ಆ್ಯಪ್ನಗರ

ಬಿಎಂಟಿಸಿ ಬಳಸೋಕೆ ಸಿದ್ಧ..! ಆದ್ರೆ.. ಮೊದಲು ದರ ಕಡಿಮೆ ಮಾಡಿ..!

ಬೆಂಗಳೂರು: ಬೆಂಗಳೂರು ಬಸ್‌ ಪ್ರಯಾಣಿಕರ ವೇದಿಕೆಯ ಸದಸ್ಯರು ನಡೆಸಿದ ಸಮೀಕ್ಷೆಯಲ್ಲಿ ಶೇ.80ರಷ್ಟು ಮಂದಿ ಬಿಎಂಟಿಸಿ ಪ್ರಯಾಣ ದರ ಇಳಿಕೆಗೆ ಒತ್ತಾಯಿಸಿದ್ದಾರೆ. ದರ ಕಡಿಮೆ ಮಾಡಿದರೆ, ವೈಯಕ್ತಿಕ ವಾಹನಗಳನ್ನು ಬದಿಗೊತ್ತಿ ಬಸ್‌ಗಳಲ್ಲಿ ಪ್ರಯಾಣಿಸಲು ಸಿದ್ಧರಿದ್ದೇವೆ ಎಂದು ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Vijaya Karnataka Web 19 Feb 2020, 8:11 pm
ಬೆಂಗಳೂರು: ಬೆಂಗಳೂರು ಬಸ್‌ ಪ್ರಯಾಣಿಕರ ವೇದಿಕೆಯ ಸದಸ್ಯರು ನಡೆಸಿದ ಸಮೀಕ್ಷೆಯಲ್ಲಿ ಶೇ.80ರಷ್ಟು ಮಂದಿ ಬಿಎಂಟಿಸಿ ಪ್ರಯಾಣ ದರ ಇಳಿಕೆಗೆ ಒತ್ತಾಯಿಸಿದ್ದಾರೆ. ದರ ಕಡಿಮೆ ಮಾಡಿದರೆ, ವೈಯಕ್ತಿಕ ವಾಹನಗಳನ್ನು ಬದಿಗೊತ್ತಿ ಬಸ್‌ಗಳಲ್ಲಿ ಪ್ರಯಾಣಿಸಲು ಸಿದ್ಧರಿದ್ದೇವೆ ಎಂದು ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Vijaya Karnataka Web bengaluru people willing to travel by bmtc bus only if price slashed
ಬಿಎಂಟಿಸಿ ಬಳಸೋಕೆ ಸಿದ್ಧ..! ಆದ್ರೆ.. ಮೊದಲು ದರ ಕಡಿಮೆ ಮಾಡಿ..!



​ಎಲ್ಲಿ ನಡೆಯಿತು ಈ ಸಮೀಕ್ಷೆ..?

ಬಸ್ ಪ್ರಯಾಣಿಕರವೇದಿಕೆಯ ಸದಸ್ಯರು ಬಸ್‌ ನಿಲ್ದಾಣ, ಕಾರ್ಮಿಕರ ಕೆಲಸದ ಸ್ಥಳ ಮತ್ತು ಮನೆಗಳ ಬಳಿ ನಡೆಸಿದ ಸಮೀಕ್ಷೆಯಲ್ಲಿ 95 ಮಂದಿ ಪ್ರತಿಕ್ರಿಯಿಸಿದ್ದಾರೆ. ಇದರಲ್ಲಿ ಶೇ.56ರಷ್ಟು ಮಂದಿ ಪ್ರಯಾಣಕ್ಕೆ ಬಸ್‌ ಬಳಸುವವರು ಮತ್ತು ಶೇ.44ರಷ್ಟು ಮಂದಿ ದ್ವಿಚಕ್ರ ವಾಹನ, ಆಟೋ, ಮೆಟ್ರೊದಲ್ಲಿ ಸಂಚರಿಸುತ್ತಿದ್ದಾರೆ. ಪ್ರಯಾಣ ದರ ಕಡಿಮೆ ಮಾಡಿದರೆ, ಪ್ರಯಾಣಕ್ಕೆ ಬಸ್‌ಗಳನ್ನೇ ಅವಲಂಬಿಸುವುದಾಗಿ ಶೇ.41ರಷ್ಟು ಮಂದಿ ಹೇಳಿದ್ದಾರೆ.

​ಸ್ವಂತ ವಾಹನ ಬಳಸಿದ್ರೆ ಖರ್ಚು ಕಡಿಮೆ..!

ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸುವವರು ತಮ್ಮ ಮಾಸಿಕ ಆದಾಯದಲ್ಲಿ ಶೇ.21ರಷ್ಟನ್ನು ಪ್ರಯಾಣಕ್ಕಾಗಿ ಖರ್ಚು ಮಾಡುತ್ತಿದ್ದಾರೆ. ಇತರೆ ವಾಹನ ಬಳಸುವವರು ಕೇವಲ ಶೇ.9.5ರಷ್ಟನ್ನು ಮಾತ್ರ ವೆಚ್ಚ ಮಾಡುತ್ತಿದ್ದಾರೆ. ಅಧಿಕ ಪ್ರಯಾಣ ದರ, ಬಸ್‌ಗಳ ಕೊರತೆ, ಸಕಾಲಕ್ಕೆ ಸಿಗದ ಬಸ್‌ ಸೇವೆ ಮತ್ತು ಸಂಚಾರ ದಟ್ಟಣೆಯಿಂದ ಗಮ್ಯ ಸ್ಥಳ ತಲುಪುವುದು ತಡವಾಗುತ್ತಿದೆ ಎಂಬುದರ ಕುರಿತು ಹಲವರು ಬೆಳಕು ಚೆಲ್ಲಿದ್ದಾರೆ.

​ಬಸ್‌ಗಿಂತಾ ದ್ವಿಚಕ್ರ ವಾಹನವೇ ಓಕೆ..!

ಶೇ.17.3ರಷ್ಟು ಮಂದಿ ಬಸ್‌ ಪ್ರಯಾಣದಿಂದ ತುಂಬಾ ಅನುಕೂಲವಿದೆ ಎಂದಿದ್ದಾರೆ. ಸುರಕ್ಷತೆ ಮತ್ತು ದೂರದ ಪ್ರಯಾಣಕ್ಕೆ ಬಸ್‌ಗಳೇ ಸೂಕ್ತ ಎಂದು ಶೇ.5.8ರಷ್ಟು ಮಂದಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಬಸ್‌ ಪ್ರಯಾಣ ದರವು ದ್ವಿಚಕ್ರ ವಾಹನದಲ್ಲಿ ಸಂಚಾರಕ್ಕೆ ತಗಲುವ ವೆಚ್ಚಕ್ಕಿಂತ ಜಾಸ್ತಿ ಇದೆ. ಹೀಗಾಗಿ, ಬಹುತೇಕರು ಪ್ರಯಾಣಕ್ಕೆ ದ್ವಿಚಕ್ರ ವಾಹನಗಳನ್ನೇ ಅವಲಂಬಿಸುತ್ತಿದ್ದಾರೆ ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ.

​​ಬಸ್ ಪ್ರಯಾಣ ದರ ಕಡಿತವೊಂದೇ ಈಗಿರುವ ದಾರಿ..!

‘ಬಸ್‌ ಪ್ರಯಾಣ ದರ ಇಳಿಕೆ ಮಾಡಿದರೆ, ದ್ವಿಚಕ್ರ ವಾಹನ ಬಳಸುವವರ ಸಂಖ್ಯೆ ಕಡಿಮೆಯಾಗಲಿದೆ. ಬಹುತೇಕರು ಪ್ರಯಾಣಕ್ಕೆ ಬಸ್‌ಗಳನ್ನೇ ಅವಲಂಬಿಸಲಿದ್ದಾರೆ. ಹಾಗೆಯೇ, ಈ ವರ್ಷ ಹೆಚ್ಚುವರಿಯಾಗಿ 3 ಸಾವಿರ ಬಸ್‌ಗಳ ಖರೀದಿಗೆ ಸರಕಾರ ಆರ್ಥಿಕ ನೆರವು ನೀಡಬೇಕು. ಪ್ರಯಾಣ ದರ ಕಡಿಮೆ ಮಾಡಲು ಸಂಸ್ಥೆಯಲ್ಲಿ ಶುಲ್ಕ ಸ್ಥಿರೀಕರಣ ನಿಧಿಯನ್ನು ಸ್ಥಾಪಿಸಬೇಕು. ವಾಹನ ದಟ್ಟಣೆ ಜಾಸ್ತಿ ಇರುವ ರಸ್ತೆಗಳಲ್ಲಿ ಬಸ್‌ ಆದ್ಯತಾ ಪಥಗಳನ್ನು ನಿರ್ಮಿಸಬೇಕು’ ಎಂದು ವೇದಿಕೆಯ ಸದಸ್ಯ ವಿನಯ್‌ ಶ್ರೀನಿವಾಸ್‌ ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ