ಆ್ಯಪ್ನಗರ

ಸಿಗ್ನಲ್ ಜಂಪ್ ಮಾಡಲು ನಿರಾಕರಿಸಿದ್ದಕ್ಕೆ ನಡುಬೀದಿಯಲ್ಲಿ ಅತ್ಯಾಚಾರದ ಬೆದರಿಕೆ

ಸಮಾಜ ಇಷ್ಟೊಂದು ಕೆಟ್ಟು ಹೋಗಿದೆ ಎನ್ನುವುದಕ್ಕೆ ನಿದರ್ಶನ ಈ ಪ್ರಸಂಗ.

TIMESOFINDIA.COM 30 Sep 2018, 3:15 pm
ಬೆಂಗಳೂರು: ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಲು ನಿರಾಕರಿಸಿದ 26 ವರ್ಷದ ಮಹಿಳಾ ಫೋಟೋಗ್ರಾಫರ್‌ಗೆ ಮಧ್ಯವಯಸ್ಕನೊಬ್ಬ ಅತ್ಯಾಚಾರ ಎಸಗುವುದಾಗಿ ಬೆದರಿಕೆ ಒಡ್ಡಿದ ಬೆಚ್ಚಿಬೀಳಿಸುವ ಪ್ರಕರಣ ನಗರದಲ್ಲಿ ಶನಿವಾರ ವರದಿಯಾಗಿದೆ.
Vijaya Karnataka Web Police 1


" ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ತಿಲಕ್ ನಗರದಲ್ಲಿನ ಬಿಲಾಲ್ ಮಸೀದಿ ಬಳಿ ಸಾಗುತ್ತಿದ್ದಾಗ ಕೆಂಪು ಸಿಗ್ನಲ್ ಬಿದ್ದಿದ್ದರಿಂದ ಕಾರನ್ನು ನಿಲ್ಲಿಸಿಕೊಂಡಿದ್ದೆ. ನನ್ನ ಹಿಂದೆ ನಿಂತಿದ್ದ ಸ್ಕೂಟರ್ ಸವಾರ ಸಿಗ್ನಲ್ ಜಂಪ್ ಮಾಡಿ ಹೋಗುವಂತೆ ಒತ್ತಾಯಿಸುತ್ತ ಹಾರ್ನ್ ಮಾಡುತ್ತಿದ್ದ. ಆದರೆ ನಾನು ಮುಂದಕ್ಕೆ ಚಲಿಸಲಾರೆ ಎಂಬುದು ಖಾತ್ರಿಯಾದಾಗ ನನ್ನ ಮೇಲಾತ ಎಗರಾಡಿದ. ಬಳಿಕ ನನ್ನನ್ನು ಹಿಂಬಾಲಿಸಿದ ಆತ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಒಡ್ಡಿದ. ಅಷ್ಟೇ ಅಲ್ಲ ಕಾರನ್ನು ರಸ್ತೆ ಬದಿಗೆ ನಿಲ್ಲಿಸು , ಹೇಗೆ ಅತ್ಯಾಚಾರ ಮಾಡುತ್ತೇನೆ ಎಂದು ತೋರಿಸುತ್ತೇನೆ, ಎಂದು ಅಸಭ್ಯ ಮಾತುಗಳನ್ನಾಡಿದ'', ಎಂದು ಪೀಡಿತ ಯುವತಿ ಹೇಳಿದ್ದಾಳೆ.

ಕಾರಿಂದ ಇಳಿಂದು ಆತನ ಫೋಟೋ ತೆಗೆಯಲು ಪ್ರಯತ್ನಿಸಿದಾಗ ಏನು ಬೇಕಾದರೂ ಮಾಡಿಕೋ ಎಂದು ಕಿರುಚಿದ ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದಾಗ ಅಲ್ಲಿಂದ ಪರಾರಿಯಾದ. ಸುಮಾರು 1.30 ರ ಸುಮಾರಿಗೆ ಮನೆ ತಲುಪಿದ ಯುವತಿ, ತನ್ನ ಕುಟುಂಬದವರ ಬಳಿ ನಡೆದ ಸಂಗತಿಯನ್ನೆಲ್ಲ ಹೇಳಿಕೊಡಿದ್ದಾಳೆ. ಬಳಿಕ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆರೋಪಿಯ ಪೋಟೋಗಳನ್ನು ಸಹ ಪೊಲೀಸರಿಗೆ ನೀಡಿದ್ದಾಳೆ

ಆದರೆ ಆತ ಹೆಲ್ಮೆಟ್ ಹಾಕಿಕೊಂಡಿದ್ದರಿಂದ ಫೋಟೋದಲ್ಲಿ ಮುಖ ಕಾಣುತ್ತಿಲ್ಲ. ಆದರೆ ಫೋಟೋದಲ್ಲಿ ಆತನ ಬೈಕ್ ನೋಂದಣಿ ಸಂಖ್ಯೆ ಸ್ಪಷ್ಟವಾಗಿದ್ದು, ಅದನ್ನಾಧರಿಸಿ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ