ಆ್ಯಪ್ನಗರ

ಮಾಜಿ ಸಂಸದನ ಪುತ್ರನ ಮೇಲೆ ಬೆಂಗಳೂರು ಪಬ್ ನಲ್ಲಿ ಹಲ್ಲೆ : ಖಾಕಿಗೆ ಹೆದರಿ ಆರೋಪಿಗಳು ಪರಾರಿ

ಧಾರವಾಡದ ಮಾಜಿ ಸಂಸದರೊಬ್ಬರ ಪುತ್ರನ ಮೇಲೆ ನಾಲ್ಕೈದು ಮಂದಿ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಪಬ್ ಗೆ ತೆರಳಿದ್ದಾಗ ಈ ರೀತಿಯ ಘಟನೆ ನದೆದಿದೆ. ಈ ಸಂಬಂಧ ಮಾಜಿ ಸಂಸದರ ಪುತ್ರ ಪೊಲೀಸರಿಗೆ ದೂರು ನೀಡಿದ್ದಾನೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Vijaya Karnataka Web 28 Jan 2022, 7:25 am

ಹೈಲೈಟ್ಸ್‌:

  • ಮಾಜಿ ಸಂಸದನ ಪುತ್ರನ ಮೇಲೆ ಬೆಂಗಳೂರು ಪಬ್ ನಲ್ಲಿ ಹಲ್ಲೆ
  • ಪಬ್ ನಲ್ಲಿ ಊಟಕ್ಕೆ ತೆರಳಿದ್ದಾಗ ಗೆಳೆಯರಿಂದಲೇ ಹಲ್ಲೆ
  • ಪೊಲೀಸರು ಬರುತ್ತಿದ್ದಂತೆ ಆರೋಪಿಗಳು ಪರಾರಿ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web jpg (6)
ಬೆಂಗಳೂರು : ಕುಡಿದ ಮತ್ತಿನಲ್ಲಿ ಮಾಜಿ ಸಂಸದರೊಬ್ಬರ ಪುತ್ರನ ಮೇಲೆ ನಾಲ್ಕೈದು ಮಂದಿ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಡಾಲರ್ಸ್‌ ಕಾಲೊನಿಯ ನಿವಾಸಿ ಚಂದ್ರಶೇಖರ್‌ ಕುನ್ನೂರ್‌ ಕೊಟ್ಟ ದೂರಿನ ಆಧಾರದ ಮೇಲೆ ವಿಧಾನಸೌಧ ಪೊಲೀಸರು ಚೇತನ್‌ ಹೆಗ್ಡೆ, ಪ್ರಶಾಂತ್‌ ರೆಡ್ಡಿ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
ಧಾರವಾಡ ಕ್ಷೇತ್ರದ ಮಾಜಿ ಸಂಸದ ಮಂಜುನಾಥ್‌ ಕುನ್ನೂರ್‌ ಅವರ ಪುತ್ರರಾಗಿರುವ ಉದ್ಯಮಿ ಚಂದ್ರಶೇಖರ್‌ ಕುನ್ನೂರ್‌ ಜ. 23 ರಂದು ರಾತ್ರಿ 10 ಗಂಟೆಗೆ ಊಟಕ್ಕೆಂದು ಮೀರಜ್‌ ಹೋಟೆಲ್ ಗೆ ಸ್ನೇಹಿತರ ಜತೆ ಹೋಗಿದ್ದರು. ಪಕ್ಕದ ಟೇಬಲ್‌ನಲ್ಲಿ ಕುಳಿತಿದ್ದ ಆರೋಪಿ ಚೇತನ್‌ ಹೆಗ್ಡೆ, ಪ್ರಶಾಂತ್‌ ರೆಡ್ಡಿ ಪಬ್‌ವೊಂದಕ್ಕೆ ಊಟಕ್ಕೆ ಆಹ್ವಾನಿಸಿದ್ದರು. ಆಹ್ವಾನ ಸ್ವೀಕರಿಸಿ ಪಬ್‌ಗೆ ಚಂದ್ರಶೇಖರ್‌ ಕುನ್ನೂರ್‌ ಸ್ನೇಹಿತರೊಂದಿಗೆ ತೆರಳಿದ್ದರು.

ರಾತ್ರಿ 11 ಗಂಟೆಯಾದರೂ ಊಟ ತಂದುಕೊಟ್ಟಿಲ್ಲ. ಹೀಗಾಗಿ ಬೇಗ ಊಟ ಕೊಡುವಂತೆ ಚಂದ್ರಶೇಖರ್‌ ಪಬ್‌ ಸಿಬ್ಬಂದಿಗೆ ಸೂಚಿಸಿದ್ದರು. ಈ ವೇಳೆ ಏಕಾಏಕಿ ಚಂದ್ರಶೇಖರ್‌ ಬಳಿ ಬಂದ ಪ್ರಶಾಂತ್‌ ರೆಡ್ಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಚಂದ್ರಶೇಖರ್‌ ಕಪಾಳಕ್ಕೆ ಹೊಡೆದು ಜೀವ ಬೆದರಿಕೆ ಹಾಕಿದ್ದ. ಚೇತನ್‌ ಸಹ ಇದಕ್ಕೆ ಸಹಕರಿಸಿದ್ದ. ಆರೋಪಿಗಳಿಂದ ತಪ್ಪಿಸಿಕೊಳ್ಳಲು ಚಂದ್ರಶೇಖರ್‌ ಹೊಯ್ಸಳಕ್ಕೆ ಕರೆ ಮಾಡಿದ್ದರು. ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಆಟವಾಡುತ್ತಿದ್ದ ಬಾಲಕರ ಮೇಲೆ ಗುಂಡು ಹಾರಿಸಿದ ಬಿಹಾರದ ಸಚಿವನ ಪುತ್ರನಿಗೆ ಗ್ರಾಮಸ್ಥರಿಂದ ಹಲ್ಲೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ