ಆ್ಯಪ್ನಗರ

ಬೆಂಗಳೂರಿನಲ್ಲಿ 'ಮೇರು ಫೌಂಡೇಷನ್ ಆಫ್ ಇಂಡಿಕ್ ಆರ್ಟ್ಸ್‌' ಉದ್ಘಾಟಿಸಲಿದ್ದಾರೆ ಬಿ. ಎಲ್. ಸಂತೋಷ್

ರಂಗ ಭೂಮಿ ನಟರು, ನಿರ್ದೇಶಕರು, ಬರಹಗಾರರು, ಉದ್ಯಮಿಗಳು, ಚಿಂತಕರು, ಪತ್ರಕರ್ತರು ಹೀಗೆ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಒಂಭತ್ತು ಸ್ನೇಹಿತರು ಸೇರಿ ಈ ಸಂಸ್ಥೆಯನ್ನು ಹುಟ್ಟಿಹಾಕಿದ್ದಾರೆ.

Vijaya Karnataka Web 21 Oct 2021, 3:25 pm
ಬೆಂಗಳೂರು: ಮೇರು ಫೌಂಡೇಷನ್ ಆಫ್ ಇಂಡಿಕ್ ಆರ್ಟ್ಸ್‌ ಎಂಬ ನೂತನ ಕಲಾ ಸಂಸ್ಥೆಯು ಅಕ್ಟೋಬರ್ 25ರಂದು ಉದ್ಘಾಟನೆ ಆಗಲಿದೆ. ಅಕ್ಟೋಬರ್ 25 ಸೋಮವಾರ ಸಂಜೆ 5.30ಕ್ಕೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಅವರು ಮುಖ್ಯ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ.
Vijaya Karnataka Web BL Santosh
ಬೆಂಗಳೂರಿನಲ್ಲಿ 'ಮೇರು ಫೌಂಡೇಷನ್ ಆಫ್ ಇಂಡಿಕ್ ಆರ್ಟ್ಸ್‌' ಉದ್ಘಾಟಿಸಲಿದ್ದಾರೆ ಬಿ. ಎಲ್. ಸಂತೋಷ್


ಬೆಂಗಳೂರಿನ ಜೆ. ಪಿ. ನಗರ ಎರಡನೇ ಹಂತದಲ್ಲಿ ಇರುವ ಆರ್‌. ವಿ. ಡೆಂಟಲ್ ಕಾಲೇಜ್ ಆವರಣದ ಶಿವಾನಂದ ಶರ್ಮಾ ಕಲಾ ಕ್ಷೇತ್ರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ವಕೀಲರು, ಸಾಮಾಜಿಕ ಕಾರ್ಯಕರ್ತರು ಹಾಗೂ ಬರಹಗಾರರಾದ ಜೆ. ಸಾಯಿ ದೀಪಕ್ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಪದ್ಮ ಶ್ರೀ ಮಾತಾ ಮಂಜಮ್ಮ ಜೋಗತ್ತಿ ಅವರು ಅತಿಥಿ ಭಾಷಣಕಾರರಾಗಿ ಉಪಸ್ಥಿತರಿರುತ್ತಾರೆ.

ರಂಗ ಭೂಮಿ ನಟರು, ನಿರ್ದೇಶಕರು, ಬರಹಗಾರರು, ಉದ್ಯಮಿಗಳು, ಚಿಂತಕರು, ಪತ್ರಕರ್ತರು ಹೀಗೆ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಒಂಭತ್ತು ಸ್ನೇಹಿತರು ಸೇರಿ ಈ ಸಂಸ್ಥೆಯನ್ನು ಹುಟ್ಟಿಹಾಕಿದ್ದು, ದೇಶದ ಮೂಲ ಕಲಾ ಪ್ರಾಕಾರಗಳ ಬಗ್ಗೆ ಅಧ್ಯಯನ, ಪ್ರದರ್ಶನ, ಪ್ರಚಾರ, ದಾಖಲೀಕರಣ ಹೀಗೆ ಅನೇಕ ಮಜಲುಗಳಲ್ಲಿ ವಿಸ್ತಾರವಾಗಿ ಕೆಲಸ ಮಾಡುವ ಉದ್ದೇಶ ಹೊಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ