ಆ್ಯಪ್ನಗರ

ಯಲಹಂಕದ ಮೇಲ್ಸೇತುವೆಗೆ ಸಾವಕ೯ರ್ ಹೆಸರು ನಾಮಕರಣ ಮಾಡಿಯೇ ಸಿದ್ಧ ! ರೇಣುಕಾಚಾರ್ಯ ಟ್ವೀಟ್

ಬೆಂಗಳೂರಿನ ಯಲಹಂಕ ಸೇತುವೆಗೆ ವಿ.ಡಿ ಸಾವರ್ಕರ್‌ ಹೆಸರನ್ನು ಇಡುವ ರಾಜ್ಯ ಸರ್ಕಾರದ ನಿರ್ಧಾರ ಕುರಿತಾದ ವಿವಾದ ಮುಂದುವರಿದಿದೆ. ಈ ವಿಚಾರವಾಗಿ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಟ್ವೀಟ್‌ ಮಾಡಿದ್ದಾರೆ.

Vijaya Karnataka Web 28 May 2020, 10:47 am
ಬೆಂಗಳೂರು: ಯಲಹಂಕದ ಮೇಲ್ಸೇತುವೆಗೆ ವಿನಾಯಕ ದಾಮೋದರ್ ಸಾವರ್ಕರ್ ಹೆಸರನ್ನು ನಾಮಕರಣ ಮಾಡುವ ಕುರಿತಾದ ವಿವಾದ ಮುಂದುವರಿದಿದೆ. ಸಾವರ್ಕರ್‌ ಹೆಸರಿಡಲು ಕಾಂಗ್ರೆಸ್ ಹಾಗೂ ಜೆಡಿಎಸ್‌ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಶಾಸಕ ಹಾಗೂ ಮುಖ್ಯಮಂತ್ರಿಗಳು ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಟ್ವೀಟ್ ಮಾಡಿದ್ದು ಮೇಲ್ಸೇತುವೆಗೆ ಸಾವರ್ಕರ್‌ ಹೆಸರನ್ನು ನಾಮಕರಣ ಮಾಡಿಯೇ ಸಿದ್ಧ ಎಂದಿದ್ದಾರೆ.
Vijaya Karnataka Web mp renukacharya


ಚಂದ್ರ ಸೂಯ೯ ಇರುವುದು ಎಷ್ಟು ಸತ್ಯವೊ ಯಲಹಂಕದ ಮೇಲ್ಸೇತುವೆಗೆ ಬಿಎಸ್‌ ಯಡಿಯೂರಪ್ಪ ನೇತೃತ್ವದ ಸರ್ಕಾರ ಅವಧಿಯಲ್ಲಿ ಸಾವಕ೯ರ್ ಹೆಸರಿನಲ್ಲಿ ನಾಮಕರಣ ಮಾಡುವುದು ಅಷ್ಟೇ ಸತ್ಯ. ದೇಶದ ಅಪ್ರತಿಮ ವೀರಪುತ್ರ ಹೋರಾಟಗಾರನ ಹೆಸರು ಇಡುವ ಬದಲು ಕಾಂಗ್ರೆಸ್ - ಜೆಡಿಎಸ್ ನವರಿಗೆ ಅವರು ಓಲೈಕೆ ಮಾಡುವವರ ಹೆಸರಿಡಬೇಕಿತ್ತು ಅನ್ನಿಸುತ್ತೆ ಎಂದು ಟ್ವೀಟ್ ಮಾಡಿದ್ದಾರೆ.

ಯಲಹಂಕ‌ ಮೇಲ್ಸೆತುವೆಗೆ ಸಾವರ್ಕರ್ ಹೆಸರು, ಸರ್ಕಾರದ ನಿರ್ಧಾರಕ್ಕೆ ಸಿದ್ದರಾಮಯ್ಯ ವಿರೋಧ


ಯಲಹಂಕದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆಯ ಮೇಲ್ಸೇತುವೆಗೆ ವಿ.ಡಿ ಸಾವರ್ಕರ್ ಹೆಸರಿಡಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಸರ್ಕಾರದ ಈ ನಡೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಕೆಲವು ಕನ್ನಡ ಪರ ಸಂಘಟನೆಗಳು ಸರ್ಕಾರದ ನಡೆಯನ್ನು ಖಂಡಿಸಿ ಪ್ರತಿಭಟನೆಗೆ ಮುಂದಾಗಿದ್ದವು.

ಸರ್ಕಾರದ ನಡೆಯನ್ನು ಬಿಜೆಪಿ ಮುಖಂಡರು ಬೆಂಬಲಿಸಿದ್ದು ಸಚಿವರಾದ ಆರ್‌. ಅಶೋಕ್, ಸಿ.ಟಿ ರವಿ, ಲಕ್ಷ್ಮಣ್ ಸವದಿ ಸೇರಿದಂತೆ ಪ್ರಮುಖರು ವಿರೋಧ ಪಕ್ಷಗಳ ನಡೆಯನ್ನು ಖಂಡಿಸಿದ್ದಾರೆ. ಹೆಸರಿಡುವ ವಿಚಾರ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಕೊನೆಯ ಕ್ಷಣದಲ್ಲಿ ಉದ್ಘಾಟನಾ ಕಾರ್ಯಕ್ರಮವನ್ನು ಮುಂದೂಡಲಾಗಿದೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ