ಆ್ಯಪ್ನಗರ

ಬೆಂಗಳೂರು: ಡ್ರಗ್ಸ್‌ ಕೇಸ್‌ನಲ್ಲಿ ಇಬ್ಬರ ಬಂಧನ; 10 ಲಕ್ಷ ರೂ. ಮೌಲ್ಯದ ಮಾದಕವಸ್ತು ವಶ

ಡ್ರಗ್ಸ್‌ ಪೆಡ್ಲರ್‌ಗಳಾದ ಅನೂಜ್‌ ಮತ್ತು ಹರ್ಷವರ್ಧನ್‌ ಎಂಬುವರ ಕಡೆಯಿಂದ ಕಡಿಮೆ ಬೆಲೆಗೆ ಖರೀದಿಸಿ, ಮಾರಾಟ ಮಾಡುತ್ತಿದ್ದೆವು ಎಂದು ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ತಲೆಮರೆಸಿಕೊಂಡ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಸಿಸಿಬಿ ತಿಳಿಸಿದೆ.

Vijaya Karnataka Web 4 Apr 2021, 8:46 am
ಬೆಂಗಳೂರು: ಮಾದಕವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 10 ಲಕ್ಷ ರೂ. ಮೌಲ್ಯದ ಎಕ್ಸ್‌ಟೆಸಿ ಟ್ಯಾಬ್ಲೆಟ್ಸ್‌, ಎಲ್‌ಎಸ್‌ಡಿ ಸ್ಟ್ರಿಫ್ಸ್‌ ವಶಪಡಿಸಿಕೊಂಡಿದ್ದಾರೆ.
Vijaya Karnataka Web police arrest


ಬನಶಂಕರಿ ಪೊಲೀಸ್‌ ಠಾಣೆ ವ್ಯಾಪ್ತಿಯ ಕೆ.ಆರ್‌.ರಸ್ತೆಯ ಅಕ್ಷ ಆಸ್ಪತ್ರೆ ಸಮೀಪ ಫುಟ್‌ಪಾತ್‌ ಮೇಲೆ ಮಾದಕವಸ್ತು ಮಾರುತ್ತಿರುವ ಮಾಹಿತಿ ಸಿಕ್ಕಿತ್ತು. ಕಾರ್ಯಾಚರಣೆ ನಡೆಸಿದ ಸಿಸಿಬಿ ಮಾದಕದ್ರವ್ಯ ನಿಗ್ರಹ ದಳದ ತಂಡ, ಜಯನಗರ ನಿವಾಸಿ ಜಿದಾನೆ ಸೌದ್‌(23) ಮತ್ತು ಬನಶಂಕರಿ ನಿವಾಸಿ ನಾಗರಾಜ್‌ ರಾವ್‌(22) ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ 100 ಎಕ್ಸ್‌ಟೆಸಿ ಮಾತ್ರೆಗಳು, 100 ಎಲ್‌ಎಸ್‌ಟಿ ಸ್ಟ್ರಿಫ್ಸ್‌, 2 ಮೊಬೈಲ್‌ ಫೋನ್‌ಗಳು ಪತ್ತೆಯಾಗಿವೆ.
ಸಿ.ಡಿ ಸಂತ್ರಸ್ತೆ ಪರ ವಕೀಲ ಮಂಜುನಾಥ್‌ಗೆ ಕಂಟಕ; ವಿಚಾರಣೆ ಮುಗಿಯುವವರೆಗೆ ವೃತ್ತಿಯಿಂದ ಸಸ್ಪೆಂಡ್‌!
ಡ್ರಗ್ಸ್‌ ಪೆಡ್ಲರ್‌ಗಳಾದ ಅನೂಜ್‌ ಮತ್ತು ಹರ್ಷವರ್ಧನ್‌ ಎಂಬುವರ ಕಡೆಯಿಂದ ಕಡಿಮೆ ಬೆಲೆಗೆ ಖರೀದಿಸಿ, ಮಾರಾಟ ಮಾಡುತ್ತಿದ್ದೆವು ಎಂದು ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ತಲೆಮರೆಸಿಕೊಂಡ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಸಿಸಿಬಿ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ