ಆ್ಯಪ್ನಗರ

ಬೆಂಗಳೂರು ನನಗೆ ವ್ಯಕ್ತಿತ್ವ, ಜೀವನ ನೀಡಿದೆ; ನಗರದ ರಕ್ಷಣೆ ನನ್ನ ಕರ್ತವ್ಯ: ತೇಜಸ್ವಿ ಸೂರ್ಯ

ಬೆಂಗಳೂರು ಭಯೋತ್ಪಾದಕರ ತಾಣವಾಗುತ್ತಿದೆ ಎನ್ನುವ ಮೂಲಕ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ತೇಜಸ್ವಿ ಸೂರ್ಯ ತಮ್ಮ ಹೇಳಿಕೆಯನ್ನು ಬುಧವಾರ ಸಮರ್ಥಿಸಿಕೊಂಡಿದ್ದು, ಬೆಂಗಳೂರನ್ನು ನಾವೆಲ್ಲಾ ಪ್ರೀತಿಸುತ್ತೇವೆ. ನಗರಕ್ಕೆ ಹೆಚ್ಚಿನ ಭದ್ರತೆ ಹಾಗೂ ಎನ್‌ಐಎ ಸ್ಥಾಪನೆಯ ದೃಷ್ಟಿಯಿಂದ ಆ ರೀತಿ ಹೇಳಿಕೆ ನೀಡಿದ್ದೆ ಎಂದು ಹೇಳಿದ್ದಾರೆ.

Agencies 30 Sep 2020, 8:35 pm
ಬೆಂಗಳೂರು: ರಾಜ್ಯ ರಾಜಧಾನಿ ಭಯೋತ್ಪಾದಕರ ತಾಣವಾಗುತ್ತಿದೆ ಎಂದು ವಿರೋಧ ಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಿದ್ದ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ತಮ್ಮ ಹೇಳಿಕೆಗೆ ಬುಧವಾರ ಸ್ಪಷ್ಟನೆ ನೀಡಿದ್ದು, ಬೆಂಗಳೂರನ್ನು ನಾವೆಲ್ಲಾ ಪ್ರೀತಿಸುತ್ತೇವೆ. ನಗರಕ್ಕೆ ಹೆಚ್ಚಿನ ಭದ್ರತೆ ಹಾಗೂ ಎನ್‌ಐಎ ಸ್ಥಾಪನೆಯ ದೃಷ್ಟಿಯಿಂದ ಆ ರೀತಿ ಹೇಳಿದ್ದು ಎಂದು ಹೇಳಿದ್ದಾರೆ.
Vijaya Karnataka Web bengaluru gave me identity says bjps tejasvi surya after terror epicentre remark
ಬೆಂಗಳೂರು ನನಗೆ ವ್ಯಕ್ತಿತ್ವ, ಜೀವನ ನೀಡಿದೆ; ನಗರದ ರಕ್ಷಣೆ ನನ್ನ ಕರ್ತವ್ಯ: ತೇಜಸ್ವಿ ಸೂರ್ಯ


ಬುಧವಾರ ಮಾತನಾಡಿದ ತೇಜಸ್ವಿ ಸೂರ್ಯ, ನಾವೆಲ್ಲಾ ಬೆಂಗಳೂರನ್ನು ಪ್ರೀತಿಸುತ್ತೇವೆ. ಬೆಂಗಳೂರು ನನಗೊಂದು ಗುರುತನ್ನು ನೀಡಿದೆ. ದೇಶಾದ್ಯಂತ ನನ್ನನ್ನು ಬೆಂಗಳೂರಿನ ಹುಡುಗ ಎಂದು ಕರೆಯುತ್ತಾರೆ. ನನಗೆ ಈ ನಗರ ಶಿಕ್ಷಣ, ಉದ್ಯೋಗ, ಆಹಾರವನ್ನು ನೀಡಿದೆ. ಇಲ್ಲಿನ ಜನ ನನ್ನನ್ನು ಆಯ್ಕೆ ಮಾಡಿ ಸಂಸತ್‌ಗೆ ಕಳುಹಿಸಿದ್ದಾರೆ ಎಂದು ಹೇಳಿದರು.
ನನ್ನನ್ನು ಆಯ್ಕೆ ಮಾಡಿದ ಜನಕ್ಕೆ ಹಾಗೂ ನನಗೆ ಇಷ್ಟೆಲ್ಲಾ ಕೊಟ್ಟ ಬೆಂಗಳೂರಿಗೆ ಮತ್ತಷ್ಟು ರಕ್ಷಣೆ ನೀಡಲು ಎನ್‌ಐಎ ಕೇಂದ್ರವನ್ನು ನಗರದಲ್ಲಿ ಸ್ಥಾಪಿಸುವಂತೆ ಗೃಹ ಸಚಿವ ಅಮಿತ್‌ ಶಾ ಅವರನ್ನು ಮನವಿ ಮಾಡಿದೆ ಎಂದು ಹೇಳಿದರು.

ಕಳೆದ ಕೆಲ ವರ್ಷಗಳಿಂದ ಭಯೋತ್ಪಾದಕ ಸಂಘಟನೆಗಳ ಸ್ಲೀಪರ್‌ ಸೆಲ್‌ಗಳನ್ನು ಬೆಂಗಳೂರಿನಲ್ಲಿ ಎನ್‌ಐಎ ಪತ್ತೆ ಮಾಡಿದೆ. ನಮ್ಮ ನಗರ ಗೂಂಡಾಗಳು ಹಾಗೂ ರಾಷ್ಟ್ರ ವಿರೋಧಿ ಸಂಘಟನೆಗಳ ಕೈಗೆ ಹೋಗಬಾರದು. ಈ ಕಾರಣದಿಂದ ನಗರದಲ್ಲಿ ರಾಷ್ಟ್ರೀಯ ತನಿಖಾ ದಳದ ಶಾಶ್ವತ ವಿಭಾಗದ ಸ್ಥಾಪನೆಯ ಅವಶ್ಯಕತೆ ಇದೆ ಎಂದು ತೇಜಸ್ವಿ ಸೂರ್ಯ ಹೇಳಿದರು.

ಬಿಜೆಪಿಗರಿಂದ ಕರ್ನಾಟಕಕ್ಕೆ ಅವಮಾನ, ತೇಜಸ್ವಿ ಸೂರ್ಯ ಹೇಳಿಕೆಗೆ ಕಾಂಗ್ರೆಸ್‌ ಕಿಡಿ

ಬೆಂಗಳೂರು ಉಗ್ರರ ತಾಣವಾಗುತ್ತಿದೆ ಎಂದು ತೇಜಸ್ವಿ ಸೂರ್ಯ ಎರಡು ದಿನಗಳ ಹಿಂದೆ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾದ ನಂತರ ಹೇಳಿಕೆ ನೀಡಿದ್ದರು. ಸೂರ್ಯ ಅವರ ಹೇಳಿಕೆಯಿಂದ ಬೆಂಗಳೂರಿಗೆ ಅವಮಾನ ಆಗುತ್ತಿದೆ ಎಂದು ಕಾಂಗ್ರೆಸ್, ಜೆಡಿಎಸ್‌ ಪಕ್ಷಗಳು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದವು.

ಬೆಂಗಳೂರಿನಲ್ಲಿ ಶೀಘ್ರ ಎನ್‌ಐಎ ಶಾಶ್ವತ ಘಟಕ ಸ್ಥಾಪನೆ: ಸಂಸದ ತೇಜಸ್ವಿ ಸೂರ್ಯ

ಕಾಂಗ್ರೆಸ್‌ ಟೀಕೆಗೆ ಪ್ರತಿಕ್ರಿಯೆ ನೀಡಿದ ತೇಜಸ್ವಿ, ಕಾಂಗ್ರೆಸ್‌ ನಾಯಕರಿಗೆ ಎನ್‌ಐಎ ಬೆಂಗಳೂರಿನಲ್ಲಿ ಸ್ಥಾಪನೆಯಾಗುವುದು ಬೇಕಿಲ್ಲ. ಏಕೆಂದರೆ ಅವರ ಪಾಲುದಾರ ಎಸ್‌ಡಿಪಿಐ ಸಂಘಟನೆ ಎನ್‌ಐಎ ಬಲೆಗೆ ಬೀಳುತ್ತದೆ ಎಂಬುದು ಅವರಿಗೆ ಗೊತ್ತಿದೆ. ಅವರ ದಲಿತ ಶಾಸಕರೊಂದಿಗೆ ನಿಲ್ಲಲು ಕಾಂಗ್ರೆಸ್‌ ನಾಯಕರಿಗೆ ಆಗಲಿಲ್ಲ. ಅಂತವರು ಬೆಂಗಳೂರಿನ ರಕ್ಷಣೆ ಬಗ್ಗೆ ನನಗೆ ಬೋಧನೆ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಬಿಹಾರದಲ್ಲಿ ‘ತೇಜಸ್ವಿ’ಗಳ ಜಟ್ಟಿ ಕಾಳಗ..! ಉದ್ಯೋಗದ ವಿಚಾರಕ್ಕೆ ಇಬ್ಬರ ನಡುವೆ ವಾಕ್ಸಮರ

ಜೆಡಿಎಸ್‌ ಕೂಡ ವೋಟ್‌ ಬ್ಯಾಂಕ್‌ ರಾಜಕಾರಣ ಮಾಡುತ್ತಿದೆ. ಅಖಂಡ ಶ್ರೀನಿವಾಸ್‌ ಮೂರ್ತಿ ಈ ಹಿಂದೆ ಜೆಡಿಎಸ್‌ನಲ್ಲಿದ್ದರು. ಅವರ ಜೊತೆ ಎಷ್ಟು ಜನ ಜೆಡಿಎಸ್‌ ನಾಯಕರು ನಿಂತುಕೊಂಡಿದ್ದಾರೆ. ಅವರಿಗೆ ತಮ್ಮ ಮತಗಳು ತಪ್ಪಿ ಹೋಗುತ್ತವೆ ಎಂಬ ಭಯವಿದೆ. ಅವರಿಗೆ ಬೆಂಗಳೂರಿನಲ್ಲಿ ಎನ್‌ಐಎ ಸ್ಥಾಪನೆಯಾಗುವುದು ಬೇಕಿಲ್ಲ ಎಂದು ತೇಜಸ್ವಿ ಸೂರ್ಯ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ