ಆ್ಯಪ್ನಗರ

ಆನೇಕಲ್‌ ರೇಪ್ ಸಂತ್ರಸ್ತೆ ಬಿಚ್ಚಿಟ್ಟ ಘೋರ ಸತ್ಯ

ನವೆಂಬರ್‌ 24ರಂದು ಬೆಂಗಳೂರಿನ ಆನೇಕಲ್‌ ನಡೆದ ಲೈಂಗಿಕ ದೌರ್ಜನ್ಯದ ಬಲಿಪಶು ಸುಮಾ (ಹೆಸರು ಬದಲಾಯಿಸಲಾಗಿದೆ) ತಮಗಾದ ಘೋರ ಅನುಭವನ್ನು ಹಂಚಿಕೊಂಡಿದ್ದಾರೆ.

Vijaya Karnataka Web 13 Dec 2017, 12:52 pm
ಬೆಂಗಳೂರು: ನವೆಂಬರ್‌ 24ರಂದು ಬೆಂಗಳೂರಿನ ಆನೇಕಲ್‌ ನಡೆದ ಲೈಂಗಿಕ ದೌರ್ಜನ್ಯದ ಬಲಿಪಶು ಸುಮಾ (ಹೆಸರು ಬದಲಾಯಿಸಲಾಗಿದೆ) ತಮಗಾದ ಘೋರ ಅನುಭವನ್ನು ಹಂಚಿಕೊಂಡಿದ್ದಾರೆ.
Vijaya Karnataka Web bengaluru gang rape survivor shared horrific experience
ಆನೇಕಲ್‌ ರೇಪ್ ಸಂತ್ರಸ್ತೆ ಬಿಚ್ಚಿಟ್ಟ ಘೋರ ಸತ್ಯ


'ಆರು ಜನರು ನನ್ನ ಮೇಲೆ ಪೈಶಾಚಿಕವಾಗಿ ಎರಗಿದ್ದಲ್ಲದೆ, ಅದರಲ್ಲಿ ಮೂವರು ನನ್ನನ್ನು ಚೆಂಡಿನಂತೆ ಗೋಡೆಗೆ ಎಸೆದರು. ಅವರು ನನ್ನ ಕಾಲುಗಳನ್ನು ಕಲ್ಲಿನಿಂದ ಜಜ್ಜಿದರು, ನಾನು ನೋವಿನಿಂದ ಕಿರುಚುತ್ತಿದ್ದರೆ ಅವರು ಮೊಬೈಲ್‌ನಲ್ಲಿ ವೀಡಿಯೋ ಮಾಡುತ್ತಿದ್ದರು.

ಆರು ಜನರು ರಾತ್ರಿಯಿಡೀ ನನ್ನನ್ನು ಅತ್ಯಾಚಾರ ಮಾಡಿದರು. ಅವರು ನನ್ನನ್ನು ಕಸದಂತೆ ಎಸೆದು ಹೋದಾಗ ನನಗೆ ನಡೆಯಲೂ ಸಾಧ್ಯವಾಗುತ್ತಿರಲಿಲ್ಲ. ನನ್ನ ಮೈಯಲ್ಲಿ ಯಾವುದೇ ಬಟ್ಟೆಗಳಿರಲಿಲ್ಲ, ಎದ್ದು ನಿಲ್ಲಕ್ಕೂ ಸಾಧ್ಯವಾಗದೆ ತೆವಳುತ್ತಾ ರಸ್ತೆಯಲ್ಲಿ ಸಾಗಿದೆ. ಅಲ್ಲೊಂದು ಬಸ್‌ ಸ್ಟ್ಯಾಂಡ್‌ ಬಳಿ ರಾತ್ರಿಯಿಡೀ ಕಳೆದೆ. ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ, ನನಗೆ ಕೇಳಲೂ ಭಯವಾಗಿತ್ತು...ಕಸದ ರಾಶಿಯಲ್ಲಿ ಸಿಕ್ಕಿದ ಹರಿದ ಶರ್ಟ್‌ ಅನ್ನೇ ಧರಿಸಿದೆ' ಎಂತಾರೆ ಸುಮಾ.

ಪೈಶಾಚಿಕ ಕೃತ್ಯಕ್ಕೆ ಬಲಿಪಶುವಾದ ಸುಮಾಳ ಬಲತೊಡೆ ಗಾಯದಿಂದಾಗಿ ಊದಿ ಕೊಂಡಿತ್ತು, ಬಲಗೈಯನ್ನೂ ಮುರಿದಿದ್ದರು ರಕ್ಕಸ ಕಾಮುಕರು.

ಮುಂದೇನು ಮಾಡಬೇಕು, ಯಾರ ಸಹಾಯ ಕೇಳಬೇಕು ಎಂದು ದಿಕ್ಕು ತೋಚದೆ ರಾತ್ರಿಯಿಡೀ ಕಳೆದರು. ಬೆಳಗ್ಗೆ ಆ ದಾರಿಯಲ್ಲಿ ಹೋಗುತ್ತಿದ್ದ ಸ್ತ್ರೀ ಜಾಗೃತಿ ಸಮಿತಿಯ ಕಾರ್ಯಕರ್ತೆ ಪಾರಿಜಾತ ಅವರು ಈಕೆಯನ್ನು ಗಮನಿಸಿ ಏನಾಯಿತು ಎಂದು ಕೇಳಿದಾಗ ವಿಷಯ ಹೇಳಿದ್ದಾರೆ. ಕೂಡಲೇ ಆಂಬ್ಯುಲೆನ್ಸ್ ಕರೆಸಿ ಆಸ್ಪತ್ರೆಗೆ ಸೇರಿಸಲಾಯಿತು.

ದೈಹಿಕವಾಗಿ ಹಾಗೂ ಮಾನಸಿಕವಾಗಿ ಜರ್ಝರಿತವಾಗಿರುವ ಸುಮಾ ನಿಧಾನಕ್ಕೆ ದೈಹಿಕವಾಗಿ ಚೇತರಿಸುತ್ತಿದ್ದು ' ಇವರಿಗೆ ಸರ್ಕಾರ ನಿರ್ಭಯಾ ಫಂಡ್‌ನಿಂದ ಹಣ ನೀಡಿ ಸಹಾಯ ನೀಡಬೇಕಾಗಿದೆ' ಎನ್ನುತ್ತಾರೆ ಪಾರಿಜಾತ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ