ಆ್ಯಪ್ನಗರ

ಹೆಣ್ಣೂರಿನಲ್ಲಿ ಅತಿ ಎತ್ತರದ ಯೇಸು ಪ್ರತಿಮೆ

ಅಚ್ಚರಿ ಬೇಡ, ಯೇಸುವಿನ ಅಂಥ ಪ್ರತಿಮೆಯೊಂದು ಹೆಣ್ಣೂರಿನ ಗೆತ್ಸೆಮನಿ ತೋಟದ ಪುಟ್ಟ ಬೆಟ್ಟದಲ್ಲಿನ 'ಮೌಂಟ್‌ ಆಲಿವ್ಸ್‌' ಪ್ರಾರ್ಥನಾ ಮಂದಿರದ ಮೇಲೆ ಅನಾವರಣಕ್ಕೆ ಸಿದ್ಧವಾಗಿದೆ.

Vijaya Karnataka Web 3 Dec 2018, 5:00 am
ಬೆಂಗಳೂರು: ನಗರದಲ್ಲಿ ಯೇಸು ಪುನರುತ್ಥಾನಗೊಂಡಿದ್ದಾರೆæ !
Vijaya Karnataka Web BNG-0212-2-2-IMG_7017


ಅಚ್ಚರಿ ಬೇಡ, ಯೇಸುವಿನ ಅಂಥ ಪ್ರತಿಮೆಯೊಂದು ಹೆಣ್ಣೂರಿನ ಗೆತ್ಸೆಮನಿ ತೋಟದ ಪುಟ್ಟ ಬೆಟ್ಟದಲ್ಲಿನ 'ಮೌಂಟ್‌ ಆಲಿವ್ಸ್‌' ಪ್ರಾರ್ಥನಾ ಮಂದಿರದ ಮೇಲೆ ಅನಾವರಣಕ್ಕೆ ಸಿದ್ಧವಾಗಿದೆ.

ಯೇಸು ಕ್ರಿಸ್ತರು ಶಿಲುಬೆಯ ಮರಣದ ಮೂರು ದಿನಗಳ ಬಳಿಕ ಪುನರುತ್ಥಾನ ಹೊಂದಿದರು. ಯೇಸುವಿನ ಪುನರುತ್ಥಾನ ಹಾಗೂ ಶಾಂತಿ, ಪ್ರೀತಿ, ಸಹನೆಗಳ ಕುರಿತು ಜನರಿಗೆ ತಿಳಿಸುವ ಉದ್ದೇಶದಿಂದ ಪುಟ್ಟ ಬೆಟ್ಟದ ಮೇಲೆ ಎತ್ತರದ ಪ್ರತಿಮೆ ಸ್ಥಾಪಿಸುವ ಕನಸನ್ನು ಸಮಾಜ ಸೇವಕ ದಿ. ಎಸ್‌.ಪಿ. ಫ್ರಾನ್ಸಿಸ್‌ ಅವರು ಕಂಡಿದ್ದರು. ಆ ಕನಸನ್ನು ಅವರ ಪತ್ನಿ ಮೇರಿ ಫ್ರಾನ್ಸಿಸ್‌ ಮತ್ತು ಮಕ್ಕಳು ಇದೀಗ ನನಸಾಗಿಸಿದ್ದಾರೆ.

ದಕ್ಷಿಣ ಭಾರತದ ಎತ್ತರದ ಪ್ರತಿಮೆ

35 ಅಡಿ ಎತ್ತರದ ಸುಮಾರು 20 ಟನ್‌ ತೂಕದ ಕೆನೆ ಬಣ್ಣದ ಬೃಹತ್‌ ಪ್ರತಿಮೆ ಇದಾಗಿದೆ. 65 ಲಕ್ಷ ರೂ. ವೆಚ್ಚದಲ್ಲಿ ಪ್ರತಿಮೆಯನ್ನು ನಿರ್ಮಿಸಲಾಗಿದೆ ಎನ್ನುತ್ತಾರೆ ದಿ. ಫ್ರಾನ್ಸಿಸ್‌ ಅವರ ಪುತ್ರ ಬೆಂಜಮಿನ್‌ ತೇಜಸ್ವಿ. ಈ ಪ್ರತಿಮೆಯು ನೋಡುಗರಲ್ಲಿ ಭಕ್ತಿ ಭಾವ ಮೂಡಿಸುವಂತಿದೆ. ದಕ್ಷಿಣ ಭಾರತದಲ್ಲೇ ಅತಿ ಎತ್ತರದ ಯೇಸು ಪ್ರತಿಮೆ ಇದು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದು, ಉದ್ಘಾಟನೆಗೆ ಸಿದ್ಧಗೊಂಡಿದೆ.

ಪ್ರತಿಮೆಯನ್ನು ಕೋಲ್ಕೋತ್ತಾದ ಕಲಾವಿದರಿಂದ ತಯಾರಿಸಿ ತರಲಾಗಿದೆ. ಸುಮಾರು ಒಂದೂವರೆ ವರ್ಷದ ಅವಧಿಯಲ್ಲಿ ಪ್ರತಿಮೆ ನಿರ್ಮಾಣಗೊಂಡಿದೆ.

ಸರಕಾರದಿಂದ ಹಣ ಪಡೆದಿಲ್ಲ: ''ಪ್ರತಿಮೆ ನಿರ್ಮಾಣಕ್ಕೆ ಸರಕಾರದಿಂದ ಯಾವುದೇ ರೀತಿಯ ಆರ್ಥಿಕ ನೆರವು ಪಡೆದಿಲ್ಲ. ನಮ್ಮ ತಂದೆಯವರ ಆಸೆಯನ್ನು ಈಡೇರಿಸಬೇಕೆಂಬ ಕಾಳಜಿಯಿಂದ ಮೂವರು ಮಕ್ಕಳು ಮತ್ತು ಕುಟುಂಬದವರು ಸೇರಿ ಇದನ್ನು ನಿರ್ಮಿಸಿದ್ದೇವೆ,''ಎನ್ನುತ್ತಾರೆ ಫ್ರಾನ್ಸಿಸ್‌ ಅವರ ಪುತ್ರಿ ಸುಜಾತ ಬಲರಾಂ.

''ಇಲ್ಲಿನ ಪ್ರಾರ್ಥನಾ ಮಂದಿರಕ್ಕೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ಪ್ರತಿಮೆ ವೀಕ್ಷಣೆಗೆ ಅವಕಾಶ ಒದಗಿಸಿಕೊಡಲಾಗುವುದು'' ಎಂದು ಮತ್ತೊಬ್ಬ ಪುತ್ರ ನಿರೂಪ್‌ ಫ್ರಾನ್ಸಿಸ್‌ ಹೇಳಿದರು.

ಡಿ.5ರಂದು ಪ್ರತಿಮೆ ಅನಾವರಣ: ಪುನರುತ್ಥಾನ ಹೊಂದಿದ ಕ್ರಿಸ್ತ ಪ್ರತಿಮೆಯನ್ನು ಡಿ.5ರಂದು ಬೆಳಗ್ಗೆ 11.30ಕ್ಕೆ ಬೆಂಗಳೂರು ಮಹಾಧರ್ಮಾಧ್ಯಕ್ಷ ಡಾ. ಪೀಟರ್‌ ಮಚಾಡೊ ಅನಾವರಣಗೊಳಿಸಲಿದ್ದಾರೆ.

ಸ್ಥಳ: ನಂ.113/4, ಮೌಂಟ್‌ ಆಲಿವ್ಸ್‌, ಗೆತ್ಸೆಮನಿ ತೋಟ, ಮಂತ್ರಿ ಆಸ್ಟ್ರಾ ಅಪಾರ್ಟ್‌ಮೆಂಟ್‌ ಎದುರು, ಹೆಣ್ಣೂರು ಬಂಡೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ