ಆ್ಯಪ್ನಗರ

ಎಲೆಕ್ಟ್ರಾನಿಕ್‌ ಸಿಟಿ ವಿಪ್ರೊ ಕ್ಯಾಂಪಸ್‌ಗೆ ಬಿಎಂಟಿಸಿ ಬಸ್‌ ಸೇವೆ

ಬಿಎಂಟಿಸಿಯು ನಗರದ ನಾನಾ ಪ್ರದೇಶಗಳಿಂದ ಕಾರ್ಮೆಲ್‌ರಾಂ ರೈಲು ನಿಲ್ದಾಣ ಮತ್ತು ಎಲೆಕ್ಟ್ರಾನಿಕ್‌ ಸಿಟಿಯ ವಿಪ್ರೊ ಕ್ಯಾಂಪಸ್‌ಗೆ ಹೊಸದಾಗಿ ಬಸ್‌ ಸೇವೆ ಕಲ್ಪಿಸಿದೆ.

Vijaya Karnataka 1 Mar 2019, 5:00 am
ಬೆಂಗಳೂರು: ಬಿಎಂಟಿಸಿಯು ನಗರದ ನಾನಾ ಪ್ರದೇಶಗಳಿಂದ ಕಾರ್ಮೆಲ್‌ರಾಂ ರೈಲು ನಿಲ್ದಾಣ ಮತ್ತು ಎಲೆಕ್ಟ್ರಾನಿಕ್‌ ಸಿಟಿಯ ವಿಪ್ರೊ ಕ್ಯಾಂಪಸ್‌ಗೆ ಹೊಸದಾಗಿ ಬಸ್‌ ಸೇವೆ ಕಲ್ಪಿಸಿದೆ.
Vijaya Karnataka Web bmtc cutout


ಸರ್ಜಾಪುರ ರಸ್ತೆಯಲ್ಲಿರುವ ವಿಪ್ರೊ ಕ್ಯಾಂಪಸ್‌ನಲ್ಲಿ ಶುಕ್ರವಾರ ಸಂಜೆ 4ಕ್ಕೆ ಬಿಎಂಟಿಸಿ ಅಧ್ಯಕ್ಷ ಎನ್‌.ಎ.ಹ್ಯಾರೀಸ್‌ ಅವರು ಹೊಸ ಮಾರ್ಗಗಳಲ್ಲಿ ಕಾರ್ಯಾಚರಣೆಗೊಳ್ಳುವ ಬಸ್‌ಗಳಿಗೆ ಚಾಲನೆ ನೀಡಲಿದ್ದಾರೆ. 505-ಆರ್‌ ಮಾರ್ಗಸಂಖ್ಯೆಯ ಬಸ್‌ ಎಲೆಕ್ಟ್ರಾನಿಕ್‌ ಸಿಟಿ ಕ್ಯಾಂಪಸ್‌ನಿಂದ ಹೊಸ ರೋಡ್‌, ಕಸವನಹಳ್ಳಿ, ಕೈಕೊಂಡ್ರಹಳ್ಳಿ, ದೊಡ್ಡಕನ್ನಲ್ಲಿ, ನ್ಯೂ ಹಾರಿಜನ್‌ ಕಾಲೇಜು, ಇಬ್ಬಲೂರು, ಎಚ್‌ಎಸ್‌ಆರ್‌ ಲೇಔಟ್‌, ಹರಳೂರು, ಕೂಡ್ಲು ಮಾರ್ಗವಾಗಿ ಮತ್ತೆ ಕ್ಯಾಂಪಸ್‌ ತಲುಪಲಿದೆ.

ಅದೇ ರೀತಿ 505-ಆರ್‌ಎ ಮಾರ್ಗಸಂಖ್ಯೆಯ ಬಸ್‌ ಎಲೆಕ್ಟ್ರಾನಿಕ್‌ ಸಿಟಿ ವಿಪ್ರೊ ಕ್ಯಾಂಪಸ್‌ನಿಂದ ಹೊಸ ರೋಡ್‌, ಕೂಡ್ಲು, ಹರಳೂರು, ಎಚ್‌ಎಸ್‌ಆರ್‌ ಲೇಔಟ್‌, ಇಬ್ಬಲೂರು, ನ್ಯೂ ಹಾರಿಜನ್‌ ಕಾಲೇಜು, ದೊಡ್ಡ ಕನ್ನಲ್ಲಿ, ಕೈಕೊಂಡ್ರನಹಳ್ಳಿ, ಕಸವನಹಳ್ಳಿ ಮಾರ್ಗವಾಗಿ ಕ್ಯಾಂಪಸ್‌ಗೆ ಸಂಚರಿಸಲಿದೆ. ಕಾರ್ಮೆಲ್‌ರಾಂ ರೈಲು ನಿಲ್ದಾಣದಿಂದ ದೊಡ್ಡ ಕನ್ನಲ್ಲಿ, ಕಾಡು ಬೀಸನಹಳ್ಳಿ, ಬೆಳ್ಳಂದೂರು ಗೇಟ್‌, ಕೈಕೊಂಡ್ರಹಳ್ಳಿ ಮಾರ್ಗವಾಗಿ ರೈಲು ನಿಲ್ದಾಣಕ್ಕೆ ಮತ್ತೊಂದು ಬಸ್‌ ಕಾರ್ಯಾಚರಣೆಗೊಳ್ಳುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ