web 16 Feb 2021, 7:43 pm

ಹೈಲೈಟ್ಸ್‌:

  • ತಗ್ಗುತ್ತಿರುವ ಕೊರೊನಾ ನಡುವೆ ಹೆಚ್ಚಾದ ಪಾಸಿಟಿವ್‌ ಕೇಸ್‌
  • ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದ ದಂಪತಿ
  • 100ಕ್ಕೂ ಹೆಚ್ಚು ಮಂದಿ ಕೂಡಲೇ ಕೊರೊನಾ ಪರೀಕ್ಷೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ಕೊರೊನಾ ವೈರಸ್
ಕೊರೊನಾ ವೈರಸ್
ಬೆಂಗಳೂರು: ರಾಜಧಾನಿ ಬೆಂಗಳೂರಿನ ಅಪಾರ್ಟ್‌ವೊಂದರಲ್ಲಿ 50ಕ್ಕೂ ಹೆಚ್ಚು ಮಂದಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದ್ದು ಈಗ ಭಾರಿ ಆತಂಕಕ್ಕೆ ಕಾರಣವಾಗಿದೆ.
ಕೊರೊನಾ ವೈರಸ್‌ ಪ್ರಕರಣಗಳು ಕಡಿಮೆಯಾಗುತ್ತಿರುವ ಬೆನ್ನಲ್ಲೇ ಈಗ ಪಾಸಿಟಿವ್‌ ಕೇಸ್‌ಗಳು ಹೆಚ್ಚಾಗುತ್ತಿರುವುದು ಭಾರಿ ಸಂಕಷ್ಟ ತಂದೊಡ್ಡಿದೆ.

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿರುವ ದಂಪತಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್‌ ವರದಿ ಪಡೆಯಬೇಕೆಂಬ ಹಂಬಲ ಈಗ ಹಲವರಿಗೆ ನಿಜಕ್ಕೂ ನೆಗೆಟಿವ್‌ ಆಗಿದೆ.

ಡೆಹರಾಡೂನ್‌ಗೆ ತೆರಳುವ ಸಲುವಾಗಿ ಬೊಮ್ಮನಹಳ್ಳಿಯಲ್ಲಿರುವ ರಮೇಶ್‌ ದಂಪತಿ (ಹೆಸರು ಬದಲಿಸಲಾಗಿದೆ) ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡಿದ್ದರು.

ಪರೀಕ್ಷಾ ವರದಿಗಳು ಬಂದಾಗ ಇಬ್ಬರಿಗೂ ಕೋವಿಡ್ ಪಾಸಿಟಿವ್‌ ಇರುವುದು ಕಂಡುಬಂದಿತು. ಕೊರೊನಾ ಹೇಗೆ ಬಂದಿತು ಎಂದುಕೊಂಡಾಗ ಇಬ್ಬರಿಗೂ ನೆನಪಾಗಿದ್ದು ಫೆಬ್ರವರಿ 6ರಂದು ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದು.

ಈ ಪಾರ್ಟಿಯಲ್ಲಿ 100ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ತಮಗೆ ಕೋವಿಡ್‌ ಪಾಸಿಟಿವ್‌ ಕಂಡುಬಂದಿರುವ ವಿಷಯವನ್ನು ಕೂಡಲೇ ಅಪಾರ್ಟ್‌ಮೆಟ್ ಅಸೋಸಿಯೇಷನ್‌ ಪದಾಧಿಕಾರಿಗಳಿಗೆ ದಂಪತಿ ತಿಳಿಸಿದರು.

ಈ ಪಾರ್ಟಿಯಲ್ಲಿ ಪಾಲ್ಗೊಂಡ ಎಲ್ಲರಿಗೂ ಕೋವಿಡ್‌ ಪರೀಕ್ಷೆ ಕಡ್ಡಾಯ ಮಾಡಲಾಯಿತು. 100ಕ್ಕೂ ಹೆಚ್ಚು ಮಂದಿ ಕೂಡಲೇ ಕೊರೊನಾ ಪರೀಕ್ಷೆ ಮಾಡಿಸಿಕೊಂಡಾಗ ಅದರಲ್ಲಿ 105 ಮಂದಿಗೆ ಕೊರೊನಾ ಪಾಸಿಟಿವ್‌ ಇರುವುದು ಪತ್ತೆಯಾಯಿತು.

ಅಪಾರ್ಟ್‌ಮೆಂಟ್‌ನಲ್ಲಿರುವ ಹಲವಾರು ಮಂದಿ ಬಿಬಿಎಂಪಿ ಕೇಂದ್ರಗಳಲ್ಲಿ ಕೋವಿಡ್‌ ಪರೀಕ್ಷೆಗೆ ಒಳಪಟ್ಟರೆ, ಹಲವಾರು ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಪರೀಕ್ಷೆ ಮಾಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ