ಆ್ಯಪ್ನಗರ

ಬೆಂಗಳೂರಿನ ಮಕ್ಕಳಲ್ಲಿ ಹೆಚ್ಚಿದ ವೈರಸ್‌ ಸೋಂಕು

ನಗರದ ಮಕ್ಕಳಲ್ಲಿ ಕೈ-ಪಾದ ಮತ್ತು ಬಾಯಿಯ ಸೋಂಕು ಕಾಣಿಸಿಕೊಂಡಿದ್ದು, ವಾತಾವರಣದಲ್ಲಿನ ಬದಲಾವಣೆ, ಶಾಲೆಯಲ್ಲಿ ಸೋಂಕು ಹರಡುವುದು ಮತ್ತು ಸ್ವಚ್ಛತೆಯ ಕೊರತೆಯಿಂದಾಗಿ ರೋಗ ಹೆಚ್ಚಾಗುತ್ತಿದೆ.

Vijaya Karnataka Web 27 Aug 2018, 7:43 pm
ಬೆಂಗಳೂರು: ನಗರದ ಮಕ್ಕಳಲ್ಲಿ ಕೈ-ಪಾದ ಮತ್ತು ಬಾಯಿಯ ಸೋಂಕು ಕಾಣಿಸಿಕೊಂಡಿದ್ದು, ವಾತಾವರಣದಲ್ಲಿನ ಬದಲಾವಣೆ, ಶಾಲೆಯಲ್ಲಿ ಸೋಂಕು ಹರಡುವುದು ಮತ್ತು ಸ್ವಚ್ಛತೆಯ ಕೊರತೆಯಿಂದಾಗಿ ರೋಗ ಹೆಚ್ಚಾಗುತ್ತಿದೆ.
Vijaya Karnataka Web Kid


ಮಳೆಗಾಲದಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುವುದು ಸಾಮಾನ್ಯವಾದರೂ, ಈ ಬಾರಿ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದು, 1ರಿಂದ 5 ವರ್ಷದವರೆಗಿನ ಮಕ್ಕಳನ್ನು ಬಾಧಿಸುತ್ತಿದೆ. ಚಳಿಗಾಲದವರೆಗೆ ಈ ಕಾಯಿಲೆ ಹೆಚ್ಚಾಗಿರುತ್ತದೆ. ಕಾಕ್ಸ್‌ಸಾಕೀವೈರಸ್ ಎಂಬ ವೈರಸ್‌ನಿಂದ ಹರಡುವ ಈ ಕಾಯಿಲೆ ಪೀಡಿತರಾದ ಮಕ್ಕಳು 7ರಿಂದ 10 ದಿನದವರೆಗೆ ಸೋಂಕಿನಿಂದ ಬಳಲಿ ನಂತರ ಗುಣಮುಖರಾಗುತ್ತಾರೆ. ದೇಹದೊಳಕ್ಕೆ ವೈರಸ್ ಪ್ರವೇಶಿಸಿ 3ರಿಂ 5 ದಿನದಲ್ಲಿ ರೋಗ ಲಕ್ಷಣ ಕಾಣಿಸಿಕೊಳ್ಳುತ್ತದೆ.

ಸರ್ಜಾಪುರದ ಮದರ್‌ಹುಡ್ ಆಸ್ಪತ್ರೆಯ ವೈದ್ಯ ಡಾ, ಪ್ರಶಾಂತ್ ಗೌಡ ಪ್ರಕಾರ, ಈ ಮಳೆಗಾಲದಲ್ಲಿ ರೋಗಪೀಡಿತ ಮಕ್ಕಳ ಸಂಖ್ಯೆಯಲ್ಲಿ ಶೇ. 20 ಹೆಚ್ಚಳವಾಗಿದೆ. ಆರಂಭದಲ್ಲಿ ಜ್ವರ ಬಂದು, ನಂತರ ಗಂಟಲಿನಲ್ಲಿ ಕೆರೆತ, ದೇಹದ ಹಲವೆಡೆ ತುರಿಕೆ, ಗುಳ್ಳೆಗಳು, ಬಾಯಿಯಲ್ಲಿ ಅಲ್ಸರ್ ಕಾಣಿಸಿಕೊಳ್ಳುತ್ತದೆ. ಇದೊಂದು ಸಾಂಕ್ರಾಮಿಕ ರೋಗವಾಗಿದ್ದು, ಕಿಂಡರ್‌ಗಾರ್ಡನ್ ಮತ್ತು ಪ್ರಿ ಸ್ಕೂಲ್‌ಗಳಲ್ಲಿ ಮಕ್ಕಳ ಬಗ್ಗೆ ಎಚ್ಚರ ವಹಿಸಬೇಕು ಎಂದು ಅವರು ತಿಳಿಸಿದ್ದಾರೆ.

ತುರಿಕೆ ಮತ್ತು ಗುಳ್ಳೆ ಕಾಣಿಸಿಕೊಂಡರೆ ಅವರನ್ನು ರೋಗ ಗುಣಮುಖವಾಗುವವರೆಗೆ ಶಾಲೆಗೆ ಕಳುಹಿಸದಿರುವುದೇ ಉತ್ತಮ ಎನ್ನುವುದು ವೈದ್ಯರ ಅಭಿಪ್ರಾಯವಾಗಿದೆ. ಜತೆಗೆ ರೋಗ ಲಕ್ಷಣ ಕಾಣಿಸಿಕೊಂಡರೆ ಕೂಡಲೇ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಅವರು ಸೂಚಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ