ಆ್ಯಪ್ನಗರ

ಬೆಂಗಳೂರಲ್ಲಿ ಮತ್ತೆ ಕಾಮುಕರ ಅಟ್ಟಹಾಸ

ಕಮ್ಮನಹಳ್ಳಿಯಲ್ಲಿ ಹೊಸ ವರ್ಷದ ರಾತ್ರಿ ಯುವತಿ ಮೇಲೆ ದಾಳಿ ನಡೆಸಿದ ಕಾಮುಕರ ಅಟ್ಟಹಾಸದ ಕಹಿ ನೆನಪು ಹಸಿಯಾಗಿರುವಾಗಲೇ ಮತ್ತೊಂದು ಆಘಾತಕಾರಿ ಲೈಂಗಿಕ ದೌರ್ಜನ್ಯ ಪ್ರಕರಣ ಬೆಂಗಳೂರಿನಲ್ಲಿ ಶುಕ್ರವಾರ ನಸುಕಿನ ಜಾವ ಸಂಭವಿಸಿದೆ.

ವಿಕ ಸುದ್ದಿಲೋಕ 7 Jan 2017, 7:42 am
ಬೆಂಗಳೂರು: ಕಮ್ಮನಹಳ್ಳಿಯಲ್ಲಿ ಹೊಸ ವರ್ಷದ ರಾತ್ರಿ ಯುವತಿ ಮೇಲೆ ದಾಳಿ ನಡೆಸಿದ ಕಾಮುಕರ ಅಟ್ಟಹಾಸದ ಕಹಿ ನೆನಪು ಹಸಿಯಾಗಿರುವಾಗಲೇ ಮತ್ತೊಂದು ಆಘಾತಕಾರಿ ಲೈಂಗಿಕ ದೌರ್ಜನ್ಯ ಪ್ರಕರಣ ಬೆಂಗಳೂರಿನಲ್ಲಿ ಶುಕ್ರವಾರ ನಸುಕಿನ ಜಾವ ಸಂಭವಿಸಿದೆ.
Vijaya Karnataka Web bengaluru molestation person kissing woman in road
ಬೆಂಗಳೂರಲ್ಲಿ ಮತ್ತೆ ಕಾಮುಕರ ಅಟ್ಟಹಾಸ


ಕಚೇರಿ ಕೆಲಸಕ್ಕೆ ತೆರಳುತ್ತಿದ್ದ ಯುವತಿಯ ಮೇಲೆ ಕಾಮುಕನೊಬ್ಬ ದಾಳಿ ನಡೆಸಿ ತುಟಿ ಮತ್ತು ನಾಲಿಗೆ ಕಚ್ಚಿದ್ದಾನೆ. ಕೈ, ಕಾಲು ಹಾಗೂ ಮೈಗೆ ಪರಚಿ ಗಾಯಗೊಳಿಸಿದ್ದಾನೆ. ಯುವತಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾಳೆ. ಸಾಮಾಜಿಕ ಕಾರ್ಯಕರ್ತರೊಬ್ಬರು ಈ ಘಟನೆಯನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ. ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿದ ಪೊಲೀಸರು, ಯುವತಿಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಮಾಹಿತಿ ಪಡೆದಿದ್ದಾರೆ. ದುಷ್ಕರ್ಮಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

ಕೆ.ಜಿ.ಹಳ್ಳಿಯ ಟ್ಯಾನರಿ ರಸ್ತೆಯ ಮನೆಯೊಂದರ ಮುಂದೆ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಈ ಸಂಬಂಧ ಕೆ.ಜಿ.ಹಳ್ಳಿ ಪೊಲೀಸ್‌ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ.

ಬುರ್ಖಾ ಧರಿಸಿದ್ದ ಯುವತಿ

ಮಹಾರಾಷ್ಟ್ರ ಎಸ್‌ಪಿ ಶಾಸಕ ಅಬು ಅಜ್ಮಿ ಸೇರಿದಂತೆ ಕೆಲ ರಾಜಕಾರಣಿಗಳು, ಮಹಿಳೆ ಧರಿಸುವ ಸ್ಕರ್ಟ್‌ ಹಾಗೂ ಮೈ ಕಾಣಿಸುವ ವಸ್ತ್ರಗಳಿಂದಲೇ ಲೈಂಗಿಕ ದೌರ್ಜನ್ಯಗಳು ನಡೆಯುತ್ತವೆ ಎಂದು ವಾದಿಸಿದ್ದರು. ಆದರೆ, ಈ ಪ್ರಕರಣದಲ್ಲಿ ದಾಳಿಗೊಳಗಾದ ಯುವತಿ ಬುರ್ಖಾ ಧರಿಸಿದ್ದಳು. ಲೈಂಗಿಕ ದೌರ್ಜನ್ಯಕ್ಕೆ ಉಡುಪೊಂದೇ ಕಾರಣವಲ್ಲ ಎಂಬುದನ್ನು ಈ ಪ್ರಕರಣ ಸಾರಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ