ಆ್ಯಪ್ನಗರ

​ವಿಮಾನದಲ್ಲಿ ಬಾಂಬ್: ಹುಸಿ ಬೆದರಿಕೆ ಕರೆ

ವಿಮಾನದಲ್ಲಿ ಬಾಂಬ್ ಇಟ್ಟಿರುವ ಬಗ್ಗೆ ಕೆಐಎಎಲ್ ನ ಟರ್ಮಿನಲ್‌ಗೆ ಬುಧವಾರ ಬಂದಿರುವ ಬೆದರಿಕೆ ಕರೆ ಹುಸಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಕ ಸುದ್ದಿಲೋಕ 9 Feb 2017, 1:19 pm
ಬೆಂಗಳೂರು: ವಿಮಾನದಲ್ಲಿ ಬಾಂಬ್ ಇಟ್ಟಿರುವ ಬಗ್ಗೆ ಕೆಐಎಎಲ್ ನ ಟರ್ಮಿನಲ್‌ಗೆ ಬುಧವಾರ ಬಂದಿರುವ ಬೆದರಿಕೆ ಕರೆ ಹುಸಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆದರಿಕೆ ಕರೆ ಬಂದ ಕಾರಣ ನಿಲ್ದಾಣದಲ್ಲಿ ಆತಂಕ ಸೃಷ್ಟಿಯಾಗಿತ್ತು.
Vijaya Karnataka Web bomb in flight hoax threat call
​ವಿಮಾನದಲ್ಲಿ ಬಾಂಬ್: ಹುಸಿ ಬೆದರಿಕೆ ಕರೆ


ಕೊಚ್ಚಿಯಿಂದ ಬೆಂಗಳೂರಿಗೆ ಆಗಮಿಸಿದ ಏರ್ ಏಷ್ಯಾ ವಿಮಾನ i5 1129ರಲ್ಲಿ ಬಾಂಬ್ ಇಡಲಾಗಿದೆ ಎಂದು ಕರೆ ಬಂದಿದ್ದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ 8.45 ಕ್ಕೆ ಕೆಐಎಎಲ್ ನಿಂದ ನಿರ್ಗಮಿಸಬೇಕಾಗಿದ್ದ ಈ ವಿಮಾನದ ಹಾರಾಟ ತಡೆ ಹಿಡಿಯಲಾಗಿತ್ತು. ಗುರುವಾರ ಬೆಳಗ್ಗೆ 3.102ಕ್ಕೆ ನಿರ್ಗಮಿಸಿದೆ.

ಕೊಚ್ಚಿಯಿಂದ ಆಗಮಿಸಿದ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿದ್ದು, ಸಿಐಎಸ್ಎಫ್ ಪೊಲೀಸರು ವಿಮಾನವನ್ನು ರಾತ್ರಿಯಿಡೀ ಶೋಧಿಸಿದ್ದರೂ ಬಾಂಬ್ ಪತ್ತೆಯಾಗಿಲ್ಲ. ಹುಸಿ ಬಾಂಬ್ ಕರೆ ಎಂಬ ನಿರ್ಧಾರಕ್ಕೆ ಬರಲಾಗಿದೆ.

ಕೇರಳ ಮೂಲದ ನೇಹಾ ಗೋಪಿನಾಥನ್ ಹಾಗೂ ಅರ್ಜುನ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೇರಳದ ಅಲೆಪ್ಪಿಯ ಪಬ್ಲಿಕ್ ಬೂತ್ ನಿಂದ ಕೆಐಎಎಲ್ ಟರ್ಮಿನಲ್ ಮ್ಯಾನೇಜರ್ ಗೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಪೊಲೀಸರು ವಶಕ್ಕೆ ಪಡೆದಿರುವ ಜೋಡಿ ಕೂಡ ಕೇರಳದ ಅಲೆಪ್ಪಿಯವರು. ಇವರಿಗೆ ಗುರುವಾರ ಅಲೆಪ್ಪಿಯಲ್ಲಿ ವಿವಾಹ ನಿಶ್ಚಿತಾರ್ಥ ನಿಗದಿಯಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ