ಆ್ಯಪ್ನಗರ

ಬೆಂಗಳೂರು: ನಾವು ಪಾಕಿಸ್ತಾನದವರು ಎಂದು ಕೂಗಾಡಿ ವ್ಯಕ್ತಿಯ ಮೇಲೆ ಹಲ್ಲೆ!

ನಾವು ಪಾಕಿಸ್ತಾನದವರು ಎಂದು ಕೂಗಾಡಿ ರಂಪಾಟ ನಡೆಸಿದ್ದಲ್ಲದೆ ವ್ಯಕ್ತಿಯ ಮೇಲೆ ಗುಂಪೊಂದು ದಾಳಿ ನಡೆಸಿರುವ ಘಟನೆ ನಡೆದಿದೆ. ಬೆಂಗಳೂರಿನ ಫೇಮಸ್‌ ಪಬ್‌ನಲ್ಲಿ ಐಪಿಎಲ್‌ ಕ್ರಿಕೆಟ್‌ ಪಂದ್ಯಾಟ ವೀಕ್ಷಣೆ ವೇಳೆ ಈ ಘಟನೆ ನಡೆದಿದೆ.

Vijaya Karnataka Web 4 Nov 2020, 1:12 pm
ಬೆಂಗಳೂರು: ನಾವು ಪಾಕಿಸ್ತಾನದವರು ಎಂದು ಕೂಗಾಡಿದ್ದ ಗುಂಪೊಂದು ಗುತ್ತಿಗೆದಾರ ವಿ.ಟಿ. ತಿಲಕ್‌ ಎಂಬುವರ ಮೇಲೆ ಹಲ್ಲೆಮಾಡಿದ್ದು, ಈ ಸಂಬಂಧ ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ''ಅ.13ರಂದು ರಾತ್ರಿ ಈ ಘಟನೆ ನಡೆದಿದೆ. ಗಾಯಾಳು ತಿಲಕ್‌ ನೀಡಿರುವ ದೂರು ಆಧರಿಸಿ ಆರೋಪಿಗಳಾದ ಅಕ್ಷತ್‌ ಜೈನ್‌, ಜೆ. ಕೊಠಾರಿ ಹಾಗೂ ಇತರರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ' ಎಂದು ಪೊಲೀರು ಹೇಳಿದರು.
Vijaya Karnataka Web assault
ಸಾಂದರ್ಭಿಕ ಚಿತ್ರ


''ದೂರುದಾರ ತಿಲಕ್‌ ಹಾಗೂ ಸ್ನೇಹಿತರು ಠಾಣೆ ವ್ಯಾಪ್ತಿಯ ಪಬ್‌ವೊಂದಕ್ಕೆ ಹೋಗಿದ್ದರು. ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿ ವೀಕ್ಷಿಸುತ್ತಿದ್ದರು. ಅವರನ್ನು ಗುರಾಯಿಸಿದ್ದ ಆರೋಪಿಗಳು, ಹತ್ತಿರ ಬಂದು ನಿಂದಿಸಿದ್ದರು. 'ನೀವು ಬೆಂಗಳೂರಿನವರಾ' ಎಂದು ದೂರುದಾರ ಕೇಳಿದ್ದರು.

ಈ ವೇಳೆ ಆರೋಪಿಗಳು 'ನಾವು ಪಾಕಿಸ್ತಾನದವರು' ಎಂದು ಕೂಗಾಡಿದ್ದರು. ಕೆಲ ಸಮಯದ ನಂತರ ಪಬ್‌ನ ಕೊಠಡಿಯೊಂದರಲ್ಲಿ ತಿಲಕ್‌ ನಿಂತಿದ್ದರು. ಅಲ್ಲಿಗೆ ಹೋದ ಆರೋಪಿಗಳು, ಅವರ ಜತೆ ಜಗಳ ತೆಗೆದು ಹಲ್ಲೆ ಮಾಡಿದ್ದಾರೆ. ಟೀ ಶರ್ಟ್‌ ಹಿಡಿದು ಎಳೆದಾಡಿ ಜೀವ ಬೆದರಿಕೆ ಹಾಕಿದ್ದಾರೆ,'' ಎಂದು ಪೊಲೀಸರು ತಿಳಿಸಿದರು.

ಮತಯಂತ್ರದಲ್ಲಿ ಭದ್ರವಾಗಿದೆ ಅಭ್ಯರ್ಥಿಗಳ ಭವಿಷ್ಯ, ಸ್ಟ್ರಾಂಗ್‌ ರೂಂಗೆ ಮೂರು ಹಂತದ ಭದ್ರತೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ