ಬೆಸ್ಕಾಂನ 24/7 ಸಹಾಯವಾಣಿ ವಿಭಾಗದ 8 ಮಂದಿಗೆ ಕೊರೊನಾ; ಸೀಲ್ಡೌನ್
ಸಹಾಯವಾಣಿಯಲ್ಲಿ ಕೆಲಸ ಮಾಡುತ್ತಿದ್ದ ಎಂಟು ಸಿಬ್ಬಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಇದರಿಂದಾಗಿ ಗ್ರಾಹಕರು ವಿದ್ಯುತ್ ಸಂಬಂಧಿತ ದೂರುಗಳಿಗಿಗಾಗಿ ಸಂಬಂಧಪಟ್ಟ ಪ್ರದೇಶದ ಬೆಸ್ಕಾಂ ಸಿಬ್ಬಂದಿಗಳನ್ನು ಸಂಪರ್ಕಿಸುವಂತೆ ಕೋರಲಾಗಿದೆ.
Vijaya Karnataka Web 18 Jul 2020, 11:57 pm
ಬೆಂಗಳೂರು: ನಗರದ ಕೆ.ಆರ್.ವೃತ್ತದ ಬಳಿ ಕಾರ್ಯಾಚರಿಸುತ್ತಿರುವ ಬೆಸ್ಕಾಂನ 24/7 ಸಹಾಯವಾಣಿ ವಿಭಾಗವನ್ನು ಎರಡು ದಿನಗಳ ಕಾಲ ಸೀಲ್ಡೌನ್ ಮಾಡಲಾಗಿದೆ.
ಸಹಾಯವಾಣಿಯಲ್ಲಿ ಕೆಲಸ ಮಾಡುತ್ತಿದ್ದ ಎಂಟು ಸಿಬ್ಬಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಇದರಿಂದಾಗಿ ಗ್ರಾಹಕರು ವಿದ್ಯುತ್ ಸಂಬಂಧಿತ ದೂರುಗಳಿಗಿಗಾಗಿ ಸಂಬಂಧಪಟ್ಟ ಪ್ರದೇಶದ ಬೆಸ್ಕಾಂ ಸಿಬ್ಬಂದಿಗಳನ್ನು ಸಂಪರ್ಕಿಸುವಂತೆ ಕೋರಲಾಗಿದೆ. ಸಂಸ್ಥೆಯ ಜಾಲತಾಣ (www.bescom.karnataka.gov.in)ದಲ್ಲಿ ವಲಯವಾರು ಅಧಿಕಾರಿಗಳ ದೂರವಾಣಿ ಸಂಖ್ಯೆ ಲಭ್ಯವಿದ್ದು, ಅದನ್ನು ಬಳಸಿಕೊಳ್ಳಬಹುದು.
ಕೋವಿಡ್-19 ಆಸ್ಪತ್ರೆ ಪ್ರವೇಶ ನಿರಾಕರಣೆಗೆ ಸಂಬಂಧಿತ ಕುಂದು-ಕೊರತೆಗಾಗಿ ವ್ಯಾಟ್ಸ್ಅಪ್ ಸಂಖ್ಯೆ: 9480812450 ಅಥವಾ 1912covidhelpline@gmail.comಗೆ ಇ-ಮೇಲ್ ಕಳುಹಿಸಬಹುದು ಎಂದು ಬೆಸ್ಕಾಂ ಗ್ರಾಹಕ ವ್ಯವಹಾರಗಳ ವಿಭಾಗದ ಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದಾರೆ.