ಆ್ಯಪ್ನಗರ

ಆರ್‌.ಆರ್‌. ನಗರದಲ್ಲಿ ಸಿದ್ದರಾಮಯ್ಯ ಭಾಷಣಕ್ಕೆ ಬಿಜೆಪಿಗರಿಂದ ಅಡ್ಡಿ

ನಾನು ಪ್ರಚಾರಕ್ಕೆ ಬಂದಿರುವುದನ್ನು ಕಂಡು ಸೋಲಿನ ಭೀತಿಯಿಂದ ಬಿಜೆಪಿ ಅಭ್ಯರ್ಥಿ ಮುನಿರತ್ನ, ರೌಡಿಸಂ ಮೂಲಕ ಮತದಾರರನ್ನು ಹೆದರಿಸಲು ಪ್ರಯತ್ನಿಸುತ್ತಿದ್ದಾರೆ. ಗೂಂಡಾಗಿರಿಗೆ ನಾವು ಹೆದರುವವರಲ್ಲ. ಇದಕ್ಕೆ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ. ಹುಷಾರ್ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

Vijaya Karnataka 27 Oct 2020, 10:06 pm
ಬೆಂಗಳೂರು: ರಾಜರಾಜೇಶ್ವರನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯು ದಿನದಿಂದ ದಿನಕ್ಕೆ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ತೀವ್ರ ಸಂಘರ್ಷದ ಕಣವಾಗಿ ಮಾರ್ಪಡುತ್ತಿದೆ.
Vijaya Karnataka Web Siddaramaiah


ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಪರವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಯಶವಂತಪುರದ ಬಿ.ಕೆ.ನಗರದಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಭಾಷಣಕ್ಕೆ ಅಡ್ಡಿಪಡಿಸಿದ್ದರ ಜೊತೆಗೆ ವಾಹನಗಳಿಗೂ ತಡೆಯೊಡ್ಡಿದ ಘಟನೆ ನಡೆದಿದೆ. ಇದರಿಂದ ಕೆರಳಿದ ಸಿದ್ದರಾಮಯ್ಯ ಅವರು, "ಈ ಗುಂಡಾಗಿರಿಗೆ ಹೆದರಬೇಡಿ, ಈ ರೀತಿ ಮುಂದುವರಿದರೆ ಬಿಜೆಪಿ ಎಲ್ಲಿಯೂ ಸಭೆ ನಡೆಸಲು ಬಿಡುವುದಿಲ್ಲ, ಮೆರವಣಿಗೆಗೂ ಬಿಡುವುದಿಲ್ಲ. ಈ ರೀತಿಯ ದೌರ್ಜನ್ಯಕ್ಕೆ ಕಾಂಗ್ರೆಸ್‌ ಕಾರ್ಯಕರ್ತರು ಹೆದರುವುದಿಲ್ಲ. ತಕ್ಷಣವೇ ಅವರನ್ನು ಬಂಧಿಸದಿದ್ದರೆ ಠಾಣೆ ಮುಂದೆ ಧರಣಿ ಮಾಡಬೇಕಾಗುತ್ತದೆ," ಎಂದು ಸ್ಥಳದಲ್ಲೇ ಇದ್ದ ಪೊಲೀಸರಿಗೆ ಎಚ್ಚರಿಕೆ ನೀಡಿದರು.

ಅಷ್ಟೇ ಅಲ್ಲ ಸ್ಥಳದಿಂದ ವಾಪಸ್ ಹೋಗಲು ಒಪ್ಪದ ಸಿದ್ದರಾಮಯ್ಯ, ಪೊಲೀಸ್ ಆಯುಕ್ತ ಕಮಲ್ ಪಂತ್‌ಗೆ ಕರೆ ಮಾಡಿ ನಿಮ್ಮ ಮನೆಯ ಮುಂದೆ ಧರಣಿ ನಡೆಸುವುದಾಗಿಯೂ ಎಚ್ಚರಿಸಿದರು. ಕೊನೆಗೆ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಚದುರಿಸಿದ ಬಳಿಕ‌ ಸಿದ್ದರಾಮಯ್ಯ ಸ್ಥಳದಿಂದ ತೆರಳಿದರು.

ಕ್ರಿಮಿನಲ್‌ ಬೇಕೋ, ಸುಸಂಸ್ಕೃತರು ಬೇಕೋ- ಆರ್‌ಆರ್‌ ನಗರದಲ್ಲಿ ಸಿದ್ದರಾಮಯ್ಯ ಪ್ರಶ್ನೆ



"ಇದೊಂದು ರೀತಿ ರೌಡಿಸಂ, ಮುನಿರತ್ನ ಇವರನ್ನು ಕಳುಹಿಸಿದ್ಧಾರೆ. ನಾನು ಬಂದಿದ್ದೇನೆ, ಸೋಲುತ್ತೇನೆಂದು ಅವರಿಗೆ ಗೊತ್ತಾಗಿದೆ. ಸೋಲುವ ಭಯದಿಂದ ಈ ರೀತಿ ರೌಡಿಸಂ ಮಾಡಿಸುತ್ತಿದ್ಧಾರೆ. ಮತದಾರರಿಗೆ ಇವೆಲ್ಲಾ ಗೊತ್ತಾಗುತ್ತದೆ, ಜನ ನೋಡುತ್ತಿದ್ಧಾರೆ. ನಿಮ್ಮ ರೌಡಿಸಂ, ದೌರ್ಜನಕ್ಕೆ ಮತದಾರರು 3ನೇ ತಾರೀಖು ತಕ್ಕ ಉತ್ತರ ಕೊಡುತ್ತಾರೆ" ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ