ಆ್ಯಪ್ನಗರ

ಯಲಹಂಕ ಕೆರೆಯಲ್ಲಿ ದೋಣಿ ವಿಹಾರಕ್ಕೆ ಚಾಲನೆ

ಇಬ್ಬರು ಕುಳಿತು ವಿಹಾರ ಮಾಡುವ 6 ಪೆಡಲ್‌ ಬೋಟ್‌, ನಾಲ್ಕು ಜನ ಕುಳಿತುಕೊಳ್ಳುವ 2 ಪೆಡಲ್‌ ಬೋಟ್‌, 12 ಜನ ಕುಳಿತುಕೊಳ್ಳುವ ರೋಹಿಂಗ್‌ ಬೋಟ್‌, 6 ಜನ ಕುಳಿತುಕೊಳ್ಳುವ ಮೋಟಾರ್‌ ಬೋಟ್‌ ಲಭ್ಯವಿದೆ.

Vijaya Karnataka 16 Jun 2019, 5:00 am
ಯಲಹಂಕ: ಯಲಹಂಕ ಕೆರೆಯಲ್ಲಿ ದೋಣಿ ವಿಹಾರಕ್ಕೆ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಶನಿವಾರ ಚಾಲನೆ ನೀಡಿದರು.
Vijaya Karnataka Web BRL-15YELAHANKA--1


ನಂತರ ಮಾತನಾಡಿದ ಅವರು, ''ಮೂರೂವರೆ ಕೋಟಿ ರೂ. ವೆಚ್ಚದಲ್ಲಿ ಯಲಹಂಕ ಕೆರೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಟೆಂಡರ್‌ ಕರೆಯಲಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ನಗರದಲ್ಲಿ ಇದೇ ಮೊದಲಿಗೆ ನಗರದಲ್ಲಿ ದೋಣಿ ವಿಹಾರ ಆರಂಭಿಸಲಾಗಿದೆ. ಮಕ್ಕಳು ಕುಟುಂಬದ ಜತೆ ಸಂತೋಷ ಪಡಲು ಇದೊಂದು ಸುಂದರ ಪ್ರವಾಸಿ ತಾಣವಾಗಿದೆ. ಅಧಿಕಾರಿಗಳ ಸಹಕಾರ, ನಾಗರಿಕರು, ಸಂಘ-ಸಂಸ್ಥೆಗಳ ಕಾಳಜಿಯಿಂದ ಇಲ್ಲಿನ ಕೆರೆಗೆ ಕಾಯಕಲ್ಪ ಒದಗಿಸಲು ಸಾಧ್ಯವಾಯಿತು,'' ಎಂದರು.

ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಉದಯಕುಮಾರ್‌, ಜಲಸಿರಿ ಸಂಘಟನೆಯ ಕಾರ್ಯಾಧ್ಯಕ್ಷ ಡಾ.ಮು.ಕೃಷ್ಣಮೂರ್ತಿ, ಅಧ್ಯಕ್ಷ ಅ.ಬ.ಶಿವಕುಮಾರ್‌, ಬಿಬಿಎಂಪಿ ಸದಸ್ಯರಾದ ಚಂದ್ರಮ್ಮ ಕೆಂಪೇಗೌಡ, ಸತೀಶ್‌, ಪದ್ಮಾವತಿ ಅಮರ್‌ನಾಥ್‌ ಮತ್ತಿತರರು ಹಾಜರಿದ್ದರು.

ಕೆರೆಯ ಆಕರ್ಷಣೆ:

ಕೆರೆಯು 300 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿದ್ದು, ಮಾಲಿನ್ಯದಿಂದ ಮುಕ್ತವಾಗಿದೆ. ಕೆರೆ ಅಂಗಳದ ಸುತ್ತ 6 ಕಿ.ಮೀ. ವಾಕಿಂಗ್‌ ಟ್ರ್ಯಾಕ್‌, ಸೈಕಲ್‌ ಟ್ರ್ಯಾಕ್‌, ಸಾಲು ಮರದ ಉದ್ಯಾನವನ, ವಾಯುವಿಹಾರಿಗಳಿಗೆ ವಿಶ್ರಾಂತಿ ಗೃಹ, ಬೆಂಚುಗಳು, ಇ-ಶೌಚಾಲಯ, ಮಹಿಳೆಯರಿಗೆ ಮತ್ತು ಪುರಷರಿಗೆ ಪ್ರತ್ಯೇಕ ಜಿಮ್‌, ಮಕ್ಕಳಿಗೆ ಆಟದ ಸಾಮಗ್ರಿಗಳು, ಕೆರೆಯ ಸುತ್ತಲೂ ಎಲ್‌ಇಡಿ ವಿದ್ಯುತ್‌ ದೀಪ, ಎಫ್‌ಎಮ್‌ ರೇಡಿಯೋ, ಕೆರೆಯ ಮಧ್ಯಭಾಗದಲ್ಲಿ ಐಲ್ಯಾಂಡ್‌, ವಿದ್ಯುತ್‌ ಬೆಳಕಿನ ಕಾರಂಜಿ, ಗಂಗಮ್ಮನ ಗುಡಿ ದೇವಸ್ಥಾನ, ಕರಗ ಮಂಟಪ ಇದೆ. ಕೆರೆ ಮಧ್ಯದಲ್ಲಿ ಐಲ್ಯಾಂಡ್‌, ಪಕ್ಷಿಧಾಮ, ಕೆರೆಯ ಸುತ್ತಲೂ ಒಂದು ಸಾವಿರ ಗಿಡಗಳನ್ನು ನೆಡಲಾಗಿದೆ. ಜತೆಗೆ ಕಾರಂಜಿ ನಿರ್ಮಿಸಲಾಗಿದೆ. ಅಲ್ಲದೇ ಕೆರೆಯ ಸುತ್ತಲೂ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.


ಯಾವ್ಯಾವ ಮಾದರಿಯ

ಬೋಟ್‌ಗಳಿವೆ?


ಇಬ್ಬರು ಕುಳಿತು ವಿಹಾರ ಮಾಡುವ 6 ಪೆಡಲ್‌ ಬೋಟ್‌, ನಾಲ್ಕು ಜನ ಕುಳಿತುಕೊಳ್ಳುವ 2 ಪೆಡಲ್‌ ಬೋಟ್‌, 12 ಜನ ಕುಳಿತುಕೊಳ್ಳುವ ರೋಹಿಂಗ್‌ ಬೋಟ್‌, 6 ಜನ ಕುಳಿತುಕೊಳ್ಳುವ ಮೋಟಾರ್‌ ಬೋಟ್‌ ಲಭ್ಯವಿದೆ. ಆರಂಭಿಕ ಕೊಡುಗೆಯಾಗಿ ಭಾನುವಾರ ಉಚಿತವಾಗಿಯೇ ದೋಣಿ ವಿಹಾರ ಮಾಡಬಹುದು. ಸೋಮವಾರದಿಂದ ದರ ನಿರ್ಧಾರವಾಗುವ ಸಾಧ್ಯತೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ