ಆ್ಯಪ್ನಗರ

ಬೆಸ್ಕಾಂ ಮೀಟರ್‌ ಸಿಡಿತದಿಂದ ಗಾಯಗೊಂಡಿದ್ದ ಬಾಲಕ ಎರಡೂವರೆ ತಿಂಗಳ ನಂತರ ಚೇತರಿಕೆ

ಬೆಸ್ಕಾಂ ವಿದ್ಯುತ್‌ ಮೀಟರ್‌ ಬಳಿ ಆಟವಾಡುವಾಗ ಹಾಗೂ ಸಂಚರಿಸುವಾಗ ಬಹಳ ಎಚ್ಚರ ವಹಿಸುವುದು ಬಹಳ ಮುಖ್ಯ. ಏಕೆಂದರೆ, ಕೆಲ ತಿಂಗಳ ಹಿಂದೆ ಬಾಲ್ಕನಿಯಲ್ಲಿ ಆಡುತ್ತಿದ್ದ 6 ವರ್ಷದ ಬಾಲಕ ಬೆಸ್ಕಾಂ ಮೀಟರ್‌ ಸ್ಫೋಟದಿಂದಾಗಿ ಗಂಭೀರವಾಗಿ ಗಾಯಗೊಂಡು ಸುಮಾರು ಎರಡೂವರೆ ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ಚೇತರಿಸಿಕೊಂಡಿದ್ದಾನೆ.

Vijaya Karnataka 31 Aug 2018, 5:00 am
ಬೆಂಗಳೂರು: ಬೆಸ್ಕಾಂ ವಿದ್ಯುತ್‌ ಮೀಟರ್‌ ಬಳಿ ಆಟವಾಡುವಾಗ ಹಾಗೂ ಸಂಚರಿಸುವಾಗ ಬಹಳ ಎಚ್ಚರ ವಹಿಸುವುದು ಬಹಳ ಮುಖ್ಯ. ಏಕೆಂದರೆ, ಕೆಲ ತಿಂಗಳ ಹಿಂದೆ ಬಾಲ್ಕನಿಯಲ್ಲಿ ಆಡುತ್ತಿದ್ದ 6 ವರ್ಷದ ಬಾಲಕ ಬೆಸ್ಕಾಂ ಮೀಟರ್‌ ಸ್ಫೋಟದಿಂದಾಗಿ ಗಂಭೀರವಾಗಿ ಗಾಯಗೊಂಡು ಸುಮಾರು ಎರಡೂವರೆ ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ಚೇತರಿಸಿಕೊಂಡಿದ್ದಾನೆ.
Vijaya Karnataka Web boy recovers after two months treatment
ಬೆಸ್ಕಾಂ ಮೀಟರ್‌ ಸಿಡಿತದಿಂದ ಗಾಯಗೊಂಡಿದ್ದ ಬಾಲಕ ಎರಡೂವರೆ ತಿಂಗಳ ನಂತರ ಚೇತರಿಕೆ


ವಿದ್ಯುತ್‌ ಮೀಟರ್‌ ಸಿಡಿತದಿಂದ ಬಾಲಕನ ದೇಹದ ಶೇ. 60ರಷ್ಟು ಭಾಗ ಸುಟ್ಟು ಹೋಗಿತ್ತು. ಬಾಲಕನ ಸ್ಥಿತಿ ಚಿಂತಾಜನಕವಾಗಿತ್ತು. ಆದರೆ ಈಗ ಸುಮಾರು 11 ಬಾರಿ ಡ್ರೆಸ್ಸಿಂಗ್‌ ಹಾಗೂ ಚರ್ಮ ಬದಲಾವಣೆಯಿಂದಾಗಿ ದೇಹಸ್ಥಿತಿ ಸುಧಾರಿಸಿದೆ. ಸ್ಫೋಟದಿಂದ ಬಾಲಕ ಅಕಮಾಸ್‌ನ ಮುಖ ಸೇರಿದಂತೆ ದೇಹದ ಬಹುಭಾಗ ಸುಟ್ಟು ಹೋಗಿತ್ತು. ಇಷ್ಟು ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದ ಬಾಲಕನನ್ನು ಮಕ್ಕಳ ತೀವ್ರನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. ಮುಖದ ಭಾಗವೂ ಸುಟ್ಟಿದ್ದರಿಂದ ಸರಗವಾಗಿ ಉಸಿರಾಡಲು ವೆಂಟಿಲೇಟರ್‌ ಅಳವಡಿಸಲಾಗಿತ್ತು. ಟ್ಯೂಬ್‌ ಮೂಲಕ ದ್ರವಾಹಾರ ನೀಡಲಾಯಿತು.

ಈ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಬಾಲಕನಿಗೆ ಚಿಕಿತ್ಸೆ ನೀಡಿದ ರೈನ್‌ಬೋ ಆಸ್ಪತ್ರೆಯ ಮಕ್ಕಳ ವಿಭಾಗದ ತೀವ್ರ ನಿಗಾ ಘಟಕದ ಮುಖ್ಯಸ್ಥ ಡಾ. ರಕ್ಷಯ್‌ ಶೆಟ್ಟಿ ಮಾತನಾಡಿ, '' ಶೇ. 60ರಷ್ಟು ಸುಟ್ಟಗಾಯಗಳಿಂದ ಕೂಡಿದ್ದ ಅಕಮಾಸ್‌ಗೆ ಚಿಕಿತ್ಸೆ ನೀಡುವುದು ಸವಾಲಿನದಾಗಿತ್ತು. ಸತತ ನಿಗಾ ವಹಿಸುವಿಕೆ ಹಾಗೂ ಅಗತ್ಯ ಚಿಕಿತ್ಸೆಗಳನ್ನು ನೀಡುವ ಮೂಲಕ ಬಾಲಕನನ್ನು ಗುಣಪಡಿಸುವಲ್ಲಿ ನಮ್ಮ ತಜ್ಞರ ತಂಡ ಯಶಸ್ವಿಯಾಗಿದೆ. ಆತ ಸಂಪೂರ್ಣ ಗುಣಹೊಂದಲು ಹಾಗೂ ಸಾಮಾನ್ಯ ಸ್ಥಿತಿಗೆ ಮರಳಲು ಮತ್ತಷ್ಟು ಡ್ರೆಸ್ಸಿಂಗ್‌ ಹಾಗೂ ಚಿಕಿತ್ಸೆಯ ಅಗತ್ಯವಿದೆ,'' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ