ಆ್ಯಪ್ನಗರ

ಸ್ಕೂಟರ್‌ನಲ್ಲಿ ಮನೆಗೆ ಹೋಗ್ತಿದ್ದ ಮಹಿಳೆಗೆ ಉಗಿದು, ಕುತ್ತಿಗೆ ಹಿಸುಕಿ ಪರಾರಿಯಾದ ಕ್ಯಾಬ್ ಡ್ರೈವರ್..!

ತಮ್ಮ ಸ್ಕೂಟರ್‌ನಲ್ಲಿ ಮನೆಗೆ ಹಿಂದಿರುಗುವ ವೇಳೆ, ಹಿಂದಿನಿಂದ ಬಂದ ಒಂದು ಕಾರ್, ಆಕೆಯ ಸ್ಕೂಟರ್‌ಗೆ ಡಿಕ್ಕಿ ಹೊಡೆಯಿತು. ಏನಾಯ್ತು ಎಂದು ನೋಡುವಷ್ಟರಲ್ಲಿ ಗೌರಿ ಅವರ ಸ್ಕೂಟರ್‌ ದಾಟಿ ಮುಂದೆ ಹೋದ ಕಾರ್, ರಸ್ತೆಗೆ ಅಡ್ಡಲಾಗಿ ನಿಂತುಬಿಡ್ತು.

Bangalore Mirror Bureau 29 Jan 2020, 3:05 pm
ಬೆಂಗಳೂರು: ಆಫೀಸ್‌ನ ಕೆಲಸ ಮುಗಿಸಿ ಮನೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಆಕೆಗೆ, ಒಂದು ವಿಚಿತ್ರ ಸನ್ನಿವೇಶವನ್ನು ಎದುರಿಸುತ್ತೇನೆ ಎಂಬ ಯಾವ ಸುಳಿವೂ ಇರಲಿಲ್ಲ. ತಪ್ಪೇ ಇಲ್ಲದಿದ್ರೂ ಹಿಂಸೆಗೊಳಗಾದ ಆಕೆ, ತಮ್ಮ ಜೀವಮಾನದ ಅತಿದೊಡ್ಡ ಶಾಕ್‌ನಲ್ಲಿದ್ದಾರೆ..!
Vijaya Karnataka Web cab
ಸ್ಕೂಟರ್‌ನಲ್ಲಿ ಮನೆಗೆ ಹೋಗ್ತಿದ್ದ ಮಹಿಳೆಗೆ ಉಗಿದು, ಕುತ್ತಿಗೆ ಹಿಸುಕಿ ಪರಾರಿಯಾದ ಕ್ಯಾಬ್ ಡ್ರೈವರ್..!


ತಪ್ಪೇ ಇಲ್ಲದಿದ್ರೂ ಅನುಭವಿಸಬೇಕಾಯ್ತು ಶಿಕ್ಷೆ..!

ಬೆಂಗಳೂರಿನ ಬೆಳ್ಳಂದೂರು ನಿವಾಸಿ ಗೌರಿ (ಹೆಸರು ಬದಲಿಸಲಾಗಿದೆ) ಎಂದಿನಂತೆ ತಮ್ಮ ಕೆಲಸ ಮುಗಿಸಿ ಸಂಜೆ 4 ಗಂಟೆ ಸುಮಾರಿಗೆ ಮನೆಗೆ ಮರಳುತ್ತಿದ್ದರು. ಖಾಸಗಿ ಸಂಸ್ಥೆಯೊಂದರಲ್ಲಿ ಫೋಟೋ ಗ್ರಾಫರ್ ಆಗಿದ್ದ ಆಕೆ, ತಮ್ಮ ಸ್ಕೂಟರ್‌ನಲ್ಲಿ ಮನೆಗೆ ಹಿಂದಿರುಗುವ ವೇಳೆ, ಹಿಂದಿನಿಂದ ಬಂದ ಒಂದು ಕಾರ್, ಆಕೆಯ ಸ್ಕೂಟರ್‌ಗೆ ಡಿಕ್ಕಿ ಹೊಡೆಯಿತು. ಏನಾಯ್ತು ಎಂದು ನೋಡುವಷ್ಟರಲ್ಲಿ ಗೌರಿ ಅವರ ಸ್ಕೂಟರ್‌ ದಾಟಿ ಮುಂದೆ ಹೋದ ಕಾರ್, ರಸ್ತೆಗೆ ಅಡ್ಡಲಾಗಿ ನಿಂತುಬಿಡ್ತು.

ಕಾರ್‌ನಿಂದ ಇಳಿದ ಡ್ರೈವರ್ ಸೀದಾ ಗೌರಿ ಅವರ ಬಳಿಗೆ ಬಂದ. ಅದೊಂದು ಹಳದಿ ಬೋರ್ಡ್‌ನ ಟ್ಯಾಕ್ಸಿ ಅನ್ನೋದು ಗೌರಿ ಅವರ ಅರಿವಿಗೆ ಬಂತು. ನೇರವಾಗಿ ಗೌರಿ ಅವರ ಬಳಿಗೆ ಬಂದ ಡ್ರೈವರ್, ಏಕಾಏಕಿ ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ. ವಾಹನ ಚಲಾಯಿಸಲು ಬರುತ್ತಾ ಎಂದು ಕೇಳಿದವನೇ ಗೌರಿಯವರ ಮುಖಕ್ಕೆ ಉಗಿದ.

ಅಪಾರ್ಟ್‌ಮೆಂಟ್‌ನಲ್ಲಿ ಬಟ್ಟೆ ಒಣಗಿಸೋ ವಿಚಾರಕ್ಕೆ ಶುರುವಾದ ಜಗಳ ಕೊಲೆ ಯತ್ನದಲ್ಲಿ ಅಂತ್ಯ..!

ಡ್ರೈವರ್‌ನ ಅಸಭ್ಯ ನಡವಳಿಕೆಯಿಂದ ಸಿಟ್ಟಿಗೆದ್ದ ಗೌರಿ, ಏಕೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತೀರಿ, ಮುಖದ ಮೇಲೆ ಉಗುಳಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ. ಆಗ ಆತ ಗೌರಿಯವರ ಕುತ್ತಿಗೆಯನ್ನು ಎರಡೂ ಕೈಗಳಿಂದ ಹಿಡಿದು ಹಿಸುಕಲು ಆರಂಭಿಸಿದ. ಗಾಬರಿಗೊಂಡ ಗೌರಿ ಕೂಡಲೇ ನೆರವಿಗಾಗಿ ಕೂಗಿಕೊಂಡಿದ್ದಾರೆ. ರಸ್ತೆಯಲ್ಲಿ ಓಡಾಡುತ್ತಿದ್ದ ಹಲವರು ಕೂಡಲೇ ಗೌರಿಯವರ ನೆರವಿಗೆ ಧಾವಿಸಿದ್ದಾರೆ. ಜನ ಸೇರಲು ಆರಂಭಿಸುತ್ತಿದ್ದಂತೆಯೇ ಎಚ್ಚೆತ್ತ ಡ್ರೈವರ್ ತನ್ನ ಕಾರಿನ ಸಮೇತ ಪರಾರಿಯಾಗಿದ್ದಾನೆ.

ಮಹಿಳೆಯ ಖಾಸಗಿ ಕ್ಷಣಗಳ ವಿಡಿಯೋ ಇಟ್ಟುಕೊಂಡು ಬ್ಲಾಕ್‌ಮೇಲ್: ಮದ್ವೆಯಾಗೋದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ

ಕುತ್ತಿಗೆ ಹಿಸುಕುತ್ತಿದ್ದ ವೇಳೆ ಸಹಾಯಕ್ಕಾಗಿ ಅಂಗಲಾಚಿ ಹೇಗೋ ಜೀವ ಉಳಿಸಿಕೊಂಡ ಗೌರಿ, ಡ್ರೈವರ್ ಪರಾರಿಯಾಗುವ ವೇಳೆಗೆ ಆತನ ಕಾರ್‌ ನಂಬರ್‌ ಬರೆದುಕೊಂಡಿದ್ದಾರೆ. ಬಳಿಕ ಪೊಲೀಸ್ ಠಾಣೆಗೆ ದೂರು ನೀಡಿದ್ಧಾರೆ.

ಇದೀಗ ಪೊಲೀಸರು ಆರ್‌ಟಿಒ ನೆರವಿನೊಂದಿಗೆ ಕಾರ್‌ನ ಮಾಲೀಕರನ್ನು ಪತ್ತೆ ಹಚ್ಚುತ್ತಿದ್ದಾರೆ. ಶೀಘ್ರದಲ್ಲೇ ಚಾಲಕನನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಡೇಟಿಂಗ್ ಹೆಸರಲ್ಲಿ ಮನಸ್ಸಲ್ಲೇ ಮಂಡಿಗೆ ತಿನ್ನಿಸಿ ಟೆಕ್ಕಿಗೆ 4 ಲಕ್ಷ ರೂ. ಬ್ಲೇಡ್‌! ಎರಡೆರಡು ಸಲ ಮೋಸ ಹೋದ ಭೂಪ..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ